spot_img
spot_img

ಬೀದರ; ಅಬಕಾರಿ ಇಲಾಖೆ ಮುಂದುವರಿದ ದಾಳಿ

Must Read

- Advertisement -

ದುಷ್ಕರ್ಮಿಗಳಿಗೆ ಸಿಂಹಸ್ವಪ್ನವಾದ ಇಲಾಖೆ 

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಅಬಕಾರಿ ಇಲಾಖೆ ಬೀದರ ಜಿಲ್ಲಾದ್ಯಂತ ೨೪ ಚೆಕ್ ಪೋಸ್ಟ್ ಹಾಕಿದ್ದು ಚುನಾವಣೆಯ ಸಮಯದಲ್ಲಿ ಅಕ್ರಮ ಚಟುವಟಿಕೆ ಮಾಡುವವರ ಮೇಲೆ  ಹದ್ದಿನ ಕಣ್ಣೇ ಇಟ್ಟಿದೆ ಎಂದು ಹೇಳಬಹುದು.

ಮೊನ್ನೆಯ ದಾಳಿಯ ನಂತರ ಮತ್ತೆ  ಬೀದರ ಜಿಲ್ಲಾದ್ಯಂತ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಒಂದು ಕಾರು  ಸೇರಿದಂತೆ ಸುಮಾರು 2,19,000 ರೂಪಾಯಿಯ ಮೌಲ್ಯ ಮದ್ಯ ವಶಪಡಿಸಿಕೊಂಡಿದ್ದಾರೆ.

- Advertisement -

ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಜಾರಿ ಮತ್ತು ತನಿಖೆ ಕಲಬುರಗಿ ವಿಭಾಗ, ಕಲಬುರಗಿ ಇದರ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಡೆಪ್ಯೂಟಿ ಕಮೀಷನ್‍ರ ಆಫ್ ಎಕ್ಸೈಜ್ ಬೀದರ ಜಿಲ್ಲೆ ಬೀದರ ರವರ ಆದೇಶದ ಮೇರೆಗೆ 2023 ಚುನಾವಣಾ ಪ್ರಯುಕ್ತ ಬೀದರ ಜಿಲ್ಲೆಯ ಔರಾದ್ ಭಾಲ್ಕಿ, ಬಸವಕಲ್ಯಾಣ, ತಾಲೂಕಿನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಸುಮಾರು 2,19,000ರೂಪಾಯಿ ಮೌಲ್ಯದ ಮದ್ಯ ಹಾಗೂ ಒಂದು ಕಾರು ಟಾಟಾ ಇಂಡಿಕಾ ಜಪ್ತಿ ಮಾಡಿಲಾಗಿದ್ದು ಒಬ್ಬ ಆರೋಪಿ ಪರಾರಿಯಾಗಿದ್ದಾನೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೀದರನ ಅಬಕಾರಿ ವರಿಷ್ಠರು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದರು.

ಮಂಗಳವಾರ ಮುಂಜಾನೆ 11:30 ಗಂಟೆಯ ಸಮಯದಲ್ಲಿ ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆಗಾವಲು ಮಾಡುತ್ತಿದ್ದ ಸಮಯದಲ್ಲಿ ಸದರಿ ಗ್ರಾಮದಲ್ಲಿರುವ ಅಂಬೇಡ್ಕರ್ ವೃತ್ತದ ಹತ್ತಿರದಲ್ಲಿ ಆರೋಪಿತನಾದ ಸೂರ್ಯಕಾಂತ್ ಹನುಮಂತ ಪಡಿವಾಳ್ಕರ್ ಈತನಿಂದ 10.250 ಲೀಟರ್ ನಷ್ಟು ಗೋವಾ ರಾಜ್ಯದ ಮದ್ಯವನ್ನು ವ್ಯಕ್ತಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- Advertisement -

ಸದರಿ ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ/ಸಿಬ್ಬಂದಿಗಳ ಹೆಸರು ಸತ್ಯನಾರಾಯಣ ತ್ರಿವೇದಿ, ಅಬಕಾರಿ ನಿರೀಕ್ಷಕರು,             ಅಬಕಾರಿ ಪೇದೆಯವರಾದ ರಾಜರೆಡ್ಡಿ, ಶಾಂತಕುಮಾರ, ಶ್ರೀಕಾಂತ  ಇವರುಗಳು ಭಾಗವಹಿಸಿದ್ದರು. ಜಪ್ತಿಪಡಿಸಿರುವ ಮುದ್ದೆಮಾಲಿನ ಅಂದಾಜು ಒಟ್ಟು ಮೌಲ್ಯ ರೂ.13600/-

ಬೀದರ ಜಿಲ್ಲೆ ಭಾಲ್ಕಿ ಪಟ್ಟಣದಲ್ಲಿ ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಭಾಲ್ಕಿ ಪಟ್ಟಣದ ಬಿ.ಕೆ.ಐ.ಟಿ ಕಾಲೇಜ ಹತ್ತಿರದ ಮುಖ್ಯ ರಸ್ತೆಯಲ್ಲಿ ಆರೋಪಿತನಾದ ನಿಖಿಲ್ ತಂದೆ ಸಂಗಪ್ಪ ಬನ್ನಾಳೆ ಸಾ: ಮದಕಟ್ಟಿ ತಾ: ಭಾಲ್ಕಿ ಇತನು ಹೊಂಡಾ ಎಕ್ಟಿವಾ ದ್ವಿಚಕ್ರ ವಾಹನ ನೊಂದಣಿ ಸಂಖ್ಯೆ: ಟಿಎಸ್-13 ಇಡಿ-4387 ರ ದ್ವಿಚಕ್ರ ವಾಹನದ ಮೇಲೆ ಅಕ್ರಮವಾಗಿ 8.640 ಲೀ. ಸ್ವದೇಶಿ ಮದ್ಯ ಮತ್ತು 23.400 ಲೀ. ಬೀಯರ್ ಹೊಂದಿ ಮಾರಾಟ ಉದ್ದೇಶಕ್ಕಾಗಿ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದರಿ ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ/ಸಿಬ್ಬಂದಿಗಳ ಹೆಸರು ನಿಂಗನಗೌಡ ಪಾಟೀಲ, ಅಬಕಾರಿ ನಿರೀಕ್ಷಕರು, ಅಬಕಾರಿ ಪೇದೆಯವರಾದ ಸುನಿಲ ಶಿಂಧೆ, ಶಶಿಕಾಂತ ಭಾಲ್ಕಿ ವಲಯ ಇವರುಗಳು ಭಾಗವಹಿಸಿದ್ದರು. ಜಪ್ತಿ ಪಡಿಸಿರುವ ಮುದ್ದೆಮಾಲಿನ ಅಂದಾಜು ಒಟ್ಟು ಮೌಲ್ಯ ರೂ. 38680/-

ಹುಮನಾಬಾದ್ ತಾಲ್ಲೂಕಿನಲ್ಲಿ ಮಧ್ಯಾಹ್ನ 4:00  ಗಂಟೆಯ ಸಮಯದಲ್ಲಿ ಹುಮನಾಬಾದ ವಲಯ ನಿಂಬೂರು ಗ್ರಾಮದಲ್ಲಿರುವ ಆರೋಪಿತನಾದ ವಿದ್ಯಾಸಾಗರ ತಂದೆ ಮಾಣಿಕಪ್ಪಾ ಕೌಡೆ ಇತನ ಪಾನ ಡಬ್ಬಾ ಅಂಗಡಿಯಲ್ಲಿ ಒಟ್ಟು 8.640 ಲೀಟರ ಮದ್ಯ ಹಾಗೂ 11.760 ಲೀ ಬಿಯರ್ ಪತ್ತೆಹಚ್ಚಿ ಪ್ರಕರಣವನ್ನು ದಾಖಲಿಸಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದರಿ ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ/ಸಿಬ್ಬಂದಿಗಳ ಹೆಸರು ಚಂದ್ರಕಾಂತ, ಅಬಕಾರಿ ಉಪ ನಿರೀಕ್ಷಕರು-1, ಸಣ್ಣ ಮಾರುತಿ, ಅಬಕಾರಿ ಉಪ ನಿರೀಕ್ಷಕರು-2, ಹುಮನಾಬಾದ್ ವಲಯ ಮತ್ತು  ವೀರಶೇಟ್ಟಿ, ಅಬಕಾರಿ ಪೇದೆ, ಹುಮನಾಬಾದ್ ವಲಯ ಇವರುಗಳು ಭಾಗವಹಿಸಿದ್ದರು. ಜಪ್ತಿಪಡಿಸಿರುವ ಮುದ್ದೆಮಾಲಿನ ಅಂದಾಜು ಒಟ್ಟು ಮೌಲ್ಯ ರೂ. 6432/-

ಮೇಲ್ಕಂಡ ಎಲ್ಲಾ (03) ಮೂರು ಪ್ರಕರಣಗಳಲ್ಲಿ 03 ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಪಸಲಾಗಿದ್ದು, ಸದರಿ ಜಪ್ತಾದ ಮುದ್ದೆಮಾಲಿನ  ಒಟ್ಟು ಮೌಲ್ಯವು ರೂ.58712/- ಗಳಾಗಿರುತ್ತದೆ.

ಹೀಗೆ ಬೀದರ ಜಿಲ್ಲೆ ಅಬಕಾರಿ ಇಲಾಖೆ ದಿನಾಲು ನಾಲ್ಕು ಐದು ಕಡೆ ದಾಳಿ ಮಾಡಿ ಅನೈತಿಕ ಚಟುವಟಿಕೆ ಯಲ್ಲಿ ಭಾಗಿಯಾದ, ಭಾಗಿಯಾಗುತ್ತಿರುವವರಿಗೆ ಸಿಂಹ ಸ್ವಪ್ನರಾಗಿದ್ದಾರೆ ಎಂದು ಹೇಳಬಹುದು. 

ರಾಜ್ಯದಲ್ಲಿ ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಅಕ್ರಮ ಚಟುವಟಿಕೆ ನಡೆಸಲು ಸಮಾಜ ಘಾತುಕ ಶಕ್ತಿಗಳು ಸಜ್ಜಾಗಿವೆ. ಇವುಗಳನ್ನು ಸದೆಬಡಿಯಲು ಬೀದರ ಪೊಲೀಸರು ಹಾಗು ಅಬಕಾರಿ ಇಲಾಖೆಯ ಅಧಿಕಾರಿಗಳು ಕೂಡ ಎಲ್ಲ ರೀತಿಯಿಂದ ಸಜ್ಜಾಗಿದ್ದು ದುಷ್ಕರ್ಮಿಗಳ ಮಟ್ಟ ಹಾಕಲಿದ್ದಾರೆ ಎಂಬುದು ಈ ದಾಳಿಗಳಿಂದ ತಿಳಿದುಬರುತ್ತದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group