spot_img
spot_img

ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು ಮಾಲಿಕೆ

Must Read

- Advertisement -

ಎಲ್ಲ ವರ್ಗದ ಓದುಗರ ಭಾವನೆಗಳಿಗೆ ಸ್ಪಂದಿಸಿದ ವಿಶೇಷ ಸಾಹಿತಿ ದಿ.ಕೃಷ್ಣಮೂರ್ತಿ ಪುರಾಣಿಕ- ಡಾ. ನಿರ್ಮಲಾ ಬಟ್ಟಲ ಅಭಿಮತ.

ಬೆಳಗಾವಿ: ಎಲ್ಲ ವರ್ಗದ ಓದುಗರ ಮನಸ್ಥಿತಿ ಅರ್ಥ ಮಾಡಿಕೊಂಡು ಎಲ್ಲರಿಗೂ ಕಾದಂಬರಿಯ ಪಾತ್ರಗಳ ಮೂಲಕ ಮೌಲ್ಯ ಬಿತ್ತುವ ಕಾರ್ಯವನ್ನು. ಸಾಮಾಜಿಕ ವಿಷಯ ಆಧಾರಿತ, ಹಲವು ಸಮಸ್ಯೆಗಳಿಗೆ ಉತ್ತರವನ್ನು ಕೊಡುವ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ವಿಶೇಷ ಸಾಹಿತ್ಯ ದಿ. ಕೃಷ್ಣಮೂರ್ತಿ ಪುರಾಣಿಕ ರವರ ಬರವಣಿಗೆಯಲ್ಲಿತ್ತು ಎಂದು ಬೆಳಗಾವಿಯ ಎಂ ಎನ್ ಆರ್ ಎಸ್ ಬಿ.ಎಡ್ ಕಾಲೇಜಿನ ಪ್ರಾಚಾರ್ಯೆ ಡಾ. ನಿರ್ಮಲಾ ಬಟ್ಟಲ ಹೇಳಿದರು.

ಶನಿವಾರ ದಿ. 16 ರಂದು ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ ಹಮ್ಮಿಕೊಳ್ಳಲಾದ ಬೆಳಗಾವಿ ಜಿಲ್ಲೆಯ ಶತಮಾನ ಕಂಡ  ಸಾಹಿತಿಗಳು  3 ನೇ ತಿಂಗಳ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.

- Advertisement -

ಸ್ತ್ರೀ ಸಂವೇದನೆ ಪ್ರಧಾನ ಭಾವನೆ ಅವರ  ಕಾದಂಬರಿಗಳ ಕಥಾವಸ್ತು. ಕಾದಂಬರಿಯ ನಾಯಕಿ ಪಾತ್ರದ ಮೂಲಕ ಅಂದಿನ ಕಾಲದ ಸಾಮಾಜಿಕ, ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಮಾಡಿರುವುದು ಅವರ ಕಾದಂಬರಿಗಳ ವಿಶೇಷತೆ. ಪರಿಸ್ಥಿತಿಯೊಂದಿಗೆ  ರಾಜಿಮಾಡಿಕೊಳ್ಳದೆ ತ್ಯಾಗಮಯಿಯಾಗಿ, ಸಹನಾ ಮೂರ್ತಿಯಾಗಿ ನಾಯಕಿ ನಿಲ್ಲುವ ಮೂಲಕ ಸಾಮಾಜಿಕ ಸಂದೇಶ ನೀಡುತ್ತಾರೆ.

ಮಹಿಳೆಯರ ಮನ ಮಿಡಿಯುವ ಹಾಲುಂಡ ತವರು, ಸನಾದಿ ಅಪ್ಪಣ್ಣ, ಕುಲವಧು, ಮಣ್ಣಿನ ಮಗಳು  ಮುಂತಾದ ರಾಷ್ಟ್ರಪ್ರಶಸ್ತಿ ಪಡೆದ ಚಲನಚಿತ್ರಗಳು   ಕೃಷ್ಣಮೂರ್ತಿ ಪುರಾಣಿಕರವರ ಕಾದಂಬರಿ ಆಧಾರಿತ ಆಗಿವೆ ಎಂಬುದು ಬೆಳಗಾವಿ ಜಿಲ್ಲೆಯ ಹೆಮ್ಮೆಯಾಗಿದೆ. ಇಂತಹ ಸುಮಾರು 80ಕ್ಕೂ ಹೆಚ್ಚು ಕಾದಂಬರಿಗಳನ್ನು, ಕವನ ಸಂಕಲನಗಳನ್ನು ವಿಶೇಷ ನಾಟಕಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ ಎಂದು ಬಣ್ಣಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ. ಸಾ. ಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಶತಮಾನದಲ್ಲಿ ಆಗಿ ಹೋದ ಬೆಳಗಾವಿ ಜಿಲ್ಲೆಯ ಸಾಹಿತಿಗಳ ಸೇವೆ ನಿಜಕ್ಕೂ ಅವಿಸ್ಮರಣೀಯ ಆ ನಿಟ್ಟಿನಲ್ಲಿ ಅವರನ್ನು ಅವರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ನೆನಪು ಮಾಡಿಕೊಡುವುದರ ಜೊತೆಗೆ ಯುವ ಜನತೆಗೆ  ಪ್ರೇರಣೆ ಕೊಡಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಇದರ ಪ್ರಯೋಜನ ಎಲ್ಲರೂ ಪಡೆಯಬೇಕಿದೆ ಎಂದರು.

- Advertisement -

ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಎಲ್ ಎಸ್ ಶಾಸ್ತ್ರಿ ಮಾತನಾಡಿ, ಜಿಲ್ಲಾ ಘಟಕದ ವತಿಯಿಂದ ಅನೇಕ  ವಿಶಿಷ್ಟ ಕಾರ್ಯಕ್ರಮಗಳು ನಡೆಯುತ್ತಿವೆ ಆ ನಿಟ್ಟಿನಲ್ಲಿ ಹಿರಿಯ ಸಾಹಿತಿಗಳನ್ನು ನೆನೆಯುವ ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ ಎನ್ನುತ್ತಾ ದಿ.ಕೃಷ್ಣಮೂರ್ತಿ ಪುರಾಣಿಕರ ಜೊತೆಗಿನ 30 ವರ್ಷಗಳ ಒಡನಾಟವನ್ನು ನೆನೆದರು. 

ಇದೇ ಸಂದರ್ಭದಲ್ಲಿ ಚಿಕ್ಕೋಡಿಯಲ್ಲಿ ಜರುಗಿದ ಜಿಲ್ಲಾ ಸಮ್ಮೇಳನದ ಸ್ಮರಣ ಸಂಚಿಕೆ ‘ಗಡಿ ತೇರು ಬಿಡುಗಡೆಗೊಳಿಸಲಾಯಿತು ಹಾಗೂ ಇತ್ತೀಚೆಗೆ ರಾಜ್ಯ ಸಾರಿಗೆ ಸಂಸ್ಥೆಯ ಸಂಚಾರಿ ನಿರೀಕ್ಷಕರಾಗಿ ನಿವೃತ್ತರಾದ ಸಾಹಿತಿ ಮತ್ತು ಬೆಳಗಾವಿ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ವೀರಭದ್ರ ಅಂಗಡಿಯವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು  ಕಾರ್ಯಕ್ರಮದಲ್ಲಿ ಆನಂದ ಪುರಾಣಿಕ, ಹುಕ್ಕೇರಿ ತಾಲೂಕ ಕ.ಸಾ.ಪ ಅಧ್ಯಕ್ಷ ಪ್ರಕಾಶ ಅವಲಕ್ಕಿ,ಪ್ರತಿಭಾ ಕಳ್ಳಿಮಠ, ಜಿ.ಎಸ್ ಬೋಬ್ರಿ, ಲಕ್ಷ್ಮಿ ಮೊಗಡ್ಲಿಮಠ, ಸುಕನ್ಯಾ ಕುರಗುಂದಿ,ವಿಜಯ ಪತ್ತಾರ, ಬಸವರಾಜ ಬಾಯಣ್ಣವರ,ಪ್ರವೀಣ ಕಡಬಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.     

ಕಾರ್ಯಕ್ರಮದ ಆರಂಭದಲ್ಲಿ ವೀರಭದ್ರ ಅಂಗಡಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕಾರ್ಯದರ್ಶಿ ಸುನಿಲ ಹಲವಾಯಿ ನಿರೂಪಿಸಿದರು. ಕೊನೆಯಲ್ಲಿ ಶಿವಾನಂದ ತಲ್ಲೂರ ವಂದಿಸಿದರು

- Advertisement -
- Advertisement -

Latest News

ಸಿಂದಗಿ ಮಂಡಲ ವತಿಯಿಂದ ರಸ್ತಾರೋಖೋ ಪ್ರತಿಭಟನೆ

ಸಿಂದಗಿ - ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದು, ರಾಜ್ಯದಲ್ಲಿನ ಕಾನೂನ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಾಗೂ ವಾಲ್ಮೀಕಿ ನಿಗಮದ ಹಗರಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group