spot_img
spot_img

ಬಸವಣ್ಣನವರು ಸಮಾಜ ಶುದ್ಧಗೊಳಿಸಿದ ಮಹಾನ ಮಾನವತಾವಾದಿ- ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

Must Read

- Advertisement -

ಮೂಡಲಗಿ: ‘ಮೇಲು, ಕೀಳು ಎಂಬ ಭೇದ ತೀವ್ರವಾಗಿದ್ದ 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನ, ಸಂದೇಶಗಳ ಮೂಲಕ ಸಮಾಜ ಶುದ್ಧಗೊಳಿಸಿದ ಮಹಾನ್ ಮಾನವತಾವಾದಿ’ ಎಂದು ಕನೇರಿಮಠದ ಶ್ರೀ ಸಿದ್ಧಿಗಿರಿಮಠದ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಲ್ಲೋಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಬಸವ ವೃತ್ತದಲ್ಲಿ ಅಶ್ವಾರೂಢ ಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆಯ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಬಸವಣ್ಣನವರು ಕಾಯಕನಿಷ್ಠೆ, ಸಮಾನತೆ, ಸಮಬಾಳ್ವೆ ಸಾರಿದ ದಾರ್ಶನಿಕ ಪುರುಷ ಎಂದರು.

ಬಸವಣ್ಣನವರ ಉಪದೇಶಗಳನ್ನು ಹೇಳುತ್ತೇವೆ ಆದರೆ ಆಚರಣೆ ಮಾಡುತ್ತಿಲ್ಲ. ಬಸವಣ್ಣವರ ಹೆಸರಿನಲ್ಲಿ ಕೆಲವು ಪಂಗಡಗಳು ಸಮಾಜವನ್ನು ಕೆಡಸುವ ಕಾರ್ಯಮಾಡುತ್ತಿದ್ದಾರೆ. ಭಕ್ತಿಭಂಡಾರಿ ಬಸವಣ್ಣನವರರನ್ನು ನಾಸ್ತಿಕರನ್ನಾಗಿಸಿ ದಾರಿತಪ್ಪಿಸುವಂತ ಜನರ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.

- Advertisement -

ಇಂಚಲದ ಸಾಧು ಸಂಸ್ಥಾನಮಠದ ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಮಹಾತ್ಮರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಿತ್ಯ ನೋಡುವ ಮೂಲಕ ಜೀವನದಲ್ಲಿ ಉತ್ತಮ ಬೆಳವಣಿಗೆಗೆ ಪ್ರೇರಣೆಯಾಗುತ್ತದೆ. ಕಲ್ಲೋಳಿಯ ಜನರು ಬಸವಣ್ಣನವರ ಪ್ರತಿಮೆ ಸ್ಥಾಪಿಸುವ ಮೂಲಕ ಶ್ಲಾಘನೀಯ ಕಾರ್ಯಮಾಡಿದ್ದಾರೆ ಎಂದರು.

ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ ಬಸವಾದಿ ಶರಣರ ನೂರಾರು ವಚನಗಳಲ್ಲಿ ಒಂದು ವಚನವನ್ನು ಪಾಲಿಸಿದರೂ ಜೀವನ ಸಾರ್ಥಕವಾಗುತ್ತದೆ. ಮನುಷ್ಯ ತಾನು ಇರುವಷ್ಟು ದಿನ ಸಮಾಜಮುಖಿಯಾಗಿ ಕಾರ್ಯಮಾಡಿ ಎಲ್ಲರಿಂದ ಲೇಸು ಎನಿಸಿಕೊಳ್ಳಬೇಕು ಎಂದರು.

ಬಸವಣ್ಣನವರ ಪ್ರತಿಮೆಯು ಬರೀ ಪ್ರತಿಮೆಯಾಗಬಾರದು ಊರಿನ ಎಲ್ಲ ಜನರಿಗೆ ಸಂದೇಶ ಸಾರುವ ಸ್ಪೂರ್ತಿಯ ತಾಣವಾಗಿ ಕಾಣಬೇಕು. ಜನರು ಬಸವಣ್ಣನವರ ವಚನಗಳನ್ನು ತಿಳಿದು ಅವುಗಳಂತೆ ನಡೆಯಬೇಕು ಎಂದರು.

- Advertisement -

ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಮಾತನಾಡಿ, ಮನುಕುಲಕದ ಉದ್ಧಾರಕ್ಕಾಗಿ ದೇವರು ಬಸವಣ್ಣನವರ ರೂಪದಲ್ಲಿ ಅವತರಿಸಿದ್ದಾರೆ. ಪ್ರತಿಮೆಗಳು ದೇವರ ರೂಪಗಳಾಗಿವೆ. ಲೋಕೋದ್ದಾರಕ್ಕಾಗಿ ಬದುಕು ಸವಿಸಿದ ಬಸವಣ್ಣನು ಎಲ್ಲ ಮನದಲ್ಲಿ ನೆಲೆಸಿದ್ದಾರೆ, ಸಾರ್ವಕಾಲಿಕವಾಗಿದ್ದಾರೆ ಎಂದರು.

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಸಂಕಲ್ಪದಂತೆ ಕಲ್ಲೋಳಿಯಲ್ಲಿ ಎಲ್ಲ ಸಮಾಜದ ಜನರು ಸೇರಿ ಬಸವೇಶ್ವರರ ಮೂರ್ತಿ ಸ್ಥಾಪಿಸಿದ್ದು ಸಮಾಜಕ್ಕೆ ಮಾದರಿಯಾಗಿದೆ. ಬಸವಣ್ಣನವರ ತತ್ವ, ಸಂದೇಶಗಳನ್ನು ಅನುಸರಿಸಿ ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.

ಬಸವವೃತ್ತ ನಿರ್ಮಾಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಈರಪ್ಪ ರಾಮಪ್ಪ ಬೆಳಕೂಡ ಅಧ್ಯಕ್ಷತೆ ವಹಿಸಿದ್ದರು.

ಪಟ್ಟಣದ ವಿವಿಧ ಸಮಾಜ ಮುಖ್ಯಸ್ಥರು ಹಾಗೂ ಸಹಕಾರಿ ಸಂಸ್ಥೆಗಳ ಅಧ್ಯಕ್ಷರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.

ಬಸವ ಕಮಿಟಿ ಅಧ್ಯಕ್ಷ ರಮೇಶ ಬೆಳಕೂಡ ಪ್ರಾಸ್ತಾವಿಕ ಮಾತನಾಡಿ, ಸಿದ್ದೇಶ್ವರ ಪಟ್ಟಣದ ಎಲ್ಲ ಸಮಾಜದ ಜನರ ಸಹಕಾರ, ದೇಣಿಗೆಯಿಂದ ಬಸವೇಶ್ವರರ ಪ್ರತಿಮೆಯನ್ನು ನಿರ್ಮಿಸಿದ್ದು, ಪ್ರತಿಮೆಯು ಸಹಬಾಳ್ವೆಯ ಪ್ರತೀಕವಾಗಿ ವೇದಿಕೆಯಲ್ಲಿ ಬಸವ ಕಮಿಟಿಯ ಸದಸ್ಯರಾದ ಕೃಷ್ಣಪ್ಪ ಮುಂಡಿಗನಾಳ, ಮಹಾದೇವ ಖಾನಾಪುರ, ಪರಪ್ಪ ಮಟಗಾರ, ಗಿರಿಮಲ್ಲಪ್ಪ ಸವಸುದ್ದಿ, ಭೀಮಪ್ಪ ಪಾಟೀಲ, ಮಲ್ಲಪ್ಪ ಕಡಾಡಿ ಉಪಸ್ಥಿತರಿದ್ದರು.

ವೀಣಾ, ಪ್ರೀತಿ ಮಂಟೂರ ಸಹೋದರಿಯರು ಪ್ರಾರ್ಥಿಸಿದರು, ಡಾ. ಭೋಜರಾಜ ಬೆಳಕೂಡ ಸ್ವಾಗತಿಸಿದರು, ಗಿರಿಮಲ್ಲಪ್ಪ ಸವಸುದ್ದಿ ವರದಿ ವಾಚನ ಮಾಡಿದರು, ಪ್ರಕಾಶ ಗರಗಟ್ಟಿ, ಡಾ. ಸಂಗಮೇಶ ಹೂಗಾರ ನಿರೂಪಿಸಿದರು, ರಮೇಶ ಹೆಬ್ಬಾರ ವಂದಿಸಿದರು.

ಮೆರವಣಿಗೆ:

ಸಮಾರಂಭದ ಪೂರ್ವದಲ್ಲಿ ಬಸವೇಶ್ವರ ಸೊಸೈಟಿಯಿಂದ ವಿವಿಧ ವಾದ್ಯಗಳೊಂದಿಗೆ, ಪೂರ್ಣ ಕುಂಭ ಮೇಳದೊಂದಿಗೆ ಮೆರವಣಿಗೆಯು ಅಕರ್ಷಣೀಯವಾಗಿತ್ತು. ಮೆರವಣಿಗೆಯಲ್ಲಿ ಪೂಜ್ಯರನ್ನು ಬರಮಾಡಿಕೊಂಡರು.

- Advertisement -
- Advertisement -

Latest News

ಸಿಂದಗಿ ನೀಲಗಂಗಾ ದೇವಿ ಜಾತ್ರೆ ಸಂಪನ್ನ

ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...
- Advertisement -

More Articles Like This

- Advertisement -
close
error: Content is protected !!
Join WhatsApp Group