Homeಸುದ್ದಿಗಳುಗೋಸಬಾಳ ಶಾಲೆಯಲ್ಲಿ 'ಬಸವ ಪಥ' ಲೋಕಾರ್ಪಣೆ

ಗೋಸಬಾಳ ಶಾಲೆಯಲ್ಲಿ ‘ಬಸವ ಪಥ’ ಲೋಕಾರ್ಪಣೆ

ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ *ಬಸವ ಪಥ* ವಿಶೇಷ ಸಂಚಿಕೆಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮುಖ್ಯ ಶಿಕ್ಷಕರು, ಅಖಿಲ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷರಾದ ಸಿದ್ದರಾಮಪ್ಪ ಮಲ್ಲಪ್ಪ ಲೋಕಣ್ಣವರ (ಕೌಜಲಗಿ) ಅವರು ಲೋಕಾರ್ಪಣೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ, ಪ್ರಜ್ಞಾವಂತ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು.ಪ್ರಸ್ತುತ ದಿನಗಳಲ್ಲಿ ಶರಣರ ಜೀವನ ಆದರ್ಶಗಳು ಅವಶ್ಯಕವಾಗಿವೆ ಎಂದರು.

ಶಿಕ್ಷಕರಾದ ಅಶೋಕ ಕುಂದರಗಿ, ಮಲ್ಲಿಕಾರ್ಜುನ ಭುಜನ್ನವರ, ಶೇಖರ ಪಾಟೀಲ, ಸುರೇಶ ಸವದತ್ತಿ, ನಾಗರಾಜ ಭಜಂತ್ರಿ, ಮಾರುತಿ ಹೊಸಟ್ಟಿ, ಖ್ವಾಜಾ ಅಜ್ಮೀರ ಮೂಲಿಮನಿ, ಬಸವರಾಜ ಹಳ್ಳಿ, ಬುಳ್ಳಿ,ಶ್ರೀಮತಿ ಯು.ಎಲ್. ಹೊಸಕೋಟಿ, ಶ್ರೀಮತಿ ಟಿ. ಎಫ್.ನದಾಫ್, ಶ್ರೀಮತಿ ಡಿ.ಟಿ. ಮೆಳವಂಕಿ ಉಪಸ್ಥಿತರಿದ್ದರು. ಕೇಂದ್ರ ಬಸವ ಸಮಿತಿಯ ಬಸವ ಪಥ ಸದಸ್ಯರು, ಕವಿ, ಶಿಕ್ಷಕರಾದ ಬಾಳೇಶ ಬಸವರಾಜ ಫಕ್ಕೀರಪ್ಪನವರ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group