- Advertisement -
ಹೊಸದೆಹಲಿ – ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶದ ವಾರಾಣಸಿ ಗೆ ಹೊರಡುತ್ತಿದ್ದ ಇಂಡಿಗೋ 6E2211 ವಿಮಾನವನ್ನು ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ರದ್ದು ಮಾಡಿ ಬಾಂಬ್ ಗಾಗಿ ಶೋಧಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನದ ಶೌಚಾಲಯದಲ್ಲಿ ಕಾಗದದ ತುಣುಕೊಂದರಲ್ಲಿ ವಿಮಾನದಲ್ಲಿ ಬಾಂಬ್ ಇದೆ ಎಂಬ ಬರಹ ದಿ. ೨೮ ರಂದು ಬೆಳಿಗ್ಗೆ ೫.೩೦ ಕ್ಕೆ ಪತ್ತೆಯಾಗಿರುವುದರಿಂದ ಇನ್ನೇನು ಹಾರಾಟ ಮಾಡಬೇಕಿದ್ದ ಇಂಡಿಗೋ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗೆ ಇಳಿಸಿ ಶೋಧ ಕಾರ್ಯ ನಡೆಸಲಾಯಿತು.
ಇನ್ನು ೩೦ ನಿಮಿಷದಲ್ಲಿ ಬಾಂಬ್ ಸ್ಫೋಟಿಸುತ್ತದೆ ಎಂಬ ಬರಹವಿರುವ ಕಾಗದವನ್ನು ನೋಡಿದ ಪೈಲಟ್ ತಕ್ಷಣವೇ ಕಂಟ್ರೋಲ್ ರೂಂ ಗೆ ತಿಳಿಸಿದಾಗ ವಿಮಾನದಲ್ಲಿ ಇದ್ದ ೧೭೬ ಪ್ರಯಾಣಿಕರನ್ನು ತಕ್ಷಣವೇ ಕೆಳಗಿಳಿಸಲಾಯಿತು. ನಂತರ ವಿಮಾನವನ್ನು ಜನಸಂದಣಿಯಿರದ ಪ್ರದೇಶಕ್ಕೆ ಕರೆದೊಯ್ದು ತಪಾಸಣೆ ನಡೆಸಲಾಯಿತು.