spot_img
spot_img

ಬಲಿ ಚಕ್ರವರ್ತಿ; ಈ ನೆಲದ ಹೆಮ್ಮೆಯ ಸಾಂಸ್ಕ್ರತಿಕ ನಾಯಕ

Must Read

- Advertisement -

ಬಲಿ ಚಕ್ರವರ್ತಿ ಈ ನೆಲದ ಮೂಲನಿವಾಸಿಗಳ ಹೆಮ್ಮೆಯ ರಾಜ.ಬಲಿ ಚಕ್ರವರ್ತಿಯ ಸಾಮ್ರಾಜ್ಯ ಅತ್ಯಂತ ವಿಶಾಲವಾದ ಮತ್ತು ಸಮೃದ್ದಿಯಿಂದ ಕೂಡಿದ ಸಾಮ್ರಾಜ್ಯವಾಗಿತ್ತು. ಬಲಿರಾಜನ ಸಾಮ್ರಾಜ್ಯದ ವಿಸ್ತರಣೆ ಕೇಳಿದರೆ ವಿಸ್ಮಯ ಎನಿಸುತ್ತದೆ . ಇಂದಿನ ಶ್ರೀಲಂಕಾದಲ್ಲಿ ಕೆಲವು ದ್ವೀಪಗಳು ಸಹ ಇವನ ಆಳ್ವಿಕೆಯಲ್ಲಿ ಸೇರಿದ್ದವು.

ಮಲೇಷಿಯಾದಲ್ಲಿ ಸಹ ಇವನ ಆಳ್ವಿಕೆಗೆ ಒಳಪಟ್ಟ ಒಂದು ದ್ವೀಪ ಇತ್ತು ಇಂದಿಗೂ ಅದನ್ನು ‘ಬಾಲಿ’ ದ್ವೀಪ ಎಂದು ಕರೆಯುವರು. ಕರಾವಳಿ ಪ್ರದೇಶದಿಂದ ಹಿಡಿದು ದೂರದ ಪಶ್ಚಿಮ ಕೊಲ್ಲಾಪುರದವರಗೆ ಹರಡಿದ ಪ್ರದೇಶವೂ ಬಲಿರಾಜನ ಆಳ್ವಿಕೆಗೆ ಒಳಪಟ್ಟಿತ್ತು. ಇತನ ಆಡಳಿತ ಕೇಂದ್ರ ರತ್ನಗಿರಿ ಆಗಿತ್ತು. ಇಷ್ಟೆ ಅಲ್ಲ ಬಲಿರಾಜನು ದಕ್ಷಿಣ ಮಹಾರಾಷ್ಟ್ರದಲ್ಲಿ ಆಳ್ವಿಕೆ ನಡೆಸುತ್ತಿದ್ದ.ಇಲ್ಲಿನ ಮೂಲನಿವಾಸಿಗಳನ್ನು ಮಹಾರಾಷ್ಟ್ರೀಯರು ಎಂದು ಮುಂದೆ ಅವರನ್ನು ಮರಾಠರು ಎಂದು ಕರೆದರು.

ಬಲಿ ಚಕ್ರವರ್ತಿ ತುಳಿತಕ್ಕೊಳಗಾದ ಮತ್ತು ದಮನಿತರ ಧ್ವನಿಯಾಗಿದ್ದ .‌ಈತ ಅಪ್ಪಟ ಸಂಗೀತ ಪ್ರೇಮಿಯಾಗಿದ್ದ ಮತ್ತು ‘ಮಲ್ಹಾರ’ ಎಂಬ ಹೊಸರಾಗ ಒಂದನ್ನು ಸಂಯೋಜಿಸಿದ್ದ ಮಿಯಾನ್ ಎಂಬ ಇನ್ನೊಬ್ಬ ಸಂಗೀತಕಾರ ಈ ಮಲ್ಹಾರ್ ರಾಗವನ್ನು ಲಯಬದ್ದವಾಗಿ ಸಂಯೋಜಿಸಿದ್ದ ಅದಕ್ಕೆ ‘ ಮಿಯಾನ್ ಮಲ್ಹಾರ್ ‘ ರಾಗವಾಗಿ ಪ್ರಸಿದ್ದಿಗೆ ಬಂತು . ಅದರಂತೆ ಬಲಿಚಕ್ರವರ್ತಿ ತನ್ನ ವಿಶ್ರಾಂತಿ ಸಮಯವನ್ನು ಕಾಶಿಯಲ್ಲಿ ಕಳೆಯುತ್ತಿದ್ದ ಅಂತಹ ಸಂಧರ್ಭದಲ್ಲಿ ಮತ್ತೊಂದು ರಾಗವನ್ನು ಸಂಯೋಜಿಸಿದ್ದ ಅದು ಮುಂದೆ ಭೈರವ ರಾಗವೆಂದು ಪ್ರಸಿದ್ದಿಗೆ ಬಂತು. ತಾನ್ ಸೇನ್ ನಂತಹ ಸಂಗೀತ ದಿಗ್ಗಜನ ಮನಸೂರೆಗೊಂಡ ರಾಗ ಭೈರವದ ಜನಕ ಬಲ ಚಕ್ರವರ್ತಿ. ಜೊತೆಗೆ ಡಾರ್ ” ಎಂಬ ಸಂಗೀತದ ಉಪಕರಣವನ್ನು ಕಂಡುಹಿಡಿದಿದ್ದು ಇದೆ ಬಲಿಮಹಾರಾಜ.

- Advertisement -

ಬಲಿ ಚಕ್ರವರ್ತಿ ಈ ದೇಶದ ಮೊದಲ ಕೃಷಿಕ ಚಕ್ರವರ್ತಿ.ರೈತರ ಬಗ್ಗೆ ಅಪಾರ ಕಾಳಜಿ ಇದ್ದ ಈ ರಾಜ ರೈತರ ಕಷ್ಟ ,ಸುಖ, ದುಃಖಗಳನ್ನು ಆಲಿಸಲೆಂದೆ ಇಬ್ಬರು ಅಧಿಕಾರಿಗಳನ್ನು ನೇಮಿಸಿರುತ್ತಾನೆ ಅವರೆ ” ಮಹಾ -ಸುಭಾ” ಇವರು ತುಂಬಾ ಪ್ರಮಾಣಿಕರಾಗಿದ್ದು ರೈತಾಪಿ ವರ್ಗದ ಏಳಿಗೆಗಾಗಿ ತಮ್ನನ್ನೆ ತಾವು ಸಮರ್ಪಿಸಿಕೊಂಡಿದ್ದರು.

ರೈತರು ಬೆಳೆದ ಬೆಳೆಗೆ ನೀಡಬಹುದಾದ ಎಲ್ಲ ಸೌಲಭ್ಯಗಳನ್ನು ಈ ಅಧಿಕಾರಿಗಳ ಮೂಲಕ ಬಲಿಚಕ್ರವರ್ತಿ ಅದನ್ನು ಪೂರೈಸುತ್ತಿದ್ದ. ಆ ಅಧಿಕಾರಿಗಳು ರೈತರ ಬಗೆಗಿನ ಕಾಳಜಿಯಿಂದಾಗಿ ರೈತವರ್ಗ ಅವರನ್ನು ಸ್ಮರಿಸದೆ ಇರಲಾರದು. ಇಂದಿಗೂ ಯಾವುದೆ ಕೃಷಿ ಚಟುವಟಿಕೆ ಇರಲಿ ಅದನ್ನು ಆರಂಭಿಸುವಾಗ , ಕಣ( ರಾಶಿ) ಮಾಡುವಾಗ ಸಸಿ ನೆಡುವಾಗ ಹೊಲದ ಬದುವಿನ ಮೇಲೆ ಮತ್ತು ರಾಶಿಯ ಮುಂದೆ ಎರಡು ಕಲ್ಲುಗಳನ್ನು ಇಟ್ಟು ಅದಕ್ಕೆ ಸುಣ್ಣ ಬಳಿದ ಪೂಜಿಸುವುದು ಇಂದಿಗೂ ವಾಡಿಕೆ ಇದೆ. ಆ ಎರಡು ಕಲ್ಲುಗಳೆ “ಮಹಾ- ಸುಭಾ” ಪ್ರತೀಕವೆಂದು ತಿಳಿದು ಇಂದಿಗೂ ಪೂಜೆ ಸಲ್ಲಿಸುವುದು ರೈತಾಪಿವರ್ಗಗಳಲ್ಲಿ ಕಂಡು ಬರುತ್ತೆ.ಹಾಗಾಗಿ ರೈತವರ್ಗವು ಬಲಿಚಕ್ರವರ್ತಿ ಕಾಲದಲ್ಲಿ ನೆಮ್ಮದಿಯಿಂದ ಇತ್ತು. ಇಷ್ಟೆ ಅಲ್ಲದೆ ಅನೇಕ ವಿದ್ವಾಂಸರು ಬಲಿರಾಜನ ರಾಜ್ಯಕ್ಕೆ ಬಂದು ಅಧ್ಯಯನ ನಡೆಸಿದರು. ದಶರಥನ ತಂದೆ ಅಜಪಾಲನಿಗಿಂತಲೂ ಮತ್ತು ಆ ಕಾಲದ ಎಲ್ಲಾ ರಾಜರುಗಳಿಗಿಂತ ವಿಸ್ತಾರ ಮತ್ತು ಸಮ್ರದ್ದಿಯಾದ ಸಾಮ್ರಾಜ್ಯ ಬಲಿ ಚಕ್ರವರ್ತಿಯದು ಆಗಿತ್ತು.

ಹೀಗೆ ಸಮೃದ್ದಿಯಿಂದ ಸುಖದಿಂದ ಇದ್ದ ಆ ಸಾಮ್ರಾಜ್ಯದ ಆಡಳಿತವನ್ನು ಸಹಿಸದ ವಿಪ್ರ ವಾಮನ ತನ್ನ ಸೈನ್ಯದೊಂದಿಗೆ ಬಲಿಯ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದ.ಆಗ ವಾಮನ ಸೈನ್ಯವನ್ನು ಹಿಮ್ಮೆಟ್ಟಿಸುವುದು ಅನಿವಾರ್ಯವೆ ಆಯಿತು . ಬಲಿ ಚಕ್ರವರ್ತಿಯ ಸೈನ್ಯ ಪ್ರತಿದಿನವು ವಾಮನ ಸೈನ್ಯದೊಂದಿಗೆ ಸೆಣಸಾಡಿತು. ಭಾದ್ರಪದ ದ್ವಿತೀಯ ಪಕ್ಷದಂದು ಸೂರ್ಯಾಸ್ತದ ನಂತರ ಯುದ್ದ ನಿಲ್ಲಿಸಿ ಎರಡು ಪಾಳಯದ ಸೈನ್ಯಗಳೂ ವಿಶ್ರಾಂತಿಗೆಂದು ತಮ್ಮ ಡೇರೆಗಳಿಗೆ ತೆರಳಿದರು.

- Advertisement -

ತಮ್ಮ ಪಾಳಯಗಳಲ್ಲಿ ಯುದ್ದದಲ್ಲಿ ಮಡಿದವರ ತ್ಯಾಗ ಬಲಿದಾನಗಳನ್ನು ಸ್ಮರಿಸಲಾಯಿತು.ಅದನ್ನು ಇಂದಿಗೂ ಭಾದ್ರಪದ ದ್ವಿತೀಯ ಪಕ್ಷದಂದು ಮನೆಯಲ್ಲಿ ತೀರಿಹೋದ ಹಿರಿಯರ ಸ್ಮರಣೆಗೆ ವಾರ್ಷಿಕ ತಿಥಿ ಅಥವಾ ವರ್ಷಾಂತಿಕ ಶ್ರಾದ್ದ ಮಾಡುವುದು ಇಂದಿಗೂ ವಾಡಿಕೆಯಲ್ಲಿದೆ. ಹೀಗೆ ಸತತ ಎಂಟು ದಿನಗಳಕಾಲ ಯುದ್ದದಲ್ಲಿ ವೀರಬಾಹುವಿನಂತೆ ಹೋರಾಡಿದ ಬಲಿ ಎಂಟನೆ ದಿನಕ್ಕೆ ಯುದ್ದ ಭೂಮಿಯಲ್ಲಿಯೆ ವೀರಮರಣವನ್ನುಪ್ಪತ್ತಾನೆ.

ಹೀಗೆ ವೀರ ಮರಣವನ್ನು ಅಪ್ಪಿದ ಬಲಿಯ ಬರುವಿಕೆಗಾಗಿ ಮತ್ತು ಯುದ್ದದಲ್ಲಿ ಅಳಿದುಳಿದ ಬಾಣಸುರನ ಸೈನ್ಯವು ಅಶ್ವಿನಿ ಮಾಸದ ಹತ್ತನೆ ದಿನದಂದು ತಾಯಿನಾಡಿಗೆ ಮರಳಿತು. ಜನರಿಂದ ಜನರಿಗೆ ಹೃದಯದಿಂದ ಹೃದಯಕ್ಕೆ ಸುಖ ಸಮೃದ್ದಿಯನ್ನು ತರಲಿಕ್ಕೋಸ್ಕರ ಬಲಿ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಹಾರೈಸಿ ಸ್ತ್ರೀಯರು ಆರತಿ ಎತ್ತಿ ಶುಭಹಾರೈಸುತ್ತಾರೆ.

ಇಂದಿಗೂ ಬಲಿಪಾಡ್ಯದಂದು ಸ್ತ್ರೀಯರು ತಟ್ಟೆಯಲ್ಲಿ ಎರಡು ದೀಪಗಳ ಬೆಳಕಿನಲ್ಲಿ ಆರತಿ ಎತ್ತಿ ಮನು ಆಡಳಿತಕೊನೆಗೊಂಡು ಬಲಿ ಆಡಳಿತ ಮತ್ತೊಮ್ಮೆ ಬರಲಿ ಎನ್ನುವ ಉದ್ದೇಶಕ್ಕಾಗಿ ದೀಪಾವಳಿಯ ಬಲಿಪಾಡ್ಯದಂದು ಆರತಿ ಎತ್ತಿ ಶುಭಹಾರೈಸುತ್ತಾರೆ. ಆದರೆ ಮುಂದೆ ಪುರೋಹಿತ ಶಾಹಿಗಳು ಇದರ ಆಚರಣೆಯ ಅರ್ಥವನ್ನೆ ಬದಲಾಯಿಸಿ ಬಿಟ್ಟರು.

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group