ಮುಧೋಳ – ತಾಲೂಕಿನ ಶಿರೋಳ ಗ್ರಾಮದ ಆಶ್ರಯ ಪ್ಲಾಟದ ತಪೋನಿಷ್ಠ ಮಹಾಪುರುಷ ನಿರಾಭಾರಿ ಸದ್ಗುರು ನಿಜಗುಣರ ೩೧ ನೆಯ ಪುಣ್ಯ ಸ್ಮರಣೋತ್ಸವದ ಅಂಗವಾಗಿ ನಿಜಗುಣರ ಆಶ್ರಮದಲ್ಲಿ ಶುಕ್ರವಾರ ದಿನಾಂಕ ೮ ರಂದು ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಪೂಜ್ಯರಿಂದ ಪ್ರವಚನ ಕಾರ್ಯಕ್ರಮ ಜರುಗುವುದು.
ಸಭೆಯ ದಿವ್ಯ ಸಾನ್ನಿಧ್ಯವನ್ನು ಕೋಲೂರಿನ ಶಂಭುಲಿಂಗ ಆಶ್ರಮದ ಪೂಜ್ಯರಾದ ಕೃಷ್ಣೇಗೌಡರು ವಹಿಸುವರು. ಸಾನ್ನಿಧ್ಯವನ್ನು ಸೋಮಲಿಂಗಯ್ಯ ಶ್ರೀಗಳು, ಅಧ್ಯಕ್ಷತೆಯನ್ನು ವೆಂಕಣ್ಣ ಮಹಾರಾಜರು ಪಡತಾರೆ ಹಾಗೂ ಶಿವಯ್ಯ ಹಿರೇಮಠ ವಹಿಸುವರು.
ಸಾರಾಪುರದ ಚಿದಾನಂದ ಸ್ವಾಮಿಗಳು. ಶಿರೋಳದ ಹನುಮಂತ ಶರಣರು. ಬೆಳಗಲಿಯ ಶಂಕ್ರಪ್ಪ ಚೌಗಲಾ ಶರಣರು. ತೇರದಾಳದ ಈರಣ್ಣ ತಂಬೂರಿ. ರತ್ನಾಕರ ಜಮಖಂಡಿ .ಕಾಡಪ್ಪ ಬೆಳ್ಳುಬ್ಬಿ. ಸುರೇಶ ಯಾದವಾಡ . ಉಪಸ್ಥಿತರಿರುವರು.
ನಂತರ ಧಾರವಾಡ ಆಕಾಶವಾಣಿಯ ಬಿ.ಹೈ. ಕಲಾವಿದರು ಹಾಗೂ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳ ತಂಡದಿಂದ ಮತ್ತು ಕುಳಲಿಯ ರಂಗಪ್ಪ ದಾಸರ ಹಾಗೂ ಸಂಗಡಿಗರಿಂದ ಶಿವ ಭಜನಾ ಕಾರ್ಯಕ್ರಮವು ಜರುಗುವುದು ಹಾಗೂ ಹಿರಿಯ ಕಲಾವಿದರಿಗೆ ಮತ್ತು ಸಾಧಕರಿಗೆ ಸತ್ಕಾರವನ್ನು ಮಾಡಲಾಗುವುದೆಂದು ಕಾರ್ಯಕ್ರಮದ ಆಯೋಜಕರಾದ ಶರಣ ಕಾಡಪ್ಪ ನಿಲಜಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ