ನೋ ಪಾರ್ಕಿಂಗ್ ನಾಮ ಫಲಕ ಆಳವಡಿಸಲು ಬನಶಂಕರಿ ಸಂಚಾರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗೆ ಮನವಿ
ಬೆಂಗಳೂರು – ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಅಧಿಕವಾಗುತ್ತಿರುವ ಸಂಚಾರ ದಟ್ಟಣೆ ಸಂಬಂಧ ಪಾರ್ಕಿಂಗ್ ಅವ್ಯವಸ್ಥೆ – ಸಂಚಾರ ಕಿರಿಕಿರಿ ಎದುರಿಸುತ್ತಿರುವ ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಅವರಿಗೆ ಇತ್ತೀಚೆಗೆ ಸಿಂಹ ಸ್ವಪ್ನ ಕನ್ನಡಿಗರ ಬಳಗ (ರಿ) ಅಧ್ಯಕ್ಷರು ಹಾಗೂ ಬನಶಂಕರಿ 3 ನೇ ಹಂತದ ಗುರುದತ್ತ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಮಹಾ ಪ್ರಧಾನ ಕಾರ್ಯದರ್ಶಿಗಳು ಆದ ಜಯದೇವ ಸಿಂಗ್ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಗಿತ್ತು.ಮನವಿ ಪತ್ರಕ್ಕೆ ಸ್ಪಂದಿಸಿದ ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ವರ್ಗದವರು ಜುಲೈ 1 ರಂದು ಬನಶಂಕರಿ 3 ನೇ ಹಂತದ ಗುರುದತ್ತ ಬಡಾವಣೆಗೆ ಭೇಟಿ ನೀಡಿ ಬನಶಂಕರಿ 3 ನೇ ಹಂತದ ಗುರುದತ್ತ ಬಡಾವಣೆ ಯಿಂದ ನಗರದ ಪ್ರಮುಖ ರಸ್ತೆಗೆ ಸಂಪರ್ಕ ಕಲ್ಪಿಸುವ ದತ್ತಾತ್ರೇಯ ದೇವಾಲಯ ಹಾಗೂ ನರಗುಂದ ಶಾಲೆಯ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡಿದ್ದ ವಾಹನಗಳನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಬನಶಂಕರಿ ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ನೋ ಪಾರ್ಕಿಂಗ್ ನಾಮ ಫಲಕ ಅಳವಡಿಸಲು ಬಡಾವಣೆಯ ನಾಗರಿಕರು ಒತ್ತಾಯಿಸಿದರು.
ಖಾಸಗಿ ವಾಹನಗಳು, ಶಾಲಾ ವಾಹನಗಳು , ಆಟೋ – ದ್ವಿಚಕ್ರ ವಾಹನಗಳನ್ನು ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವ ವಾಹನಗಳ ವೀಲ್ ಗೆ ಕ್ಲ್ಯಾಂಪ್ ಹಾಕಬೇಕು ಎಂದು ಜಯದೇವ ಸಿಂಗ್ ಹಾಗೂ ಬಡಾವಣೆಯ ಸಮಸ್ತ ನಾಗರಿಕರು ಪೊಲೀಸ್ ಹಾಗೂ ಆರ್ .ಟಿ.ಓ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸಂಚಾರಿ ಪೊಲೀಸ್ ಇಲಾಖೆಯ ವತಿಯಿಂದ ನಗರದಲ್ಲಿ ಎಲ್ಲೆಲ್ಲಿ ಪಾರ್ಕಿಂಗ್ ಲಭ್ಯವಿದೆ ಎಂಬ ಬಗ್ಗೆ ಇಲ್ಲಿ ಪಾರ್ಕಿಂಗ್ ಮಾಡಿರುವ ವಾಹನ ಮಾಲೀಕರಿಗೆ ಬ್ಲೂ ಪ್ರಿಂಟ್ ನೀಡಲಿ ಎಂದು ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ .
ದತ್ತಾತ್ರೇಯ ದೇವಾಲಯದ ರಸ್ತೆಯು ಬಹಳ ಕಿರಿದಾದ ರಸ್ತೆಯಾಗಿದ್ದು ಈ ರಸ್ತೆ ವಿ(ಯು).ಬಿ.ಬೇಕರಿ , ಟಿ.ಜಿ.ಲೇಔಟ್, ಮಾರ್ಸ್ ಮೌಂಟ್ ಅಪಾರ್ಟ್ಮೆಂಟ್, ಟಾಟಾ ಪ್ರಮೌಂಟ್ ಅಪಾರ್ಟ್ಮೆಂಟ್, ಗುರುರಾಜ ಲೇಔಟ್, ಉತ್ತರಹಳ್ಳಿ ಮುಖ್ಯ ರಸ್ತೆ ಕಡೆಗೆ, ಹಾಗೂ ನರಗುಂದ ಶಾಲೆಗೆ ಹೋಗುವ ಮಕ್ಕಳು ಮತ್ತು ದತ್ತಾತ್ರೇಯ ದೇವಾಲಯಕ್ಕೆ ಹೋಗುವ ಭಕ್ತರು ಮತ್ತು ಔಟರ್ ರಿಂಗ್ ರೋಡ್ ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ .
ರಸ್ತೆಯ ಬದಿಯ ಎರಡು – ಬದಿಗಳಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಎದುರು – ಬದುರು ವಾಹನಗಳು ಬಂದಾಗ ಅಪಾಘಾತ ಆಗುವ ಸಾಧ್ಯತೆ ಹೆಚ್ಚು ಇರುವುದರಿಂದ ಈ ವಿಚಾರದಲ್ಲಿ ಸಂಚಾರಿ ಪೊಲೀಸ್ ಇಲಾಖೆಯ ವತಿಯಿಂದ ಶಾಶ್ವತವಾಗಿ ಪರಿಹಾರ ನೀಡಲಿ ಎಂದು ಸಿಂಹ ಸ್ವಪ್ನ ಕನ್ನಡಿಗರ ಬಳಗ (ರಿ) ಅಧ್ಯಕ್ಷರು ಹಾಗೂ ಬನಶಂಕರಿ 3 ನೇ ಹಂತದ ಗುರುದತ್ತ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಮಹಾ ಪ್ರಧಾನ ಕಾರ್ಯದರ್ಶಿಗಳು ಆದ ಜಯದೇವ ಸಿಂಗ್ ಹಾಗೂ ಗುರುದತ್ತ ಬಡಾವಣೆಯ ಸಮಸ್ತ ನಾಗರೀಕರು
ಒತ್ತಾಯಿಸಿದ್ದಾರೆ.
ಚಿತ್ರ: ವರದಿ:
ತೀರ್ಥಹಳ್ಳಿ ಅನಂತ ಕಲ್ಲಾಪುರ