ಹಳ್ಳೂರ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ ರೂ. 22.60 ಲಕ್ಷ ಲಾಭ

0
24

ಹಳ್ಳೂರ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ ರೂ. 22.60 ಲಕ್ಷ ಲಾಭಮೂಡಲಗಿ:-ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಶೇರುದಾರರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸೊಸಾಯಿಟಿಯು ಉನ್ನತ ಮಟ್ಟಕ್ಕೆ ಬೆಳೆದು 2025 ಮಾರ್ಚ್ ಅಂತ್ಯಕ್ಕೆ 22.60 ಲಕ್ಷ ಲಾಭಗಳಿಸಿ ಪ್ರಗತಿ ಹೊಂದುತ್ತಿದೆ ಎಂದು ಸೊಸಾಯಿಟಿ ನಿರ್ದೇಶಕ ಬಿ. ಆರ್ ಸಾಯನ್ನವರ ಹೇಳಿದರು.

ಬಸವೇಶ್ವರ ಸೊಸೈಟಿಯ ಸಭಾ ಭವನದಲ್ಲಿ ಜರುಗಿದ ಮಾರ್ಚ್ ಅಂತ್ಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು 2025ನೇ ಮಾರ್ಚ ಅಂತ್ಯದಲ್ಲಿ ಸೊಸಾಯಿಟಿಯು ರೂ, 23.70 ಲಕ್ಷ ಶೇರು ಬಂಡವಾಳ ಹೊಂದಿದ್ದು. ಒಟ್ಟು ನಿಧಿಗಳು 1.3 ಕೋಟಿ, ಸಂಘದ ಠೇವುಗಳು 12.10 ಕೋಟಿ ,ಗುಂತಾವಣೆಗಳು 4.11 ಕೋಟಿ.ರೂ , 7.94 ಕೋಟಿ.ರೂಪಾಯಿ ವಿವಿಧ ರೀತಿಯ ಸಾಲಗಳನ್ನು ಗ್ರಾಹಕರಿಗೆ ವಿತರಿಸಿದ್ದು, ಒಟ್ಟು 13.78 ಕೋಟಿ ಸಂಘದಿಂದ ದುಡಿಯುವ ಬಂಡವಾಳ ಹೊಂದಿ ಮಾರ್ಚ್ ಅಂತ್ಯಕ್ಕೆ ಸೊಸೈಟಿಯು 22.60 ಲಕ್ಷ ಉಳಿತಾಯ ಮಾಡಿ ಲಾಭದಾಯಕವಾಗಿದೆ ಎಂದು ಹೇಳಿದರು.

ಮುಖ್ಯ ಕಾರ್ಯನಿರ್ವಾಹಕರಾದ ಮಲ್ಲಪ್ಪ ನಡಗಡ್ಡಿ ಮಾತನಾಡಿ, ನಮ್ಮ ಸೊಸೈಟಿಯು ಗ್ರಾಮೀಣ ಭಾಗದ ಗ್ರಾಹಕರ ಆಶಾಕಿರಣವಾಗಿ ಉತ್ತಮವಾಗಿ ಸಹಕರಿಸುತ್ತಿದೆ ಎಂದು ಹೇಳಿದರು.

ಈ ಸಮಯದಲ್ಲಿ ಸೊಸೈಟಿಯ ಅಧ್ಯಕ್ಷ ಅಲ್ಲಪ್ಪ ಬೆಳಗಲಿ, ನಿರ್ದೇಶಕರಾದ ಕೆ.ಜಿ ಮುಧೋಳ, ಶಿವಬಸು ಜುಂಜರವಾಡ,ಕೆ.ಬಿ ಮುಧೋಳ,ಬಾಳಗೌಡ ಪಾಟೀಲ, ಶ್ರೀಶೈಲ ಕಂಬಾರ , ಸಂಸ್ಥೆಯ ಮಾರ್ಗದರ್ಶಕರಾದ ಶಿವನಗೌಡ ಪಾಟೀಲ, ಮುಖಂಡರಾದ ಐ.ಬಿ ಬೆಳಗಲಿ ಹಾಗೂ ಬೀಸನಕೊಪ್ಪ ಶಾಖೆಯ ಸಲಹಾ ಸಮಿತಿಯವರು ಸಿಬ್ಬಂದಿವರ್ಗದವರು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here