spot_img
spot_img

ಬನವಾಸಿ ನಾಡಕಛೇರಿ ನೌಕರನ ದರ್ಪ ; ಹೈರಾಣಾದ ಬಡಜನತೆ

Must Read

- Advertisement -

ಮೇಲಧಿಕಾರಿಗಳು ಇನ್ನಾದರೂ ಕಣ್ಣು ತೆರೆಯಬೇಕಿದೆ

ಬನವಾಸಿ: ಜನ ಸೇವೆಯೇ ಜನಾರ್ಧನ ಸೇವೆ ಎಂಬ ರೀತಿಯಲ್ಲಿ ಕೆಲ ಅಧಿಕಾರಿಗಳು ಸರ್ಕಾರದ ಕೆಲಸ ನಿರ್ವಹಿಸುತ್ತಿದ್ದರೆ ಬನವಾಸಿಯ ನಾಡಕಛೇರಿಯಲ್ಲಿ ಆಧಾರ ಕಾಡ್೯ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯ ದರ್ಪಕ್ಕೆ ಸಾರ್ವಜನಿಕರು ರೋಸಿ ಹೋಗಿದ್ದಾರೆ. 

ಸರ್ಕಾರದ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್ ಕಾಡ್೯ ಕಡ್ಡಾಯವಾಗಿದೆ. ಅದರೆ ಹೊಸ  ಆಧಾರ್ ಕಾಡ್೯ ಮಾಡುವುದು, ತಿದ್ದುಪಡಿಗೈಯುವುದು ಹರಸಾಹಸವಾಗಿದೆ. ಪ್ರತಿ ತಿಂಗಳ  ಎರಡನೇ ಶನಿವಾರ ಮತ್ತು ನಾಲ್ಕನೆಯ ಶನಿವಾರದಂದು ಇಲ್ಲಿಯ ನಾಡಕಛೇರಿಯಲ್ಲಿ ಹೊಸ ಆಧಾರ್ ಕಾಡ್೯ ಮತ್ತು ತಿದ್ದುಪಡಿ ಮಾಡಲು ತಾಲೂಕು ಆಡಳಿತ ಅವಕಾಶ ಕಲ್ಪಿಸಿದೆ. ಅದರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಧಾರ್ ಆಪರೇಟರ್ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಜನರ ಆರೋಪವಾಗಿದೆ. 

- Advertisement -

ಗ್ರಾಮೀಣ ಭಾಗದ ಜನರು ಹೆಚ್ಚಾಗಿರುವ ಬನವಾಸಿಯ ಭಾಗದಲ್ಲಿ ಬಡ ಜನರೇ ಹೆಚ್ಚು. ಹೊಸ ಆಧಾರ್ ಹಾಗೂ  ತಿದ್ದುಪಡಿಯನ್ನು ಮಾಡಿಕೊಳ್ಳಲು ಕೂಲಿ ಕೆಲಸವನ್ನು ಬಿಟ್ಟು ಬಂದು ಸರತಿ ಸಾಲಿನಲ್ಲಿ ನಿಂತು ತಮ್ಮ ಕೆಲಸ ಮಾಡಿಕೊಳ್ಳಬೇಕಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಈ ಆಧಾರ್ ಆಪರೇಟರ್ ಸಾರ್ವಜನಿಕರಿಗೆ ಮನ ಬಂದಂತೆ ಮಾತನಾಡುವುದು ಕಂಡು ಬರುತ್ತಿದೆ. ಆಧಾರ್ ಕಾಡ್೯ ಗೆ ಸರ್ಕಾರ ನಿಗದಿ ಪಡಿಸಿರುವ ಹಣವಷ್ಟೇ ಪಡೆಯಬೇಕಾಗಿದ್ದು ಅದರೆ ಇಲ್ಲಿ ಪ್ರತಿಯೊಂದು ಆಧಾರ್ ಕಾಡ್೯  ಗೂ 100ರೂ. 200ರೂ. ಪಡೆದುಕೊಂಡು ಹಗಲು ದರೋಡೆ ಮಾಡುತ್ತಿದ್ದು ಇದಕ್ಕೆ ಕೆಲವು ಮಧ್ಯವರ್ತಿಗಳು ಸಾಥ್ ನೀಡುತ್ತಿದ್ದಾರೆ. ನಾಡಕಛೇರಿ ಮಧ್ಯವರ್ತಿಗಳಿಂದ ತುಂಬಿಹೋಗಿದೆ ಎಂಬುಂದು ಸಾರ್ವಜನಿಕರ  ಆರೋಪವಾಗಿದೆ. ಈತನ ಕರ್ತವ್ಯಲೋಪ ಹಾಗೂ ಮಧ್ಯವರ್ತಿಗಳ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಿದ್ದಲ್ಲಿ ದೂರು ನೀಡಿದವರ ಆಧಾರ್ ಕಾಡ್೯ ನ ವಿಳಾಸಗಳನ್ನು ತಪ್ಪು ತಪ್ಪಾಗಿ ನಮೂದಿಸುವುದು ಇಲ್ಲವಾದರೇ ಆಧಾರ್ ಕಾಡ್೯ ರದ್ದು ಮಾಡುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈತನ ಬಗ್ಗೆ ಹಲವಾರು ದೂರುಗಳಿದ್ದರು ಮೇಲಾಧಿಕಾರಿಗಳು ಮೌನವಹಿಸಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. 

ಸರ್ಕಾರದ ಕೆಲಸ ದೇವರ ಕೆಲಸವೆಂಬಂತೆ ಕರ್ತವ್ಯ ನಿರ್ವಹಿಸುತ್ತಿರುವ  ತಾಲೂಕು ದಂಡಾಧಿಕಾರಿಗಳು ಇಂತಹ ನೌಕರ ಮೇಲೆ ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. 

ಬನವಾಸಿಯ ನಾಡಕಛೇರಿಯಲ್ಲಿ ಆಧಾರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವವರ ಕರ್ತವ್ಯಲೋಪವನ್ನು ತಹಶೀಲ್ದಾರರ ಗಮನಕ್ಕೆ ತಂದ ಕಾರಣಕ್ಕಾಗಿ ಅಕ್ರೋಶಗೊಂಡು ನನ್ನ ಸಹೋದರಿಯ ಮಗುವಿನ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸಿದ್ದಾರೆ.  ಇಂತಹ ನೌಕರರಿಂದ ಬಡ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.  ಅಧಿಕಾರಿಗಳು ಇಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. 

- Advertisement -

ಚೇತನಾ,

ಬನವಾಸಿ ನಿವಾಸಿ


ಆಧಾರ್ ಆಪರೇಟರ್ ಬಗ್ಗೆ ಹಲವಾರು ದೂರುಗಳು ಬಂದಿವೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು.

ಶ್ರೀಧರ ಮುಂದಲಮನಿ

ತಹಶೀಲ್ದಾರ, ಶಿರಸಿ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group