spot_img
spot_img

ಛಾಯಾಗ್ರಹಣದಲ್ಲಿ ಸಾಧನೆಗೆ ಪ್ರಶಸ್ತಿ

Must Read

- Advertisement -

ಸವದತ್ತಿ: ಕರ್ನಾಟಕ ಛಾಯಾಗ್ರಾಹಕರ ಸಂಘ ಕೆಪಿಎ ಬೆಂಗಳೂರು ಇವರು ಆಯೋಜಿಸಿದ ಡಿಜಿ ಇಮೇಜ್-೨೦೨೩ ಕಾರ್ಯಕ್ರಮದಲ್ಲಿ ಅನೇಕ ಛಾಯಾಗ್ರಾಹಕರನ್ನು ಸನ್ಮಾನಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ.

ಬೆಳಗಾವಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಿಂದ ಛಾಯಾಗ್ರಾಹಕರಾಗಿ ಅವರು ಸಲ್ಲಿಸಿದ ಸೇವೆ ಮತ್ತು ಛಾಯಾಗ್ರಾಹಕರಿಗೋಸ್ಕರ ಅವರು ಮಾಡಿದಂತ ಸಹಾಯ ಸಹಕಾರವನ್ನು ಗಮನಿಸಿ ಅವರಿಗೆ ಪ್ರಶಸ್ತಿಯೊಂದಿಗೆ ಗೌರವಾರ್ಪಣೆ ಸಲ್ಲಿಸಲಾಗಿದೆ. ಬೆಂಗಳೂರಿನ ಡಿಜಿ ಇಮೇಜ್ ವಸ್ತು ಪ್ರದರ್ಶನದ ಸಂದರ್ಭದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಈ ಛಾಯಾಗ್ರಾಹಕರಿಗೆ ಗೌರವ ಸನ್ಮಾನವನ್ನು ನಡೆಸಲಾಗಿದೆ. ಕೆಪಿಎ ರಾಜ್ಯ ಸಂಘದ ನಿರ್ದೇಶಕ ಗೋಕಾಕದ ಕೆ.ಆರ್.ಮಲ್ಲಿಕಾರ್ಜುನರವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯಲ್ಲಿನ ವಿವಿಧ ತಾಲೂಕಿನ ಛಾಯಾಗ್ರಾಹಕರಿಗೆ ಈ ಪ್ರೋತ್ಸಾಹಕರ ಗೌರವ ಸನ್ಮಾನ ಸಂದಿರುವುದು ಹೆಮ್ಮೆಯ ವಿಷಯವಾಗಿದೆ.

ಈ ಸಂದರ್ಭದಲ್ಲಿ ಕೆಪಿಎ ರಾಜ್ಯಾಧ್ಯಕ್ಷ ಎಸ್. ಪರಮೇಶ್ವರ, ಉಪಾಧ್ಯಕ್ಷ ಎಚ್.ಎಸ್.ನಾಗೇಶ, ಲಕ್ಷ್ಮೀ ನಾರಾಯಣ ಭಟ್ಟರವರಿಂದ ಸವದತ್ತಿಯ ಗಿರೀಶಪ್ರಸಾದ ರೇವಡಿ, ಗೋಕಾಕದ ಲಕ್ಷ್ಮಣ ಯಮಕನಮರಡಿ ಹಾಗೂ ಮಧುರಾವ್ ಸೋನಗೋಜಿ ಇವರನ್ನು ಗೌರವಿಸಿ ಸತ್ಕರಿಸಲಾಗಿದೆ.

- Advertisement -

ಈ ಸಂದರ್ಭದಲ್ಲಿ ಛಾಯಾಗ್ರಾಹಕರಾದ ಉಮಾ ಸೊನಗೋಜಿ, ಸುರೇಶ ಬಾಳೋಜಿ, ಬಿ.ಪ್ರಭಾಕರ, ಶರಣು ಸಂಪಗಾಂವಿ, ನಜೀರ ಹುಕ್ಕೇರಿ,  ಅಂಬಣ್ಣ ಕಳಸಗಾರ, ಕೆಂಪಣ್ಣ ಮುರಕಿಭಾವಿ, ಪ್ರವೀಣ ಪಂಪನವರ, ನಿಖಿಲ ಬಾಳೋಜಿ, ಕೆಂಪಣ್ಣ ಶೀಗಿಹೊಳಿ, ಸಂದೀಪ ನಾಯಕ, ಭೀಮಶಿ ಭಜಂತ್ರಿ, ದಯಾನಂದ ಪೂಜಾರಿ, ಶಂಕರ ಮಾನಗಾವಿ ಇತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಿಂದಗಿ ಮಂಡಲ ವತಿಯಿಂದ ರಸ್ತಾರೋಖೋ ಪ್ರತಿಭಟನೆ

ಸಿಂದಗಿ - ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದು, ರಾಜ್ಯದಲ್ಲಿನ ಕಾನೂನ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಾಗೂ ವಾಲ್ಮೀಕಿ ನಿಗಮದ ಹಗರಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group