ಭಾರತೀಯ ಕಿಸಾನ ಸಂಘ ಮೂಡಲಗಿ ತಾಲೂಕಾ ಘಟಕ ಸ್ಥಾಪನೆ

Must Read

ಮೂಡಲಗಿ : ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತದ ಮೂಡಲಗಿ ತಾಲೂಕಾ ಘಟಕವು ಮೂಡಲಗಿಯ ಶ್ರೀ ಶಿವಭೋದರಂಗ ಕೆಳಗಿನ ಮಠದ ಆವರಣದಲ್ಲಿ ಇಂದು ಅಧ್ಯಕ್ಷ ಉಪಾಧ್ಯಕ್ಷರ ನೇಮಕದೊಂದಿಗೆ ಅಸ್ತಿತ್ವಕ್ಕೆ ಬಂದಿತು.

ತಾಲೂಕಾ ಘಟಕದ ಅದ್ಯಕ್ಷರಾಗಿ ಮೂಡಲಗಿಯ ಉಮೇಶ ಬೆಳಕೂಡ, ಉಪಾಧ್ಯಕ್ಷರಾಗಿ ಯಾದವಾಡದ ಕಲ್ಲಪ್ಪ ಉದಪುಡಿ ಹಾಗೂ ಖಾನಟ್ಟಿಯ ಬಸಲಿಂಗ ನಿಂಗನೂರ ಕಾರ್ಯದರ್ಶಿ ಮುನ್ಯಾಳದ ಸಂತೋಷ ಕುಲಕರ್ಣಿ, ಸಹಕಾರ್ಯದರ್ಶಿಯಾಗಿ, ನಾಗನೂರಿನ ಕೆಂಚಪ್ಪ ಸಕ್ರೆಪ್ಪಗೋಳ,ಯುವಪ್ರಮುಖರಾಗಿ ಯಾದವಾಡದ ಹನಮಂತಗೌಡ ಪಾಟೀಲ, ಸಾವಯವ ಪ್ರಮುಖರಾಗಿ ಕಲ್ಲೋಳಿಯ ಮಲ್ಲಪ್ಪ ಖಾನಗೌಡ್ರ, ಮಹಿಳಾ ಪ್ರಮುಖರಾಗಿ ಸುಣದೋಳಿಯ ಪ್ರೇಮಾ ಗಾಣಿಗೇರ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ತಿಳಿಸಿದ್ದಾರೆ,.

ಈ ಸಮಯದಲ್ಲಿ ಉತ್ತರ ಕರ್ನಾಟಕದ ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯ ಜೈಪಾಲ ನಾಗನೂರ,ರಾಯಬಾಗ ತಾಲೂಕಾ ಘಟಕದ ಅಧ್ಯಕ್ಷ ಮಹೇಶ ಪಾಟೀಲ ಹಾಗೂ ಗೋಕಾಕದ ದರ್ಶನಕುಮಾರ ಅಕ್ಕಿಸಾಗರ ಇದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group