spot_img
spot_img

ಬಸವ ಧರ್ಮ ವಿಶ್ವ ಧರ್ಮ

Must Read

- Advertisement -

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಇವರಿಂದ ದಿ. 21ರಂದು ವಿಶ್ವ ಗುರು, ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯನ್ನು  ಲಿಂ. ಶರಣ ವಸಂತ ತೋರಣಗಟ್ಟಿ ವೇದಿಕೆಯಲ್ಲಿ ಆಚರಿಸಲಾಯಿತು.

ವೇದಿಕೆಯನ್ನು ಅಲಂಕರಿಸಿ ಉಪನ್ಯಾಸವನ್ನು ಶರಣ ಪ್ರೊ. ಶ್ರೀಕಾಂತ ಶಾನವಾಡ ಅವರು “ಧರ್ಮ ಗುರು ಬಸವಣ್ಣನವರು ಹಾಗೂ ಶರಣ ಸಂಸ್ಕೃತಿ” ಕುರಿತು ಮಾತನಾಡಿದರು.

ಬಸವ ಧರ್ಮವೆಂಬುದು ಕೇವಲ ಒಬ್ಬ ವ್ಯಕ್ತಿ ಒಂದು ಸಮಾಜಕ್ಕೆ ಸೀಮಿತವಾಗಿರದೆ ಇಡಿ ಮನುಕುಲದ ಉದ್ಧಾರವಾಗಿದೆ. “ಬಸವ ಧರ್ಮ ವಿಶ್ವ ಧರ್ಮ” . ಬಸವಣ್ಣನವರು ಕೇವಲ ಧರ್ಮವನ್ನು ಸ್ಥಾಪನೆ ಮಾಡದೆ ಮಾನವ ಧರ್ಮ ಸ್ಥಾಪನೆ ಮಾಡಿದವರು. ಪ್ರತಿ ನಿತ್ಯ ನಡೆಯುವ ವಾಸ್ತವದ ಸಂಗತಿಗಳನ್ನು ನಮ್ಮ ಮುಂದೆ ಬಿಚ್ಚಿಟ್ಟು ಹೃದಯಕ್ಕೆ ಹತ್ತಿರವಾದವರು. ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ಎಂದು ಹೇಳುವ ಮೂಲಕ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದವರು. ನಮಗೆ ಬೇಡುವ ಸಂಸ್ಕೃತಿ ಅಲ್ಲ ದುಡಿದು ತಿನ್ನುವ ಮತ್ತು ಹಂಚಿ ಉಣ್ಣುವ ಸಂಸ್ಕೃತಿಯನ್ನು ಕಲಿಸಿ ಕೊಟ್ಟವರು. ಕಾಯಕ ದಾಸೋಹದ ಸಂಸ್ಕೃತಿ, ನುಡಿದಂತೆ ನಡೆಯುವ ಸಂಸ್ಕೃತಿ, ದೇವರನ್ನೇ ಪ್ರಶ್ನಿಸುವ ಸಂಸ್ಕೃತಿ, ಭಕ್ತರ ಕುಲವನ್ನು ಎತ್ತಿ ಹಿಡಿಯುವ ಸಂಸ್ಕೃತಿ ಎಂದು ಶರಣ ಸಂಸ್ಕೃತಿಯ ಬಗ್ಗೆ ಎಳೆ ಎಳೆಯಾಗಿ ತಮ್ಮ ಮನದ ಮಾತುಗಳನ್ನು ಎಲ್ಲರ ಮನ ಮುಟ್ಟುವಂತೆ  ಉಪನ್ಯಾಸವನ್ನು ನೀಡಿದರು. 

- Advertisement -

   

ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಪ.ಪೂಜ್ಯ ಗುರುಗಳಾದ ಶ್ರೀ ಬಸವ ಕಿರಣ ಮಹಾ ಸ್ವಾಮಿಗಳು, ಕೊರಟಗೆರೆ, ಜಿ. ತುಮಕೂರು ಇವರು, ಬಿದ್ದವರನ್ನು ಎತ್ತಿ ಹಿಡಿಯುವ ಮೂಲಕ ಇಡಿ ಸಮಾಜವನ್ನು ಎತ್ತಿ ಹಿಡಿಯುವ ಕೆಲಸವನ್ನು ಬಸವಣ್ಣವರು ಮಾಡಿದ್ದಾರೆ.

ಪ್ರಜಾಪ್ರಭುತ್ವದ ತತ್ವವನ್ನು ಹನ್ನೆರಡನೇ ಶತಮಾನದಲ್ಲಿ ಹೇಳಿದ್ದಾರೆ. ಕಾಯಕ, ದಾಸೋಹ , ಎಲ್ಲಕ್ಕಿಂತ ಹೆಚ್ಚಾಗಿ ಶಿವಯೋಗ ತತ್ವವನ್ನು ಬಸವಣ್ಣನವರು ನಮಗೆ ಕೊಟ್ಟಿದ್ದಾರೆ. ಅತ್ಯದ್ಭುತವಾದ ಮಾನವೀಯ ಮೌಲ್ಯಗಳನ್ನು ಬಸವಾದಿ ಶರಣರು ನಮಗೆ ಕೊಟ್ಟಿದ್ದಾರೆ . ಕಳ್ಳನನ್ನು ಶರಣನ್ನಾಗಿ ಪರಿವರ್ತಿಸುವ ಅದ್ಭುತ ಗುಣವನ್ನು ಬಸವಣ್ಣನವರು ಹೊಂದಿದ್ದರು ಇಂತಹ ಮೌಲ್ಯಯುತವಾದ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಂಡ ಜೀವನದಲ್ಲಿ ಶಾಂತಿ ನೆಮ್ಮದಿ ಪಡೆದು ಕೊಳ್ಳಬೇಕೆಂದು ತಮ್ಮ ಆಶಿರ್ವಚನದಲ್ಲಿ ಹೇಳಿದರು.

- Advertisement -

ಈ ಸಭೆಯಲ್ಲಿ ಶರಣರಾದ ಅಶೋಕ ಮಳಗಲಿ, ವಾಯ್  ಎನ್. ಶಿಂತ್ರಿ ಹಾಗೂ ಶರಣೆ ಡಾ. ವಿಜಯ ಲಕ್ಷ್ಮಿ ಪುಟ್ಟಿ ಇವರನ್ನು ಸನ್ಮಾನಿಸಲಾಯಿತು. ಸ್ತ್ರೀ ಸಮಾನತೆಯ ಹರಿಕಾರ ಬಸವಣ್ಣನವರ  ಕೃಪಾಶೀರ್ವಾದದಿಂದ  ಇಂದು ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ ಎಂದು ಡಾ ವಿಜಯ ಲಕ್ಷ್ಮಿ ಪುಟ್ಟಿ ಅವರು ಹೇಳಿದರು. 

ಅಧ್ಯಕ್ಷರಾದ ಎಸ್ ಜಿ ಸಿದ್ನಾಳರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಶರಣ ಸಂಸ್ಕೃತಿಯನ್ನು ಕಲಿಸಿ ಶರಣ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಹೇಳಿದರು. 

ಪ್ರಸಾದದ ವ್ಯವಸ್ಥೆಯನ್ನು ಶರಣರಾದ ಜೆ ಎನ್ ನರಸಣ್ಣವರ ಹಾಗೂ ಡಿ. ಜೀ ಬಾಗೇವಾಡಿಯವರು ಮಾಡಿದ್ದರು. ಪ್ರಾಸ್ತಾವಿಕ ನುಡಿಗಳನ್ನು ಶಂಕರ ಶೆಟ್ಟಿ ಅವರು, ಸ್ವಾಗತವನ್ನು ಶೈಲಜಾ ಮುನವಳ್ಳಿ ಅವರು, ಪ್ರಾರ್ಥನೆಯನ್ನು ಸಂಘಟನೆಯ ಶರಣೆಯರು, ನಿರೂಪಣೆಯನ್ನು ಮೇಘಾ ಪಾಟೀಲ ಸುನಿತಾ ನಂದೆಣ್ಣವರ ಹಾಗೂ ವಂದನಾರ್ಪಣೆ ಶೋಭಾ ಶಿವಳ್ಳಿಯವರು ನಡೆಸಿಕೊಟ್ಟರು. 

ಶರಣರಾದ ಸಂಕೇಶ್ವರ, ಪಾಟೀಲರು, ರುದ್ರಗೌಡ, ಗುರನ್ನವರ, ಕುಂದ್ರಾಳ, ಮುನವಳ್ಳಿ ಮಗದುಮ್ ಮುಂತಾದವರು ಹಾಗೂ ಶರಣೆಯರಾದ ದಾಕ್ಷಾಯಿಣಿ, ರೇಖಾ, ಉಮಾ, ಪ್ರೇಮಾ, ಜಯಶ್ರೀ ಲಲಿತಾ ಮುಂತಾದವರು ಸಭೆಯಲ್ಲಿ ಸಾಕಷ್ಟು ಜನ ಶರಣ ತಂದೆತಾಯಿಗಳೆಲ್ಲರೂ ಉಪಸ್ಥಿತರಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group