spot_img
spot_img

ಭಾರತ ಜೋಡೋ ಕಾರ್ಯಕ್ರಮಕ್ಕೆ ಸಿಂದಗಿಯಿಂದ ಕೈ ನಾಯಕರ ದಂಡು

Must Read

- Advertisement -

ಸಿಂದಗಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ ಗಾಂಧಿ ಅವರು ನಡೆಸುತ್ತಿರುವ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ 3500 ಕಿ.ಮೀ ಭಾರತ ಜೋಡೋ ಯಾತ್ರೆಯ ಇಂದು ರಾಯಚೂರ ಕ್ಷೇತ್ರವನ್ನು ಪ್ರವೇಶ ಮಾಡುತ್ತಿರುವ ಹಿನ್ನಲೆಯಲ್ಲಿ ಪಾದಯಾತ್ರೆ ಹಾಗೂ ಸಮಾವೇಶದಲ್ಲಿ ಭಾಗಿಯಾಗಲು ಸಿಂದಗಿ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಶುಕ್ರವಾರ ಸಾವಿರಾರು ಕೈ ಕಾರ್ಯಕರ್ತರು ರಾಯಚೂರಿಗೆ ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಪ್ರಯಾಣಕ್ಕೆ ಚಾಲನೆ ನೀಡಿ ಮಾತನಾಡಿ, ರಾಹುಲ ಗಾಂಧಿ ಅವರು ಜನಸಾಮಾನ್ಯರು ಹಾಗೂ ಅವರ ಸಮಸ್ಯೆ, ಸಂಕಷ್ಟ, ಸಾಮಾಜಿಕ ಸಾಮರಸ್ಯದ ಬಗ್ಗೆ ಧ್ವನಿಯಾಗಿದ್ದಾರೆ. ಆರ್ಥಿಕ ಸಾಮಾಜಿಕ ಅಸಮಾನತೆ ವಿಚಾರವಾಗಿ ಈ ಯಾತ್ರೆ ಮಾಡಲಾಗುತ್ತಿದೆ. ನಮ್ಮ ನಾಯಕ ರಾಹುಲ ಗಾಂಧಿ ಅವರು ಮಾಡುತ್ತಿರುವ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಸುಮಾರು 3500 ಕ್ಕೂ ಹೆಚ್ಚು ಕಿಲೋ ಮೀಟರನ ಭಾರತ ಜೋಡೋ ಪಾದಯಾತ್ರೆ ಹೋದಲೆಲ್ಲ ಅಭೂತ ಪೂರ್ವ ಸ್ಪಂದನೆ ಮತ್ತು ಸ್ವಾಗತ ಸಿಕ್ಕಿದೆ. ಈ ಪಾದಯಾತ್ರೆಗೆ ಮುಂಬರುವ ಭಾರತ ದೇಶದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಸಂಚಲನ ಮೂಡಿಸಲಿದೆ. ಸಿಂದಗಿ ಮತಕ್ಷೇತ್ರದಿಂದ ಅವರಿಗೆ ಬೆಂಬಲ ನೀಡಲು ಸಾವಿರಾರು ಕಾರ್ಯಕರ್ತರೊಂದಿಗೆ ಆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಲಮೇಲದ ಕೈ ಮುಖಂಡ ರಮೇಶ ಭಂಟನೂರ ಮಾತನಾಡಿ, ಭಾರತ ಜೋಡೋ ಯಾತ್ರೆಯಲ್ಲಿ ನಿರೀಕ್ಷೆ ಮೀರಿ ಲಕ್ಷಾಂತರ ಜನ ಈ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಸಿಂದಗಿ ಮತಕ್ಷೇತ್ರದಿಂದ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ನಾವೆಲ್ಲ ಭಾಗವಹಿಸುತ್ತಿರುವದು ನಮಗೆಲ್ಲ ಸಂತಸ ತಂದಿದೆ ಎಂದರು.

- Advertisement -

ಈ ವೇಳೆ ಕಾಂಗ್ರೆಸ್ ಮುಖಂಡರಾದ ರವಿರಾಜ ದೇವರಮನಿ, ಉಮೇಶ ಜೋಗೂರ, ಸುರೇಶ ಪೂಜಾರಿ, ಸಂತೋಷ ಹರನಾಳ, ಮುತ್ತು ಮುಂಡೇವಾಡಗಿ, ಚನ್ನು ಪಟ್ಟಣಶೆಟ್ಟಿ, ರಮೇಶ ಹೂಗಾರ, ಖಾದರ ಬಂಕಲಗಿ, ಪರುಶುರಾಮ ಕಾಂಬಳೆ, ಬಸವನಗೌಡ ಪಾಟೀಲ ಖಾನಾಪೂರ, ಶಿವಾನಂದ ಕೋಟಾರಗಸ್ತಿ, ಸಲೀಂ ಜುಮನಾಳ, ದಾವಲಪ್ಪ ಸೊನ್ನದ, ಶಂಕರಗೌಡ ಪಾಟೀಲ ಯಂಕಂಚಿ, ನೂರಅಹ್ಮದಅತ್ತಾರ, ಇರ್ಫಾನ ಬಾಗವಾನ, ಬಶೀರ ಮರ್ತೂರ, ಜಯಶ್ರೀ ಹದನೂರ, ಶರಣಮ್ಮ ನಾಯಕ, ಮಲ್ಲಿಕಾರ್ಜುನ ಶಂಬೇವಾಡ, ಮಹೇಶ ಮನಗೂಳಿ, ಷಣ್ಮುಖ ಹಿರೇಮಠ, ಭೀಮನಗೌಡ ಬಿರಾದಾರ ಗೋಲಗೇರಿ, ಸೇರಿದಂತೆ ಅನೇಕರು ಇದ್ದರು.

- Advertisement -
- Advertisement -

Latest News

ನೆಮ್ಮದಿ ದೊರೆಯುವ ಏಕೈಕ ಮಾರ್ಗವೇ ಧ್ಯಾನ – ಈರಣ್ಣ ಕಡಾಡಿ

ಘಟಪ್ರಭಾ: ದುಡ್ಡು ಕೊಟ್ಟು ಜಗತ್ತಿನಲ್ಲಿ ಏನೆಲ್ಲ ಕೊಳ್ಳಬಹುದು. ಆದರೆ ನೆಮ್ಮದಿಯನ್ನು ಮಾತ್ರ ಕೊಳ್ಳಲು ಸಾಧ್ಯವಿಲ್ಲ ಅಂತಹ ನೆಮ್ಮದಿ ದೊರೆಯುವ ಏಕೈಕ ಮಾರ್ಗವೆಂದರೇ ಧ್ಯಾನ. ಆಧುನಿಕ ಯುಗದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group