- Advertisement -
ಬೀದರ: ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಘೋಡವಾಡಿಯಲ್ಲಿ ಮಂಗವೊಂದು ಜನರ ಮೇಲೆ ದಾಳಿ ನಡೆಸಿದ್ದರ ಪರಿಣಾಮ ಮೂವರು ಗಾಯಗೊಂಡಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಈ ಮಂಗವು ಜನರಿಗೆ ಕಾಟ ಕೊಡುತ್ತಿದೆ. ಎಲ್ಲೆಂದರಲ್ಲಿ ಜನರನ್ನು ಬೆನ್ನಟ್ಟಿ ಜನರ ಮೇಲೆ ದಾಳಿ ನಡೆಸುತ್ತಿದೆ. ಗ್ರಾಮದಲ್ಲಿ ಮಂಗಕ್ಕೆ ಹೆದರಿ ಜನ ಮನೆಗಳಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕರು ಮತ್ತು ರೈತರು ಹೊಲಗಳಿಗೆ ತೆರಳಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಪಟ್ಟವರು ಬೇಗ ಮಂಗನನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದು, ಹುಚ್ಚು ಮಂಗ ದಾಳಿ ಮಾಡಿ ಜನರ ದೇಹದ ಮೇಲೆ ದಾಳಿ ಮಾಡುತ್ತಿದೆ. ಆದಷ್ಟು ಬೇಗ ಸೆರೆ ಹಿಡಿಯುವ ಪ್ರಯತ್ನ ಮಾಡಲಾಗುವುದು ಎಂದು ಅರಣ್ಯಾಧಿಕಾರಿ ಶಿವಕುಮಾರ ರಾಠೊಡ ಹೇಳಿದ್ದಾರೆ.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ