ಬನ್ನಿಹಟ್ಟಿ ಲಕ್ಕಮ್ಮ ದೇವಿ ಜಾತ್ರಾ ಮಹೋತ್ಸವ

Must Read

ಬಾಗಲಕೋಟೆ :ಹುನಗುಂದ ತಾಲೂಕಿನ ಬನ್ನಿಹಟ್ಟಿ ಯ ಶ್ರೀ ಗ್ರಾಮ ದೇವತೆ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವದ ನಿಮಿತ್ತ 15.02.2025 ರಂದು ಶನಿವಾರದಂದು ಅಭಿಷೇಕ ಸುಮಂಗಲೆಯರ ಕುಂಭ ಮೆರವಣಿಗೆ ಸಾಮೂಹಿಕ ವಿವಾಹ ಹುಚ್ಛಯ್ಯನ ಮಹೋತ್ಸವ ಹಾಗೂ ಸನ್ಮಾನ ಸಮಾರಂಭ ಜರುಗಲಿದೆ ಅಂದು ಮುಂಜಾನೆ ಲಕ್ಕಮ್ಮ ದೇವಿಗೆ ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ನಂತರ ಕುಂಭ ಮೆರವಣಿಗೆ ಜರುಗಲಿದೆ

ಮುಂಜಾನೆ 11:30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಹಾಲಕೇರಿ ಮುಪ್ಪಿನ ಬಸವಲಿಂಗ ಶ್ರೀಗಳು ಅಮೀನಗಡ ಶಂಕರ ರಾಜೇಂದ್ರ ಶ್ರೀಗಳು ಗುಳೇದಗುಡ್ಡ ಅಭಿನವ ಒಪ್ಪೇಶ್ವರ ಶ್ರೀಗಳು, ಕೋಲಾರ ದಿಗಂಬರೇಶ್ವರ ಸಂಸ್ಥಾನ ಮಠದ ಯೋಗಿ ಕಲ್ಲಿನಾಥ ದೇವರು ಪುರತಗೇರ( ಪುರಗರೆ) ಕೈಲಾಸ ಲಿಂಗ ಶ್ರೀಗಳು ವಹಿಸಲಿದ್ದಾರೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಮೂರ್ತಿ ಅಯ್ಯಪ್ಪಯ್ಯ ಸಿ ಸಾರಂಗಮಠ ವಹಿಸಲಿದ್ದಾರೆ ಹಾಗೂ ನ್ಯಾಯವಾದಿ ವೇದಮೂರ್ತಿ ಕೆಎಮ್ ಸಾರಂಗಮಠ ಮತ್ತು ನಿವೃತ್ತ ಶಿಕ್ಷಕ ಬಸವರಾಜ್ ಹೆಚ್ ಪಾಟೀಲ್ ಉಪಸ್ಥಿತರಿರುವರು

ಮುಖ್ಯ ಅತಿಥಿಗಳಾಗಿ ಸಂಸದ ಪಿಸಿ ಗದ್ದಿಗೌಡರ ಕರ್ನಾಟಕ ಸರ್ಕಾರದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಹುನಗುಂದದ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ ಎಸ್ ಆರ್ ಎನ್ ಇ ಫೌಂಡೇಶನ್, ಅಧ್ಯಕ್ಷೆ ಎಸ್ ಆರ್ ನವಲಿ ಹಿರೇಮಠ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗಪ್ಪ ಕಲ್ಗುಡಿ ಸದಸ್ಯರಾದ ಶ್ರೀಮತಿ ಬಸಮ್ಮ ಸುರೇಶ ಬಾದವಾಡಗಿ ಮಲ್ಲಪ್ಪ ಸಂ ಗೊನ್ನಾಗರ ಭಾಗವಹಿಸಲಿದ್ದಾರೆ

ಜಾತ್ರೆಯ ನಿಮಿತ್ತ ಕಳೆದ ಐದು ದಿನದಿಂದ ನಡೆಯುತ್ತಿರುವ  ೧೪ನೇ ಶತಮಾನದ, ಸಾದ್ವಿಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪುರಾಣ ಮುಕ್ತಾಯ ಸಮಾರಂಭ ಅಂದು ರಾತ್ರಿ ಜರುಗಲಿದೆ. ಅಂದು ರಾತ್ರಿ 10:30 ಕ್ಕೆ ಮೋಹನ ಕಿರಣಗಿ ಅವರಿಂದ ರಚಿತವಾದ ಅಣ್ಣ ತಂಗಿ ನಾಟಕ ಜರುಗಲಿದೆ ಕಾರಣ ಸುತ್ತಮುತ್ತಲಿನ ಸದ್ಭಕ್ತರು ಪಾಲ್ಗೊಂಡು ಲಕ್ಕಮ್ಮ ದೇವಿ ಕೃಪೆಗೆ ಪಾತ್ರರಾಗಬೇಕೆಂದು ಬನ್ನಿಹಟ್ಟಿ ಜಾತ್ರಾ ಸಮಿತಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group