Times of ಕರ್ನಾಟಕ

ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ರಾಜ್ಯ ಪ್ರಶಸ್ತಿ: ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ಸನ್ಮಾನ

ಕೊಪ್ಪಳ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕರು ಅಧಿಕಾರಿಗಳು ಹಾಗೂ ಕಲರವ ಶಿಕ್ಷಕರ ಸೇವಾ ಬಳಗದ ಸದಸ್ಯರಾದ ಪೌಜೀಯಾ ತರುನ್ನಮ್ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿ ಲಭಿಸಿರುವುದಕ್ಕೆ ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ಅವರ ಕಚೇರಿಯಲ್ಲಿ ಅಭಿನಂದಿಸಿದರು.ಜಿಲ್ಲಾ ಪಂಚಾಯತ್ ಸಿಇಒ ಅವರು ಮತದಾರರ ಜಾಗೃತಿಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿ ಜಾಗೃತಿ...

ಜ. 30 ರಂದು ಗಾಂಧೀಜೀ ಕುರಿತ ಲಿಖಿತ ರಸಪ್ರಶ್ನೆ ಸ್ಪರ್ಧೆ

ಬೆಂಗಳೂರು - ಸರ್ವೋದಯ ದಿನದ ಅಂಗವಾಗಿ  ಬೆಂಗಳೂರು ಶಿವಾನಂದ ವೃತ್ತದ  ಗಾಂಧೀ ಭವನದ ಬಳಿ ಇರುವ ಕರ್ನಾಟಕ ಸರ್ವೋದಯ ಮಂಡಳಿ - ಅಮರ ಬಾಪು ಚಿಂತನ ಸಹಯೋಗದಲ್ಲಿ ಗಾಂಧೀಜಿ ಕುರಿತ ಲಿಖಿತ ರಸಪ್ರಶ್ನೆ ಸ್ಪರ್ಧೆಯನ್ನು ಜನವರಿ 30 ರಂದು ಬೆಳಿಗ್ಗೆ  10.30 ಕ್ಕೆ ಏರ್ಪಡಿಸಲಾಗಿದೆ.ಅರ್ಧ ಘಂಟೆ ಕಾಲಾವಧಿಯ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು 94480...

ಮಕ್ಕಳಿಗೆ ಶಿಸ್ತು ಕಲಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪಾತ್ರ ಮುಖ್ಯವಾದದ್ದು – ರಾಜಶೇಖರ ಖೇಡಗಿ

ಸಿಂದಗಿ- ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಸನ್ನಡತೆ, ಸದ್ಭಾವನೆ, ಶಿಸ್ತು, ಮತ್ತು ಸೇವಾ ಮನೋಭಾವನೆಗಳಂತಹ ಶಿಕ್ಷಣವನ್ನು ನೀಡಿ ಭಾರತದ ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತವೆ ಎಂದು ವಿಜಯಪುರದ ಬಿ.ಜಿ.ಎಸ್ ನ ಜಿಲ್ಲಾ ಸಂಘಟಿಕ ರಾಜಶೇಖರ ಖೇಡಗಿ ಹೇಳಿದರು.ಅವರು ಪಟ್ಟಣದ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ನ...

ಗೋಕಾಕ ನಗರಕ್ಕೆ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಮಂಜೂರು- ಸಂಸದ ಈರಣ್ಣ ಕಡಾಡಿ ಹರ್ಷ

ಮೂಡಲಗಿ: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಕೋವಿಡ್-19 ಪರೀಕ್ಷೆ ಕೈಗೊಳ್ಳಲು ಗೋಕಾಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಮಂಜೂರಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.ಮಂಗಳವಾರ ಜ.25 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಸುಮಾರು 53 ಲಕ್ಷ ಜನಸಂಖ್ಯೆ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಆರ್.ಟಿ.ಪಿ.ಸಿ.ಆರ್...

ಮೂಡಲಗಿಯಲ್ಲಿ ಸಬ್ ರಜಿಸ್ಟ್ರರ್ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ: ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ

ಮೂಡಲಗಿ: ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹು ನಿರೀಕ್ಷೆಯ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಮೂಡಲಗಿಯಲ್ಲಿ ಹೊಸದಾಗಿ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಫೆಬ್ರುವರಿ ತಿಂಗಳೊಳಗೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.ಸತತವಾಗಿ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯು...

ಮತದಾರರ ದಿನಾಚರಣೆ

ಮುನವಳ್ಳಿ: ಪಟ್ಟಣದ ಗ್ರಾಮಲೆಕ್ಕಾಧಿಕಾರಿಗಳ ಕಾರ್ಯಾಲಯದಲ್ಲಿ ಮತದಾರರ ದಿನಾಚರಣೆಯನ್ನು ಆಚರಿಸಿ ಪ್ರತಿಜ್ಞೆ ವಿಧಿಯನ್ನು ಸ್ವೀಕರಿಸಲಾಯಿತು ಮತ್ತು ಯುವ ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿಗಳಾದ ಎನ್. ಎಂ.ಕಾಲವಾಡ, ಮತಗಟ್ಟೆ ಮಟ್ಟದ ಅಧಿಕಾರಿಗಳಾದ ವಾಯ್. ಟಿ. ತಂಗೋಜಿ,ಡಾ. ಎಂ ಆರ್ ಚಲವಾದಿ, ಆರ್ ಎಸ್ ಕಿತ್ತೂರ, ವ್ಹಿ.ಎಂ.ರಾವುಳ ಹಾಜರಿದ್ದರು.

ಸಮಾಜ ಒಡೆಯುವ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ – ಸಂಗಮೇಶ ಕೌಜಲಗಿ

ಮೂಡಲಗಿ - ತಮ್ಮ ರಾಜಕೀಯ ಉದ್ದೇಶಕ್ಕಾಗಿ ಪಂಚಮಸಾಲಿ ಸಮಾಜವನ್ನು ರಾಜಕಾರಣಿಗಳು ಬಲಿಕೊಡಬಾರದು ಒಂದು ವೇಳೆ ಅಂಥ ಪ್ರಯತ್ನ ಮಾಡಿದರೆ ಮುಂಬರುವ ಚುನಾವಣೆಗಳಲ್ಲಿ ಸಮಾಜದ ರಾಜಕಾರಣಿಗಳನ್ನು ಉದ್ದೇಶಪೂರ್ವಕವಾಗಿ ಸೋಲಿಸಬೇಕಾಗುತ್ತದೆ ಎಂದು ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಸಂಗಮೇಶ ಕೌಜಲಗಿ ಎಚ್ಚರಿಕೆ ನೀಡಿದರು.ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ ವಿಷಯಕ್ಕೆ ಸಂಬಂಧಿಸಿದಂತೆ ಮೂಡಲಗಿ ತಾಲೂಕಿನ ಪಂಚಮಸಾಲಿ ಸಮಾಜದ...

ಅವಿಶ್ವಾಸ ಗೊತ್ತುವಳಿ ಸೋಲಿಸಿದ ಸದಸ್ಯರಿಗೆ ಮನಗೂಳಿ ಅಭಿನಂದನೆ

ಸಿಂದಗಿ: ಕಳೆದ ಜ. 1 ರಂದು ಕೆಲ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸುವಂತೆ ಮನವಿ ಮಾಡಿದ್ದರು.ದಿ. 24 ರಂದು ಸಭೆ ನಡೆಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಇಂದು ನಡೆದ ಸಭೆಯಲ್ಲಿ ಅವಿಶ್ವಾಸಕ್ಕೆ ಸಹಿ ಹಾಕದೇ ಸಹಕಾರ ನೀಡಿದ ಎಲ್ಲ 23 ಜನ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹೇಳಿದರು.ಪಟ್ಟಣದ...

ಸಿಂದಗಿ- ಅವಿಶ್ವಾಸ ಮಂಡನೆಗೆ ಸೋಲು; ಸಂಭ್ರಮಿಸಿದ ಅಧ್ಯಕ್ಷ ಉಪಾಧ್ಯಕ್ಷರು

ಸಿಂದಗಿ: ಅಧಿಕಾರ ವಹಿಸಿಕೊಂಡಾಗಿನಿಂದಲೂ ಯಾವುದೇ ಅಭಿವೃಧ್ದಿ ಸಲುವಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸಲು ವಿಫಲರಾಗಿದ್ದಾರೆ ಅದಕ್ಕೆ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಕೆಲ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸುವಂತೆ ಸಭೆ ಕರೆಯಲಾಗಿತ್ತು ಆದರೆ 8 ಸದಸ್ಯರ ಕೋರಮ್ ಆಗಿದ್ದರಿಂದ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಸಭೆ ನಡೆಸಿದ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ವಿಫಲವಾಗಿ...

ದಿನ ಭವಿಷ್ಯ ಮಂಗಳವಾರ (25/01/2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಇಂದು ನೀವು ನಿಮ್ಮ ಮಕ್ಕಳ ಕಾರಣದಿಂದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಕಂಡುಬರುತ್ತಿದೆ. ಇದರಿಂದ ನೀವು ತುಂಬಾ ಸಂತೋಷಪಡುತ್ತೀರಿ. ಇತರರಿಗೆ ಪ್ರತಿಫಲಗಳು ತರುವ ನಿಮ್ಮ ಸಾಮರ್ಥ್ಯ ಪ್ರತಿಫಲ ತರುತ್ತದೆ. ಹೊಸ ಪ್ರಸ್ತಾಪಗಳ ಅಕರ್ಷಕವಾಗಿದ್ದರೂ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವಲ್ಲ. ಸಾಮಾಜಿಕ ಹಾಗೂ ಧಾರ್ಮಿಕ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group