spot_img
spot_img

ಜಾನಪದದಲ್ಲಿ ಬಸವಣ್ಣ

Must Read

- Advertisement -

ಜಾನಪದದಲ್ಲಿ ಬಸವಣ್ಣ

ಹಡದವ್ವ ಮಾದವ್ವ ಹಡದಪ್ಪ ಮಾದರಸು
ಪಡೆದವ್ವ ಅಕ್ಕನಾಗಾಯಿ|
ಬಸವನಿಗೆ
ಬಿಡದೆ ಸಲುಹಿದನು ವರಸಂಗ||

ವೇದ ವೇದದ ವಾದ ಭೇದ ಹುಟ್ಟಿಸಿ ಜಗಕೆ
ದಾದು ಯಾರಿಲ್ಲ ಹೇಳುವುದಕ್ಕೆ|
ಬಸವಣ್ಣ
ಭೇದ ಅಳುಕಿಸಿದ ಕುಲ ಕುಲಕೆ.

ದಾಸೋಹಿ ಬಸವಣ್ಣ ದಾಸೋಹ ಕಲಿಸಿದನು
ದೇಶ ದೇಶೆಲ್ಲ ಕೇಳುತಲಿ|
ಹೊಸಮಾತ ಮಾಸಿದವು
ವೇದ ಹುಸಿಯೆಂದು.

- Advertisement -

ಹೊಲೆಯ ಮಾದಿಗರೆಂಬ ಬಲೆಯಾತ ಕಿತ್ತೊಗೆದ
ಭಲರೆ ಬಸವಯ್ಶಾ ಬಸವರಸ|
ನಿನ್ನುಸುರು
ನೆಲೆಯಾತು ನಿತ್ಶ ಜನಪದಕೆ

ಓದಿದನು ಬಸವಯ್ಶ ವೇದದೊಳಗಿನ ಹುಸಿಯ
ಭೇದ ಭೇದವನೆ ಬಿಚ್ಚಿಟ್ಟ|
ಜನಪದಕೆ
ತೇದುಂಡ ಜೀವಿ ಬಸವಣ್ಣ||

ಸಾಧು ಸಾಧಲೆ ಬಸವ ಓದು ಕಲಿಯಿತು ಜನವು
ಹೋದ ಹೋದಲ್ಲಿ ಹೊಸ ಮಾತು|ಕೇಳಿದವು
ಮೇದಿನಿಗೆ ಬಂತು ಹೊಸ ಬೆಳಕು||

- Advertisement -

ಹುಟ್ಟಿ ಬಂದನು ಬಸವ ಕಟ್ಟುದಕ ಕಲ್ಶಾಣ
ಬಿಟ್ಟು ಬಾಗೋಡಿ ನಾಗಾಯಿ|
ಯೊಡಗೂಡಿ
ಮೆಟ್ಟ ಮಾಡಿದನು ಸಂಗಮಕೆ

ಬಸವ ಸಾಲಿಯ ಕಲಿತ ಎಸೆವ ಸಂಗಮದೊಳಗೆ
ಹೆಸರುಜಾನಪದದಲ್ಲಿ ಬಸವಣ್ಣ ಪಡಕೊಂಡ ಜಗದೊಳಗೆ| ವರಸಂಗ
ಹಸು ಮಗನ ಹರಸಿ ಸಲಹಿದನು||

ಬಸವರಾಜ ಕೋಟಿ
ಶಿಕ್ಷಕರು, ಕುಲಗೋಡ

ಹುಸಿ ವೇದ ಹಾರವರು ಹಸಗೆಟ್ಟ ಲೋಕದಲಿ
ಗುಸುಮುಸಿಯು ನಡೆಯೆ ಬಸವನಿಗೆ| ವರಸಂಗ
ಹೊಸತು ಊದಿದನು ಕಿವಿ ಮಾತ||

🌹🙏ಜೈ ಬಸವಣ್ಣ🌹🙏

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group