- Advertisement -
ಬೀದರ – ಪ್ರಗತಿ ಪರಿಶೀಲನಾ ಸಭೆ ಎಂದು ಹೆಸರಿಟ್ಟುಕೊಂಡು ಮಾಧ್ಯಮಗಳಿಗೆ ತಿಳಿಸದೆ ಬ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಎರಡು ಸಭೆಗಳನ್ನು ರಾಜ್ಯ ಸರ್ಕಾರದ ಪ್ರತಿನಿಧಿಗಳು ಸಭೆ ನಡೆಸಿದ್ದು ಊಹಾಪೋಹಗಳಿಗೆ ಕಾರಣವಾಗಿದೆ.
ಇದು ಯಾವ ಸೀಮೆಯ ಪ್ರಗತಿ ಪರಿಶೀಲನಾ ಸಭೆ ಎಂದು ಆರೋಗ್ಯ ಸಚಿವರನ್ನು ಮಾಧ್ಯಮಗಳು ತರಾಟೆಗೆ ತೆಗೆದುಕೊಂಡಿದ್ದು ನಿಮ್ಮ ತಪ್ಪುಗಳನ್ನು ಮುಚ್ಚಿಡಲು ಎರಡೂ ಸಭೆಗಳಿಗೆ ಮಾಧ್ಯಮಗಳನ್ನು ದೂರವಿಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿವೆ.
ವರದಿ : ನಂದಕುಮಾರ ಕರಂಜೆ