ಬೀದರ್ ಜಿಲ್ಲೆ ಔರಾದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಭೀಮಸೇನರಾವ ಶಿಂಧೆ ತಾಲ್ಲೂಕಿನ ಬೊರ್ಗಿ (ಜಿ) ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದರು.
ಈ ಮುಂಚೆ ಬೋರ್ಗಿ ಗ್ರಾಮದ ಜನರು ಡಾ.ಭೀಮಸೇನರಾವ ಶಿಂಧೆಗೆ ಭರ್ಜರಿ ಸ್ವಾಗತ ಕೋರಿ, ಗ್ರಾಮದ ಮಹಿಳೆಯರು ಕೋಲಿನಾಟ, ಹಾಡುಗಳ ಮುಖಾಂತರ ಬರಮಾಡಿಕೊಂಡರು.
ಔರಾದ ಕ್ಷೇತ್ರವು ಬಿಜೆಪಿ ಭದ್ರ ಕೋಟೆಯಾಗಿದ್ದು ಅದನ್ನು ಭೇದಿಸಲು ಕಾಂಗ್ರೆಸ್ ನಿಂದ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಪ್ತ ಸ್ನೇಹಿತ ಶಿಂಧೆಯವರನ್ನು ಔರಾದ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಸಿದ್ಧವಾಗಿದ್ದು ಬೀದರ ರಾಜಕಾರಣ ರಂಗೇರಿದೆ.
ವರದಿ: ನಂದಕುಮಾರ ಕರಂಜೆ, ಬೀದರ