ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗೆ ಔರಾದ್ ನಲ್ಲಿ ಅದ್ದೂರಿ ಸ್ವಾಗತ

Must Read

ಬದ್ಧ ವೈರಿಗಳಂತಿದ್ದ ನಾಯಕರು ಒಂದಾದರು

ಬೀದರ: ಬಯಲು ಸೀಮೆಯ ಸುಡು ಬಿಸಿಲಿನ ಧಗೆಯಲ್ಲಿ ಬೆವರಿನಲ್ಲಿ ಬೆಂದು ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು. ಹಲವು ವರ್ಷಗಳಿಂದ ದುಷ್ಮನ್ ಗಳಂತೆ ಜಗಳವಾಡ್ತಿದ್ದ ಖೂಬಾ-ಚವ್ಹಾಣ ದೋಸ್ತಿ, ಘಟಾನುಘಟಿ ನಾಯಕರ ರೋಡ ಶೋ. ಇದು ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಬಿಜೆಪಿಯ ಶಕ್ತಿ ಪ್ರದರ್ಶನದ ಕಂಪ್ಲೀಟ್ ಸ್ಟೋರಿ.

ಎತ್ತ ನೋಡಿದರತ್ತ ಬಿಜೆಪಿ ಧ್ವಜಗಳು, ಬಿಸಿಲಿನ ತಾಪದಲ್ಲೂ ಜಮಾಯಿಸಿದ ಕಾರ್ಯಕರ್ತರ ಜನ ಸಾಗರ. ಅಂದ ಹಾಗೆ ಈ ದೃಶ್ಯ ಕಂಡು ಬಂದಿದ್ದು ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ. ಇಂದು ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಬೆಳಿಗ್ಗೆ ಔರಾದ್ ತಾಲೂಕಿನ ವಡಗಾಂವ್ ಮೂಲಕ ಸಂತಪೂರ್ ಗ್ರಾಮದಿಂದ ಔರಾದ್ ಪಟ್ಟಣದ ಅಮರೇಶ್ವರ ದೇವಸ್ಥಾನಕ್ಕೆ ತಲುಪಿತು. ದೇವಸ್ಥಾನದಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಚಿವರಾದ ಬಿ.ಶ್ರೀರಾಮಲು, ಪ್ರಭು ಚವ್ಹಾಣ ಸೇರಿದಂತೆ ಮುಖಂಡರ ತಂಡ ಎಪಿಎಂಸಿ ವೃತ್ತದ ವರೆಗೆ ಭರ್ಜರಿ ರೋಡ್ ಶೋ ನಡೆಸಿದರು. ಈ ಮೆರವಣಿಗೆಯಲ್ಲಿ ಔರಾದ್ ಕ್ಷೇತ್ರದ ಜನಸಾಗರ ಕಂಡು ಕ್ಷೇತ್ರದ ಶಾಸಕ ಹಾಗೂ ಸಚಿವ ಪ್ರಭು ಚವ್ಹಾಣ ಮುಂದಿನ ಚುನಾವಣೆಯ ದಿಕ್ಸೂಚಿಯಂತೆ ಬಿಂಬಿಸಿದರು.

ಇನ್ನು ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಬಿಜೆಪಿಯಲ್ಲಿ ಎರಡು ಭಾಗವಾಗಿ ಬಹಿರಂಗವಾಗೇ ಭಿನ್ನಮತ ಹೊರ ಹಾಕಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಪ್ರಭು ಚವ್ಹಾಣ ಅವರು ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಷ್ಟೇ ಅಲ್ಲ ಪ್ರಭು ಚವ್ಹಾಣ ಅವರು ಭಾರಿ ಬಹುಮತದಿಂದ ಗೆಲ್ಲುತ್ತಾರೆ ಎನ್ನುವ ಮೂಲಕ ಭಗವಂತ ಖೂಬಾ ಹಾಗೂ ಪ್ರಭು ಚವ್ಹಾಣ ನಡುವಿನ ವೈಮನಸ್ಸಿಗೆ ಬ್ರೇಕ್ ಬಿದ್ದಿರುವುದಕ್ಕೆ ಯಾತ್ರೆ ಸಾಕ್ಷಿಯಾಯಿತು.

ಒಟ್ಟಿನಲ್ಲಿ ಮಿಶನ್ 150 ಟಾರ್ಗೆಟ್ ರೀಚ್ ಮಾಡಲು ಬಿಜೆಪಿ ಚಾಣಕ್ಯ ಅಮಿತ್ ಶಾ ಬಸವಕಲ್ಯಾಣದಲ್ಲಿ ಯಾತ್ರೆಗೆ ಚಾಲನೆ ನೀಡುತ್ತಿದ್ದಂತೆ ಬೀದರ್ ಬಿಜೆಪಿಯಲ್ಲಿನ ಭಿನ್ನಮತ ಶಮನವಾಗುವಂತೆ ಕಾಣುತ್ತಿದ್ದು ಮುಂಬರುವ ಚುನಾವಣೆಯಲ್ಲಿ ಫಲಿತಾಂಶ ಹೇಗಿರುತ್ತದೆ ಎಂಬುದೆ ಕುತೂಹಲಕಾರಿಯಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಜಾನಪದದಿಂದ ಮಾನವೀಯ ಮೌಲ್ಯ ಹೆಚ್ಚಳ – ಎಸ್ ಆರ್ ಪಿ

ಬಾಗಲಕೋಟೆ- ಎಲ್ಲ ಸಾಹಿತ್ಯಕ್ಕೂ ಮೂಲ ಆಸರೆಯಾಗಿ ಜಾತಿ, ಮಥ, ಪಂಥಗಳನ್ನು ಮೀರಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಸಾಹಿತ್ಯ ಯಾವುದಾರೂ ಇದ್ದರೆ ಅದುವೇ ಜಾನಪದ ಸಾಹಿತ್ಯ. ಅದು...
- Advertisement -

More Articles Like This

- Advertisement -
close
error: Content is protected !!
Join WhatsApp Group