Times of ಕರ್ನಾಟಕ
ಕವನ
ಕವನ: ಅಳಿಸಲಾಗದ ನೆನಪು
ಅಳಿಸಲಾಗದ ನೆನಪು
ಅರಮನೆಯ ಅರಸ ನೀನಲ್ಲ
ಆದರೂ ಅರಸನಂತೆ ನನ್ನ ಬೆಳೆಸಿದೆ
ಮೊಮ್ಮಕ್ಕಳೊಡನೆ ಪ್ರೀತಿ ತೋರಿ
ಕರಗದಷ್ಟು ನೆನಪುಳಿಸಿದ ಸಾಹುಕಾರ
ಮತ್ತೆ ಮತ್ತೆ ನೆನಪಾಗುವುದು
ನಿಮ್ಮ ಆ ಪ್ರೀತಿ ತೋರಿದ ದಿನಗಳು
ಬೆಲೆ ಕಟ್ಟಲಾಗದ ಆಸ್ತಿ ನನ್ನ ಪಾಲಿಗೆ
ನನ್ನ ನೋವಿನಲ್ಲೂ ನಗುತ್ತಿರುವೆ
ನಿನ್ನ ನೆನಪಿನಾಳದಲ್ಲಿ ಹುದುಗಿ
ಬರಿಯ ಕೆಮ್ಮು ಕೆಮ್ಮುತಲಿ
ಸಾಗಿದೆ ಮಾತಾಡುತ ಆಸ್ಪತ್ರೆಗೆ
ವೈದ್ಯರ ಬೇಗ ಕರೆ ಕೆಮ್ಮು ಜೋರಾಗುತಿಹುದು
ವೈದ್ಯರು ಬರುವ ಮುಂಚೆ
ನೀನಿರಲಿಲ್ಲ
ದೇವರು ಒಂದೇ ಒಂದು ಅವಕಾಶ ನೀಡಲಿಲ್ಲ
ಹೋಗುವಾಗ...
ಕವನ
ಅಪ್ಪನ ಬಗ್ಗೆ ಒಂದಿಷ್ಟು…
ಅಪ್ಪನ ಕಣ್ಣಲ್ಲಿ
ಯಾವತ್ತೂ
ನೀರಿಲ್ಲ
ಅಪ್ಪ ನೋವು
ನುಂಗಿ
ಇಂಗಿದ ಬಾವಿ !
ನಾವು
ಅಳುವಾಗಲೆಲ್ಲಾ
ಅಪ್ಪ ಸಂತೈಸುತ್ತಿದ್ದ
ಅಪ್ಪ ಅಳುವುದಿಲ್ಲ
ಸಂತೈಸಲು
ಅಪ್ಪನಿಗೆ ಅಪ್ಪನಿಲ್ಲ !
ಅಪ್ಪ ಒಬ್ಬನೇ
ನಕ್ಕಿಲ್ಲ
ನಗುವಾಗ ನಗಿಸುತ್ತಿದ್ದ
ನೋವು ಹಂಚಲಿಲ್ಲ
ಮರೆಯಲ್ಲೇ
ನುಂಗಿದ್ದ !
ಅಮ್ಮನ ಕಣ್ಣೀರಿಗೆ
ಅಪ್ಪ ಕರಗುವ
ಮೌನಿಯಾಗಿ....
ಗೋಡೆ ನೋಡುತ್ತಾ
ಸೋತು
ಒರಗುವ !.
ಅಪ್ಪನ ಮಾತಿಗೆ
ಮನೆ ತುಂಬಾ
ಮೌನ
ಅಪ್ಪನ ಮೌನಕ್ಕೆ
ಮನೆಯೇ
ಸ್ಮಶಾನ !.
ಅಪ್ಪನ ಸಾಧನೆಗೆ
ಅಮ್ಮನಿಗೂ
ಸನ್ಮಾನ
ಅಪ್ಪ ಸೋತಾಗ
ಅಮ್ಮನಿಗೂ..
ಅನುಮಾನ !
ಅಪ್ಪ ಗಂಧದ
ಕೊರಡು...
ಮನೆ ತುಂಬಾ
ಪರಿಮಳ
ತೇದು ತೇದು
ಸವೆದಿದ್ದು
ಯಾರಿಗೂ
ತಿಳಿಯಲಿಲ್ಲ!
ಅಪ್ಪನ ಏಟು
ನಮ್ಮ ತಪ್ಪಿಗೆ
ನೋವು ಮರೆಸಿದ್ದು
ಮದ್ದಲ್ಲ....
ಅಪ್ಪನ ಅಪ್ಪುಗೆ!
ಅಪ್ಪನ ಬಗ್ಗೆ
ಒಂದಿಷ್ಟು
ಸಣ್ಣವನ ಮಾತು
ಅಪ್ಪ
ಸಣ್ಣವನಲ್ಲ
ದೇವರಿಗೂ ಗೊತ್ತು!
ಅಪ್ಪಾ ....
ಲೋಕ ಮೆಚ್ಚದಿರಬಹುದು
ನಿನ್ನ.....
ನನಗಂತೂ
ನೀನು ಅಪರಂಜಿ
ಅಪ್ಪಟ
ಚಿನ್ನ !!.
ಪ್ರತಿಯೊಬ್ಬರಿಗೂ ಅವರ...
ಕವನ
ಕವನ: ಅಮ್ಮ – ಅಪ್ಪ !
ಅಮ್ಮ - ಅಪ್ಪ !
ತಾಯಿಯು ಮಗನನ್ನು
ತನ್ನ ಕಂಕುಳಲ್ಲಿ ಕೂಡ್ರಿಸಿ
ಕೊಳ್ಳುತ್ತಾಳೆ.
ಏಕೆ ಗೊತ್ತೇ ?
ಏಕೆಂದರೆ ,
ಯಾವುದು ತನಗೆ
ಕಾಣುವುದೋ
ಅದೇ ಅವನಿಗೂ
ಕಾಣಿಸಲಿ ಎಂಬ
ಉದ್ದೇಶದಿಂದ !
ಮತ್ತು
ತಂದೆ ಮಗನನ್ನು ತನ್ನ
ಹೆಗಲಮೇಲೆ
ಕೂರಿಸಿಕೊಳ್ಳುವನು
ಏಕೆ ಗೊತ್ತೇ ?
ಏಕೆಂದರೆ ,
ಯಾವುದು ತನಗೆ
ಕಾಣಿಸುವುದಿಲ್ಲವೋ
ಅದು
ತನ್ನ ಮಗನಿಗೆ
ಕಾಣಿಸಲಿ ಎಂಬ
ಉದ್ದೇಶದಿಂದ !!ನೀಲಕಂಠ ದಾತಾರ.
ಸುದ್ದಿಗಳು
ವಿವಾದಿತ ಪೋಸ್ಟ್ – ಯುವಕನ ಬಂಧನ
ಬೀದರ - ಅನ್ಯ ಕೋಮಿನ ಕುರಿತು ಯುವಕನೊಬ್ಬ ವಿವಾದಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಿನ್ನೆ ರಾತ್ರಿ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಯಿತು.ಪ್ರವಾದಿ ಅವರ ಕುರಿತು ಅವಹೇಳನಕಾರಿ ಪೋಸ್ಟ್ ಹಿನ್ನೆಲೆಯಲ್ಲಿ ಯುವಕನ ಬಂಧನಕ್ಕೆ ನೂರಾರು ಮುಸ್ಲಿಂ ಸಮುದಾಯದವರು ಪೋಲಿಸ್ ಠಾಣೆ ಮುಂದೆ ಜಮಾವಣೆಗೊಂಡು ಯುವಕನ ಬಂಧನಕ್ಕೆ ಆಗ್ರಹಿಸಿದರು.ರಾಜಕುಮಾರ ಮಜಗೆ...
ಲೇಖನ
ಧನ್ವಂತರಿ ಕ್ಷೇತ್ರ ಕೊಕ್ಕಡ ವೈದ್ಯನಾಥೇಶ್ವರ ಕ್ಷೇತ್ರ
ಇತ್ತೀಚೆಗೆ ಮನೆಯವರೆಲ್ಲರೂ ಧರ್ಮಸ್ಥಳ. ಕುಕ್ಕೆ ಸುಬ್ರಮಣ್ಯಕ್ಕೆ ಹೋಗುವುದೆಂದು ನಿರ್ಧರಿಸಿ ನಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ಸಿಗಂದೂರು ಚೌಡೇಶ್ವರಿ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವನ್ನು ದರ್ಶನ ಮಾಡಿ ಶೃಂಗೇರಿಯಲ್ಲಿ ವಾಸ್ತವ್ಯ ಮಾಡಿದೆವು. ಆ ದಿನ ರಾತ್ರಿ ನನ್ನ ಮಗ ಆತ್ಮಾನಂದನ ಸ್ನೇಹಿತ ಸಾಯಿ ಪ್ರತೀಕ ನಾಯ್ಕ ಕರೆ ಮಾಡಿ ಧರ್ಮಸ್ಥಳದಿಂದ ಕುಕ್ಕೆ ಹೋಗುವ ಮಾರ್ಗದಲ್ಲಿ ಸೌತಡ್ಕ ಗಣಪತಿ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಮಂಗಳವಾರ (07-06-2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ನಿಮ್ಮ ಮನಸ್ಥಿತಿ ದಿನವಿಡೀ ಚೆನ್ನಾಗಿರುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ಬಗ್ಗೆ ಅನುಭವಿ ಜನರೊಂದಿಗೆ ಮಾತನಾಡಬೇಕು. ನಿಮ್ಮ ಸಂಬಂಧಿಕರ ಭೇಟಿ ನೀವು ಆಲೋಚಿಸಿದ್ದಕ್ಕಿಂತಲೂ ಹೆಚ್ಚು ಒಳ್ಳೆಯವಾಗಿರುತ್ತದೆ. ಭಾವನಾತ್ಮಕ ತೊಂದರೆಗಳು ನಿಮ್ಮನ್ನು ಕಾಡುತ್ತವೆ. ಕೆಲಸದಲ್ಲಿ ಎಲ್ಲವೂ ಚೆನ್ನಾಗಿರುವಂತೆ ತೋರುತ್ತದೆ.ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ...
ಸಿನಿಮಾ
777 Charlie (ಚಾರ್ಲಿ) Kannada Full Movie Download in HD Leaked Online
777 Charlie ಮುಂಬರುವ ಭಾರತೀಯ ಕನ್ನಡ ಭಾಷೆಯ ಸಾಹಸ ಹಾಸ್ಯ-ನಾಟಕ ಚಲನಚಿತ್ರವಾಗಿದ್ದು, ಕಿರಣರಾಜ್ ಕೆ ನಿರ್ದೇಶಿಸಿದ್ದಾರೆ. ಇದರಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಮತ್ತು ಜಿಎಸ್ ಗುಪ್ತಾ ಅವರು Paramvah Studios ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. 777 Charlie ಕಥಾವಸ್ತುವು...
ಲೇಖನ
Dr. H Narasimhaiah Information in Kannada- ಡಾ. ಎಚ್. ನರಸಿಂಹಯ್ಯ
ಜೂನ್ 6, ಪ್ರೀತಿಯ ಮೇಷ್ಟ್ರು ಎಂದು ಇಡೀ ಕನ್ನಡ ನಾಡಿನಿಂದ ಕರೆಸಿಕೊಂಡಿದ್ದ ಕನ್ನಡ ನಾಡು ಕಂಡ ಶ್ರೇಷ್ಠ ಮಾನವರಲ್ಲೊಬ್ಬರಾದ ಡಾ. ಎಚ್. ನರಸಿಂಹಯ್ಯನವರ ಜನ್ಮದಿನ.ತಮ್ಮ ವಿದ್ಯಾರ್ಥಿಗಳ ಪ್ರೀತಿಯ 'ಎಚ್. ಎನ್' ಪವಾಡಗಳನ್ನು ನಂಬಿರಲಿಲ್ಲ. ಆದರೆ ಅವರ ಬದುಕೇ ಒಂದು ಪವಾಡ. ಅವರ ಬದುಕು ಪ್ರತಿಭೆ, ಪರಿಶ್ರಮ ಮತ್ತು ಶ್ರದ್ಧೆಗಳ ತಳಹದಿಯ ಮೇಲೆ ಮೂಡಿರುವ ಸಾರ್ಥಕ...
ಲೇಖನ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನುಮ ದಿನ
ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಮುಖರು. ಅವರು ಜೂನ್ 6, 1891ರಲ್ಲಿ ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಗ್ರಾಮದಲ್ಲಿ ಜನಿಸಿದರು. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸ್ವಂತ ಪ್ರತಿಭೆಯಿಂದ 1907ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ, 1909ರಲ್ಲಿ ಎಫ್. ಎ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಎಲ್ಲ ತರಗತಿಗಳಲ್ಲೂ ಉತ್ತಮ ವಿದ್ಯಾರ್ಥಿಯಾಗಿದ್ದ ಅವರಿಗೆ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಸೋಮವಾರ (06-06-2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨🛕
ಮೇಷ ರಾಶಿ:
ಮನೆಯಲ್ಲಿ ಯಾವುದೊ ಒಂದು ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮಲ್ಲಿ ಕೆಲವು ಆಭರಣ ಅಥವಾ ಗೃಹಬಳಕೆಯ ಸಾಧನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ನಿಮ್ಮ ಶಾಶ್ವತವಾದ ಪ್ರೀತಿ ನಿಮ್ಮ ಪ್ರೀತಿಪಾತ್ರರಿಗೆ ಒಂದು ಸೆಲೆಯಾಗಿದೆ....
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



