ಉಂಡ ಮನೆಗೆ ದ್ರೋಹ ಬಗೆದ ಭೀಮಪ್ಪ ಗಡಾದ

0
514

ಅನ್ನ ನೀಡಿದ ಪಕ್ಷವನ್ನೇ ತ್ಯಜಿಸಿ ಬಂದಿರುವ ಭೀಮಪ್ಪ ಗಡಾದ ಉಂಡ ಮನೆಗೇ ದ್ರೋಹ ಎಸಗಿದ್ದಾರೆ. ಈ ಮಾತು ಜೆಡಿಎಸ್ ಮುಖಂಡ ಸಿ ಎಂ ಇಬ್ರಾಹಿಂ ಸೇರಿದಂತೆ ಇನ್ನೂ ಕೆಲವು ಮೂಡಲಗಿಯ ಜೆಡಿಎಸ್ ಮುಖಂಡರಿಂದ ಹೊರಬಂದಿದೆ. ಆದರೂ ಕೆಲವು ಜೆಡಿಎಸ್ ಮುಖಂಡರು ಗಡಾದ ಅವರ ಜೊತೆಯಲ್ಲಿಯೇ ತಿರುಗಾಡುತ್ತಿದ್ದು ಅರಭಾವಿಯ ಅದರಲ್ಲೂ ಮೂಡಲಗಿಯ ರಾಜಕೀಯ ತಳವಿಲ್ಲದ ಕೊಡದಂತಾಗಿದೆ. ಯಾರು ಯಾವಾಗ ಬೇಕಾದರೂ ಎತ್ತ ಬೇಕಾದರೂ ಹೋಗಬಹುದು. ಎಲ್ಲಿ ಲಾಭವಾಗುತ್ತದೆಯೋ ಅಲ್ಲಿಗೆ !

ಯಾಕೆಂದರೆ, ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಅವರನ್ನೇ ನೋಡಿ. ಮೂಡಲಗಿ ತಾಲೂಕಾ ಹೋರಾಟದಲ್ಲಿ ಒಂದು ವಿಶೇಷ ಇಮೇಜ್ ಗಳಿಸಿ ಜೆಡಿಎಸ್ ಪಕ್ಷದಿಂದ ಅರಭಾವಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿಯರಿಗೆ ಟಕ್ಕರ್ ಕೊಟ್ಟಿದ್ದರು.

ಜನತೆಯ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸಮರ್ಥ ಶಾಲೆಯೆಂಬ ಅತ್ಯಂತ ಭ್ರಷ್ಟ ಸ್ಥಳದಲ್ಲಿ ಸಭೆಗಳನ್ನು ಮಾಡುತ್ತ ಮಾಡುತ್ತ ತಾವೂ ಭ್ರಷ್ಟರಾಗಿಯೇ ಬಿಟ್ಟರೇನೋ ಎಂಬ ಸಂದೇಹ ಉಂಟಾಗುವಂತೆ ಈ ಸಲ ಕಾಂಗ್ರೆಸ್ ಪಕ್ಷ ಸೇರಿ ಉಂಡ ಮನೆಗೆ ಪಕ್ಕಾ ದ್ರೋಹವನ್ನೇ ಎಸಗಿದರು. ಅವರನ್ನು ನಂಬಿಕೊಂಡು ಜೆಡಿಎಸ್ ನಿಂದ ಪುರಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದರೂ ಯಾವುದೇ ಸಾರ್ಥಕವಿಲ್ಲದೆ ಉಯ್ಯಾಲೆಯಾಡುತ್ತಿದ್ದ ಸದಸ್ಯರನ್ನು ನಡು ನೀರಿನಲ್ಲಿ ಕೈಬಿಟ್ಟರು.

ಈಗ ಮತ್ತೆ ಕಾಂಗ್ರೆಸ್ ಪಕ್ಷದಿಂದಲೂ ಟಿಕೆಟ್ ಬೇಕೆಂದು ಎರಡು ಲಕ್ಷ ರೂಪಾಯಿ (ನೆನಪಿರಲಿ ಇವರು ತಮ್ಮನ್ನು ತಾವು ಕಡು ಬಡವರೆಂದು ಹೇಳಿಕೊಳ್ಳುತ್ತಾರೆ ) ತುಂಬಿ ಬಂದರು. ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದಾಗ ಎಲ್ಲರೂ ಒಂದೆಡೆ ಸೇರಿ ಸಭೆ ಮಾಡಿ, ಯಾರಿಗೇ ಟಿಕೆಟ್ ಸಿಕ್ಕರೂ ಎಲ್ಲರೂ ಒಂದಾಗಿ ಚುನಾವಣೆ ಎದುರಿಸುವುದಾಗಿ ದೇವರ ಮೇಲೆ ಪ್ರಮಾಣ ಮಾಡಿ, ಈಗ ಪಕ್ಷೇತರವಾಗಿ ಸ್ಪರ್ಧಿಸಿ ಆ ದೇವರಿಗೂ ಚಳ್ಳೆಹಣ್ಣು ತಿನ್ನಿಸಿದ ಕೀರ್ತಿ ಗಡಾದ ಅವರಿಗೆ ಸಲ್ಲುತ್ತದೆ.

ಒಬ್ಬ ಭ್ರಷ್ಟ, ಅಹಂಕಾರಿಯನ್ನು ಆಪ್ತನನ್ನಾಗಿ ಪಡೆದವರು ಅವನ ಗುಣಗಳನ್ನೇ ಪಡೆದರೆ ಏನೂ ಆಶ್ಚರ್ಯವಿಲ್ಲ. ಯಾಕೆಂದರೆ ರಾಜ ಪ್ರಾಮಾಣಿಕನಾದರೂ ಸೇವಕರು ಭ್ರಷ್ಟರಾಗಿದ್ದರೆ ಮುಂದೆ ರಾಜನೂ ಕೂಡ ಭ್ರಷ್ಟನಾಗಬಹುದು. 

ಇಷ್ಟು ದಿನ ಬಡತನದ ಬಗ್ಗೆಯೇ ಮಾತನಾಡದ ಗಡಾದ ಅವರು ಕಾಂಗ್ರೆಸ್ ನಿಂದ ಟಿಕೆಟ್ ಸಿಗದ್ದಕ್ಕೆ ಈಗ ಕಡು ಬಡತನದ ನಾಟಕ ಆಡತೊಡಗಿದ್ದಾರೆ. ತಾನು ರಾಜಕೀಯಕ್ಕೆ ಸೇವೆ ಸಲ್ಲಿಸಲು ಬಂದಿರುವುದಾಗಿ ಹನೋಡಿದರೆರೆ.

ಆದರೆ ಸಾಮಾಜಿಕ ಕಾರ್ಯಕರ್ತನ ವೇಷದಲ್ಲಿ ಅವರು ಎಷ್ಟು ಜನರ ಕೆಲಸ ಮಾಡಿಕೊಟ್ಟಿದ್ದಾರೆಂಬುದನ್ನು ಹೇಳಬೇಕು. ಇನ್ನು ಇವರ ಬಡತನದ ಕಥೆಯನ್ನು ಎಲ್ಲರೂ ಕೇಳಲೇಬೇಕು. ಅದನ್ನು ಮುಂದೆ ನೋಡೋಣ !


ಉಮೇಶ ಬೆಳಕೂಡ, ಮೂಡಲಗಿ