spot_img
spot_img

ಬಿಜೆಪಿ ಹಠಾವೋ ಬಂಜಾರಾ ಬಚಾವೋ ಬ್ಯಾನರ್; ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆದ ತಾಂಡಾಗಳು

Must Read

spot_img
- Advertisement -

ಸಿಂದಗಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಬಹುತೇಕ ತಾಂಡಾಗಳ ಮುಖ್ಯದ್ವಾರದಲ್ಲಿ ಮೀಸಲಾತಿ ಒಡೆತಕ್ಕೆ ಹಮಾರಾ ತಾಂಡಾ ಹಮಾರೆ ರಾಜ್, ಬಿಜೆಪಿ ಪಕ್ಷಕ್ಕೆ ತಾಂಡಾ ಬಹಿಷ್ಕಾರ, ಬಿಜೆಪಿ ಹಠಾವೋ ಬಂಜಾರಾ ಬಚಾವೋ ಎಂಬ ವಾಕ್ಯಗಳೊಳಗೊಂಡ ಬ್ಯಾನರ್‍ಗಳನ್ನು ಹಾಕುವ ಮೂಲಕ ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆದಿವೆ.

ಹೌದು, ಒಳಮೀಸಲಾತಿ ಆಧಾರದ ಮೇಲೆ ಭೋವಿ, ಬಂಜಾರ, ಕೊರಚ, ಕೊರಮ ಸಮುದಾಯಗಳು ಬಹುದಿನಗಳಿಂದ ಒಳಮೀಸಲಾತಿ ಜಾರಿ ಮಾಡದಂತೆ ಸುಮಾರು ವರ್ಷಗಳಿಂದ ಹೋರಾಟಗಳನ್ನು ಹಮ್ಮಿಕೊಂಡಿದ್ದು ಅದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕೆಲ ಜಾತಿಗಳನ್ನು ಮೆಚ್ಚಿಸಿಕೊಳ್ಳಲು ಕರ್ನಾಟಕ ಬಿಜೆಪಿ ಸರಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ಅವೈಜ್ಞಾನಿಕ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಈ ನಾಲ್ಕು ಸಮುದಾಯಗಳಿಗೆ ಆದ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಬಿಜೆಪಿ ಪಕ್ಷಕ್ಕೆ ತಕ್ಕ ಉತ್ತರ ನೀಡಲು ಇಂತಹ ನಿಧಾರಕ್ಕೆ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ.

ಡಾ. ಅಂಬೇಡ್ಕರರು ಬರೆದ ಸಂವಿಧಾನದಡಿಯಲ್ಲಿ 1956ರಲ್ಲಿ ಮೈಸೂರ ಸರಕಾರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಭೋವಿ, ಬಂಜಾರ, ಕೊರಚ, ಕೊರಮ ಸಮುದಾಯಗಳ ಮೂಲ ಕಸಬನ್ನು ಪರಿಗಣಿಸಿ  ಪರಿಶಿಷ್ಟ ಜಾತಿಗಳಲ್ಲಿ ಸೇರ್ಪಡೆ ಮಾಡಿ ಆದೇಶ ಹೊರಡಿಸಿದ್ದು ಮುಂದೆ ಕರ್ನಾಟಕ ರಾಜ್ಯ ಪುನರ್ ನಾಮಕರಣವಾದ ಬಳಿಕ ಇಡೀ ರಾಜ್ಯವ್ಯಾಪಿ ಮೀಸಲಾತಿ ಪಡೆದುಕೊಳ್ಳುತ್ತ ತಮ್ಮ ಮೂಲ ಕಸಬಿನೊಂದಿಗೆ ಮೀಸಲಾತಿ ಯಲ್ಲಿರುವ ಎಲ್ಲ ಸಮುದಾಯಗಳು ನಮ್ಮದಿಯ ಜೀವನ ನಡೆಸುತ್ತಿದ್ದರು ಅದನ್ನು 2012ರಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಮಿಸಲಾತಿಯಲ್ಲಿ ಹೆಚ್ಚಳ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ರಚಿಸಿ ಜಾತಿವಾರು ಜನಗಣತಿ ಮಾಡುವಂತೆ ನಿರ್ದೆಶನ ನೀಡಲಾಗಿತ್ತು ಅದನ್ನು ದುರುಪಯೋಗ ಮಾಡಿದ ಬಿಜೆಪಿ ಪಕ್ಷ ಜಾತಿ ಜಾತಿಯಲ್ಲಿ ಮೀಸಲಾತಿ ಯಲ್ಲಿ ಗೊಂದಲ ಸೃಷ್ಟಿಸುವ ನೆಪದಲ್ಲಿ ಛಲವಾದಿ ಸಮುದಾಯವನ್ನು ಬಳಸಿಕೊಂಡು ಭೋವಿ, ಬಂಜಾರ, ಕೊರಚ, ಕೊರಮ ಸಮುದಾಯಗಳನ್ನು ಮೀಸಲಾತಿ ಯಿಂದ ಹೊರತೆಗೆಯಬೇಕು ಎಂದು  ಒಳಮೀಸಲಾತಿ ಹಕ್ಕೊತ್ತಾಯ ಮಂಡಿಸುವಂತೆ ಹೋರಾಟ ನಡೆಸಲು ಅಣಿಯಾಗಿದ್ದವು ಅದನ್ನು ವಿರೋಧಿಸುತ್ತ ಸುಮಾರು ವರ್ಷಗಳಿಂದ ನಾಲ್ಕು ಸಮುದಾಯಗಳು ಹೋರಾಟಕ್ಕೆ ಇಳಿದಿದ್ದವು ಮೀಸಲಾತಿ ಯಾರ ಸಮ್ಮುಖದಲ್ಲಿ ನೀಡಲಾಯಿತು ಮತ್ತು ಯಾವ ಮಾನದಂಡಗಳನ್ನು ಅಳವಡಿಕೆ ಮಾಡಿದ್ದಾರೆ ಎನ್ನುವುದು  ಪರಿಗಣಿಸದೇ ನ್ಯಾಯಮೂರ್ತಿ ಸದಾಶಿವ ಆಯೋಗದ ಅವೈಜ್ಞಾನಿಕ ವರದಿಯನ್ನು ಶಿಫಾರಸ್ಸು ಮಾಡಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದ್ದು ಈ ನಾಲ್ಕು ಸಮುದಾಯಗಳಿಗೆ ಮೀಸಲಾತಿ ಯಿಂದ ವಂಚಿತರನ್ನಾಗಿ ಮಾಡಿದ ಈ ಬಿಜೆಪಿ ಸರಕಾರವನ್ನು ಈ ರಾಜ್ಯದಲ್ಲಿ ಕಿತ್ತೊಗೆಯಬೇಕು ಎಂದು ಮೀಸಲಾತಿ ಹೋರಾಟ ಒಕ್ಕೂಟ ನೀಡಿದ ಆದೇಶದ ಮೇರೆಗೆ ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಾಂಡಾಗಳು ಸೇರಿದಂತೆ ಮೂರು ಸಮುದಾಯಗಳು ಬಿಜೆಪಿಯನ್ನು ಬಹಿಷ್ಕರಿಸುತ್ತಿವೆ ಎನ್ನುವುದು ಸರಕಾರಕ್ಕೆ ತಿಳಿದ ವಿಷಯವಾಗಿದೆ ಎಂದು ಪ್ರಜ್ಞಾವಂತರು ಮಾತಾಡಿಕೊಳ್ಳುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.


- Advertisement -

ಕರ್ನಾಟಕ ಬಿಜೆಪಿ ಸರಕಾರ ಮೀಸಲಾತಿ ಗೆ ಒಳಪಡುವ ಎಲ್ಲ ಸಮುದಾಯಗಳನ್ನು ಯಾವುದೇ ತಾರತಮ್ಯವಿಲ್ಲದೇ ನಡೆದುಕೊಳ್ಳಬೇಕು ಆದರೆ ಒಂದು ಜಾತಿಗೆ ಸೀಮಿತ ವಾಗುವ ರೀತಿಯಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಒಳಮೀಸಲಾತಿಗೆ ಒಳಪಡಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವುದು ಪ.ಜಾತಿಯಲ್ಲಿರುವ ಎಲ್ಲ ಸಮುದಾಯಗಳಿಗೆ ಸೌಲಭ್ಯ ವಂಚಿತರನ್ನಾಗಿ ಮಾಡಲು ಹೊರಟಿರುವ ಬಿಜೆಪಿ ಸರಕಾರಕ್ಕೆ ಎಲ್ಲ ತಾಂಡಾಗಳಿಂದ ಬಹಿಷ್ಕಾರ ಮಾಡುವ ಮೂಲಕ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ.

 –ಅರ್ಜುನ ರಾಠೋಡ                     

- Advertisement -
- Advertisement -

Latest News

ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group