ನನ್ನದೊಂದು ಸತ್ಯದ ಅನುಭವ ಇದೆಯಲ್ಲ. ನೀವದನ್ನು ಓದುವಿರಲ್ಲ. ಓದದಿದ್ದರೆ ನನಗೇನೋ ಆಗೋದಿಲ್ಲವಲ್ಲ. ಆದರೂ ನಾನು ಬರವಣಿಗೆಯ ನಿಲ್ಲಿಸಲಾಗೋದಿಲ್ಲ. ಕಾರಣ ಅದನ್ನು ಬರೆಸುತ್ತಿರುವ ಶಕ್ತಿಯೇ ನಾನಲ್ಲ. ಬರವಣಿಗೆಯು ನನ್ನ ಸ್ವಾರ್ಥ ಸುಖಕ್ಕಲ್ಲ. ಸಮಾಜದ ಚಿಂತನೆಯು ಆಧ್ಯಾತ್ಮಿಕ ರೂಪದಲ್ಲಿದೆಯಲ್ಲ.ಯಾರೋ ಹೇಳಿ, ನೋಡಿ, ಕೇಳಿ ಬರೆಸಿರುವುದಲ್ಲ.
ಆದರೂ ಎಲ್ಲರಿಗೂ ಇಷ್ಟವಾಗುವುದಿಲ್ಲ. ಇಷ್ಟವಾಗದಿದ್ದವರು ಓದಲು ಹೋಗುವುದಿಲ್ಲ. ಜೀವನಾನುಭವವೇ ಆತ್ಮಜ್ಞಾನವಾಗುವುದಲ್ಲ ಆತ್ಮಜ್ಞಾನಕ್ಕೆ ನಮ್ಮೊಳಗಿನ ಸತ್ಯದ ಪರ ನಡೆಯಬೇಕಲ್ಲ ನಡೆದಂತೆಲ್ಲಾ ಸತ್ಯ ತಿಳಿದು ಭೌತಿಕಾಸಕ್ತಿ ಕುಸಿಯುವುದಲ್ಲ. ಇದನ್ನು ಸ್ಥಿತಪ್ರಜ್ಞ ಎನ್ನುವರಲ್ಲ.
ಇದನ್ನು ಸಮಾಜವೇ ನಾನಿರುವಾಗ ಒಪ್ಪುವುದಿಲ್ಲ.ಹಾಗಂತ ಇದು ಸುಳ್ಳಾಗಿಯೇ ಉಳಿಯುವುದಿಲ್ಲ. ಇದರಲ್ಲಿ ಅದ್ವೈತ ತತ್ವ ಅಡಗಿದೆಯಲ್ಲ. ಆದರೆ, ಈವರೆಗೆ ಅದ್ವೈತದವರು ಇದನ್ನು ಸ್ವೀಕರಿಸಿಲ್ಲ. ಸ್ವೀಕಾರ ಮಾಡದ ಕಾರಣವೆ ಜನಸಾಮಾನ್ಯರೆಡೆಗೆ ಬರವಣಿಗೆ ಹರಿದು ಬರುತ್ತಿದೆಯಲ್ಲ.
ಸಾಮಾನ್ಯಜ್ಞಾನ ಎಲ್ಲರಲ್ಲಿದೆಯಲ್ಲ.ಅವರವರ ಸಮಸ್ಯೆಗೆ ಅವರೊಳಗೆ ಪರಿಹಾರವೂ ಇದೆಯಲ್ಲ. ಆದರೆ, ಸಮಾಜದ ರಾಜಕೀಯತೆಯೇ ತಡೆಹಿಡಿದಿದೆಯಲ್ಲ. ರಾಜಕೀಯದಿಂದ ದೂರವಿರಬಹುದಲ್ಲ. ಇಲ್ಲದಿದ್ದರೆ ಸತ್ಯದ ಜೊತೆಗೆ ಧರ್ಮ ಇರೋದಿಲ್ಲ. ಇದಕ್ಕಾಗಿ ಬದಲಾವಣೆ ಆಗಬೇಕಲ್ಲ, ಬದಲಾವಣೆ ಶಿಕ್ಷಣದಿಂದ ಮಾಡಬೇಕಲ್ಲ..
ಶಿಕ್ಷಣವನ್ನು ಕೊಡುವವರು ಪಡೆಯುವವರು ಒಪ್ಪಬೇಕಲ್ಲ. ಪಡೆಯುವವರಲ್ಲಿ ಜ್ಞಾನವಿದ್ದರೂ ಹೇಳೋ ಅಧಿಕಾರವಿಲ್ಲ. ಮಧ್ಯವರ್ತಿಗಳು ಇದನ್ನು ಬೆಳೆಸಿರುವುದೆಲ್ಲ ಮಾಧ್ಯಮಗಳು ಎಚ್ಚರವಾಗಬೇಕಲ್ಲ. “ಅಲ್ಲ ಅಲ್ಲ ನೀನೇ ಎಲ್ಲಾ ನಿನ್ನನು ಬಿಟ್ಟರೆ ಗತಿಯಾರಿಲ್ಲ ನಿನ್ನದೆ ಜಗವೆಲ್ಲ..ಇಲ್ಲೇ ತಪ್ಪಾಗಿದೆಯಲ್ಲ.”
ಅಲ್ಲ ಎನ್ನುವುದರಲ್ಲಿಯೇ ಭಿನ್ನಾಭಿಪ್ರಾಯ, ದ್ವೇಷ,ಅಸೂಯೆ, ದ್ವಂದ್ವ ಹೆಚ್ಚಾಗಿದೆಯಲ್ಲ.ಭಾರತೀಯರೆ ವಿದೇಶದೆಡೆಗೆ ನಡೆದರಲ್ಲ.ವಿದೇಶಿಗಳು ಭಾರತವನ್ನು ನಡೆಸಲಾಗೋದಿಲ್ಲ.ಭಾರತಮಾತೆ ನಮ್ಮೊಳಗಿಲ್ಲ ಹಾಗಾದರೆ ನಾವು ಭಾರತೀಯರಲ್ಲ.ನಾವು ಎಲ್ಲಿರುವುದೆಲ್ಲ? ನಮ್ಮೊಳಗೆ ಇರೋದು ಯಾರಲ್ಲ? ಆತ್ಮನಿರ್ಭರ ಭಾರತಕ್ಕೆ ಬೇಕಲ್ಲ ಆತ್ಮಜ್ಞಾನದ ಶಿಕ್ಷಣವೆಲ್ಲಾ.
ಆದರೆ ಇದಕ್ಕೆ ವಿರುದ್ದ ನಡೆದವರೆಲ್ಲ ಪ್ರಸಿದ್ದರಾದರಲ್ಲ.ಸಿದ್ದ ಪುರುಷರಿಲ್ಲದ ಪ್ರಸಿದ್ದಿ ಪ್ರಸಿದ್ದಿಯಾಗೋದಿಲ್ಲವಲ್ಲ.ಆತ್ಮರಕ್ಷಣೆಗಾಗಿ ಸಿದ್ದರಾಗಬೇಕೆಲ್ಲ. ಆತ್ಮ ನಮ್ಮೊಳಗೇ ಇದೆಯಲ್ಲ. ಇದಕ್ಕೆಲ್ಲಾ ಕಾರಣಕರ್ತರು ನಾವಲ್ಲ.ನಮ್ಮೊಳಗಿನ ದೇವಾಸುರರನ್ನು ತಿಳಿದು ನಡೆಯಬೇಕಲ್ಲ.
ಇಲ್ಲದಿದ್ದರೆ ನಮಗೆ ಸುಖವಿಲ್ಲ.ನಾನೆಂಬುದೇ ಇಲ್ಲವಲ್ಲ. ಆದರೆ ಇದನ್ನು ಒಪ್ಪಿ ನಡೆಯೋದಕ್ಕೆ ಸಾಧ್ಯವಿಲ್ಲ. ಸಾಧ್ಯವಾದವರು ಈಗಿಲ್ಲವಲ್ಲ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು