spot_img
spot_img

ಚಿತ್ತರಗಿಯಲ್ಲಿ ವಿಜಯ ಮಹಾ0ತೇಶ್ವರ ರಥೋತ್ಸವ

Must Read

spot_img
- Advertisement -

ತಿಮ್ಮಾಪುರ: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿ ಈ ಭಾಗದ ನಡೆದಾಡಿದ ದೇವರು ಪರಮತಪಸ್ವಿ ಲಿಂ.ಶ್ರೀ ವಿಜಯಮಹಾಂತ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ದಿನಾಂಕ 15 11 2024 ರಂದು ಶುಕ್ರವಾರ ಗೌರಿ ಹುಣ್ಣಿಮೆಯಂದು  ಸಾಯಂಕಾಲ ರಥೋತ್ಸವ ಸಕಲ ವಾದ್ಯ ಮೇಳದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು

ಸಾಯಂಕಾಲ ಅಮರಾವತಿಯ ಶ್ರೀಮಂತ ಸರದೇಸಾಯರು ಹಾಗೂ ದೈವದವರು ಕಳಸ ಹಡಗಲಿ ಸದ್ಭಕ್ತರ ಬಾಳೆಕಂಬ, ಹಿಕೇಮಾಗಿ ದೈವದವರು ನಂದಿಕೋಲು ಕಿರಸೂರ ಸದ್ಭಕ್ತರು ಹಾಗೂ ದೈವದವರ ತೇರಿನ ಹಗ್ಗ ಬಂದು ತಲುಪಿದವು. ನಂತರ ಭಕ್ತರು ರಥದ ಹಗ್ಗ ಎಳೆಯುವ ಮೂಲಕ ಭಕ್ತಿಭಾವದಲ್ಲಿ ಪರವಶರಾದರು. ಅಂದು ಲಿಂ.ವಿಜಯ ಮಹಾಂತ ಶಿವಯೋಗಿಗಳವರ ಮಠಕ್ಕೆ ಸುತ್ತಮುತ್ತಲಿನ ಸದ್ಭಕ್ತರು ಸೇರಿದಂತೆ ವಿವಿಧ ಶಾಖಾ ಮಠಗಳ ಭಕ್ತರು ಆಗಮಿಸಿ ಗದ್ದುಗೆ ದರ್ಶನ ಪಡೆದು ಪುನೀತರಾದರು.

ಸ್ವಾಮೀಜಿಗಳು-ಗಣ್ಯರಿಂದ-ರಥೋತ್ಸವಕ್ಕೆ ಚಾಲನೆ ನೀಡಿದರು. ಬ.ಬಾಗೇವಾಡಿಯ ಶ್ರೀ ಮಠದ ಸಂಗನಬಸವೇಶ್ವರ ಶ್ರೀಗಳು ಹಡಗಲಿ ನಿಡಗುಂದಿಯ ರುದ್ರಮುನಿ ಶ್ರೀಗಳು ಹರನಾಳ ಗಂಗಾವತಿಯ ಸಂಗನಬಸವ ಶ್ರೀಗಳು, . ಶಿರೂರ ಬಸವಲಿಂಗ ಶ್ರೀಗಳು, ಚಿತ್ರದುರ್ಗ ಸಿದ್ದಯ್ಯನ ಕೋಟೆ ಬಸವಲಿಂಗ ಸ್ವಾಮಿಗಳು , ಶ್ರೀ ಮಠದ ಗುರುಮಹಾಂತ ಶ್ರೀಗಳು. ಬ ಬಾಗೇವಾಡಿ ಮನಗೂಳಿ ವೀರತೇಶ್ವರ ಸ್ವಾಮೀಜಿ ಮಹಾರಾಷ್ಟ್ರದ ಪುಣೆ ಅತೀತ ಬಸವ ಸ್ವಾಮೀಜಿ ಬ ಬಾಗೇವಾಡಿ ರೇವಣಸಿದ್ದೇಶ್ವರ ಮಠದ ಸಂಗಯ್ಯ ಸ್ವಾಮಿ ಜಮಖಂಡಿ ತಾಲೂಕಿನ ಮರೆಗುದ್ದಿ ನೀಲ ವಿಜಯ ಮಹಾಂತಮ್ಮನವರು ಯಾತ್ರಾ ಸಮಿತಿ ಅಧ್ಯಕ್ಷ ಶಿವಕುಮಾರ್ ಗಂಗಾಧರ್ ಶಾಸ್ತ್ರಿಗಳು ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಮುಪ್ಪಯ್ಯ ಹಿರೇಮಠ ಶಿವಕುಮಾರ ಸಂಗಯ್ಯ ಬಾವಿಮಠ ಅರಸೀಕೆರೆ ತಾಲ್ಲೂಕು ಶಿಶುನಾಳ ಗ್ರಾಮದ ಕೊಳಗಲ ಹಿರೇಮಠ ದ ಶಿವಲಿಂಗ ಸ್ವಾಮಿಗಳು ಸಿದ್ದರಾಜು ಶಶಿವಾಳ ಶಿಶುವಾಳ ಗ್ರಾಮದ ಪತ್ರಕರ್ತ ಎಸ್ಎಂ ಪುಟ್ಟಪ್ಪ ಚಂದ್ರಶೇಖರ ಶಶಿವಾಳ ಪಟೇಲ ಅನ್ನದಾನ ಮಲ್ಲೇಗೌಡರು ಪ್ರವೀಣ ಶಶಿವಾಳ ಪ್ರವಚನಕಾರ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗಜಗಿನ ಹಾಳ ವೀರೇಶ ಶಾಸ್ತ್ರಿಗಳು ರಾಯಚೂರ ಜಿಲ್ಲೆ ದೇವದುರ್ಗ ತಾಲೂಕಿನ ವಂದಲ ಗ್ರಾಮದವರಾದ ಕಲಾವಿದ ಶಶಿಧರ ಹಿರೇಮಠ ತಬಲವಾದಕ ಬಸವರಾಜ್ ಹೂಗಾರ ಎಸ್.ಎನ್.ನಿಂಗನಗೌಡರ, ಎನ್.ಎಸ್.ನಾಂತವಾಡ ಜಿ.ಎಸ್.ಗೌಡರ, ಎಸ್.ಎಸ್.ನಾಲತವಾಡ, ಶಿವುಗಾದಿ ಮಲ್ಲಣ್ಣ ಬಿಸರಡ್ಡಿ, ಮಲ್ಲಣ್ಣ ನಾಂತವಾಡ(ಜಾಗೀರದಾರ) ಮಹಾಂತೇಶ ರೊಳ್ಳಿ, ಅಶೋಕ ಬೇವೂರ, ಸಂಗಣ್ಣ ಬಾಲರಡ್ಡಿ ಮಹಾಂತೇಶ ಬಾರಡ್ಡಿ ಸಂಗಪ್ಪ ಕಾಮಾ ಮಹಾಂತೇಶ ಪೂಜಾರ ಸಂದೀಪ ಮೇಟ, ಬಸವರಾಜ ವಾಲಿಕಾರ, ಹೆಚ್.ಡಿ.ವೈದ್ಯ ಬಸವರಾಜ ಬೇವೂರ ಈ ಸಂದರ್ಭದಲ್ಲಿ ಇದ್ದರು.

- Advertisement -

ಬಣ್ಣ ಬಣ್ಣದ ಧ್ವಜ, ಬಾಳೆಕಂಬಗಳ ವಿವಿಧ ಬಗೆಯ ಹೂಗಳಿಂದ ಶೃಂಗಾರ ಮಾಡಿ ಭವ್ಯವಾದ ರಥದಲ್ಲಿ ವಚನ ಕಂಟಗಳನ್ನು ಇಡಲಾಗಿತ್ತು. ರಥವು ನೋಡುಗರ ಕಣ್ಣನ್ನು ಸೆಳೆಯಿತು. ತಿಮ್ಮಾಪೂರ, ಕಿರಸೂರ, ಚಿತ್ತರಗಿ ಹಡಗಲಿ, ಹಿರೇಮಾಗಿ, ಅಮರಾವತಿ, ಹುನಗುಂದ, ಇಲಕಲ್ಲ, ಗಂಗೂರ, ಹುಲಗಿನಾಳ, ಕಲ್ಲಿಗೋನಾಳ ಪಾಪತನಾಳ ವೇರನಾಪೂರ ಸೇರಿದಂತೆ ಶ್ರೀ ಮಠದ ವಿವಿಧ ಶಾಖಾಮಠಗಳ ಸಾವಿರಾರು ಸದ್ಭಕ್ತರು ಪಾಲ್ಗೊಂಡಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group