ಬೀದರ – ಗಡಿ ಜಿಲ್ಲೆ ಬೀದರದಲ್ಲಿ ಕೊರೋನಾ ಕೇಕೆ ಹೆಚ್ಚಾಗಿದ್ದು ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಬೆಡ್ ಸಿಗದೆ ಆಸ್ಪತ್ರೆಯ ಆವರಣದಲ್ಲಿಯೇ ಮಲಗುವಂತಾಗಿದೆ.
ಚಿಕಿತ್ಸೆ ಸಿಗುವುದಿರಲಿ ಸರಿಯಾಗಿ ಬೆಡ್ ಕೂಡ ಸಿಗದೆ ಜನರು ಆಸ್ಪತ್ರೆಯ ಆವರಣ, ಫುಟ್ ಪಾತ್ ನಲ್ಲಿಯೇ ಮಲಗಿ ವೈದ್ಯರ ದಾರಿ ಕಾಯುತ್ತಿದ್ದುದು ಹೃದಯವಿದ್ರಾವಕವಾಗಿದೆ.
ಗಾಯದ ಮೇಲೆ ಬರೆ ಎಳೆದಂತೆ ಚಿಕಿತ್ಸೆಗೆ ಬಳಸಲಾಗುವ ರೆಮ್ಡಿಸಿವಿರ್ ಔಷಧಿ ಹಾಗೂ ಆಕ್ಸಿಜನ್ ಕೂಡ ಸಿಗದೆ ರೋಗಿಗಳು ನರಳಾಡುವಂತಾಗಿದ್ದು ಜಿಲ್ಲಾಡಳಿತದ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರೂ ಈ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂಬುದು ಬಿಡಿಸಲಾಗದ ಕಗ್ಗಂಟಾಗಿದೆ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ