ಎನಗೆ ತೋರದಿರಯ್ಯ
- Advertisement -
ಶಾಸಕರು ಮಂತ್ರಿಗಳು ಮನೆಗೆ ಬಂದರೆ
ಹಣ್ಣು ಹಂಪಲು ನೀಡಿ ಸತ್ಕರಿಸುವಿರಯ್ಯ
ಅಧಿಕಾರಿಗಳು ಪುಡಾರಿಗಳು ಬಂದರೆ
ಶರಬತ್ ಟೀ ಬಿಸ್ಕತ್ ನೀಡಿ
ಉಪಚರಿಸುವಿರಯ್ಯ
ಕಾವಿಗಳು ದಯಮಾಡಿಸಿದರೆ
ಶಾಲು ಹೊದಿಸಿ ಮಣೆ ಹಾಕಿ
ಪಾದ ತೊಳೆದು ಪೂಜೆ ಮಾಡಿ
ನೀರು ಮನೆ ತುಂಬಾ ಸಿಂಪಡಿಸುವಿರಯ್ಯ
ಮನೆಗೆಲಸದವರು ಮನೆಗೆ ಬಂದರೆ
ಮಡಿ ಮೈಲಿಗೆ ಎಂದು ಮೂಗು ಮೂರಿಯುವ
ದಡ್ಡ ಲಿಂಗಾಯತರೆನ್ನುವವರ ಮುಖ
ಎನಗೆ ತೋರದಿರಯ್ಯ ಬಸವಪ್ರಿಯ ಶಶಿಕಾಂತ
—————————— —————————— ——–
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಮಡಿ ಮೈಲಿಗೆ ಎಂದು ಮೂಗು ಮೂರಿಯುವ
ದಡ್ಡ ಲಿಂಗಾಯತರೆನ್ನುವವರ ಮುಖ
ಎನಗೆ ತೋರದಿರಯ್ಯ ಬಸವಪ್ರಿಯ ಶಶಿಕಾಂತ
——————————
ಡಾ ಶಶಿಕಾಂತ ಪಟ್ಟಣ ರಾಮದುರ್ಗ