spot_img
spot_img

ಕೃತಿ ಪರಿಚಯ: ಸಿದ್ಧಲಿಂಗಪ್ಪ ಬೀಳಗಿಯವರ “ಸಾವಿರದ ಸಾಲುಗಳು”

Must Read

- Advertisement -

ಹಾಯ್ಕು ಒಂದು ಜಪಾನಿ ಕಾವ್ಯ ಕಲೆಯಾಗಿದ್ದರೂ ಕನ್ನಡದಲ್ಲಿಯೂ ತನ್ನ ವಿಶಿಷ್ಟವಾದ ರಚನೆಯಿಂದ ಸಾಹಿತ್ಯಾಸಕ್ತರನ್ನು ತನ್ನೆಡೆಗೆ ಸೆಳೆದುಕೊಂಡಿದೆ. ಮೊದಲ ಸಾಲಿನಲ್ಲಿ ಐದು ಅಕ್ಷರಗಳು ಎರಡನೇ ಸಾಲಿನಲ್ಲಿ ಏಳು ಅಕ್ಷರಗಳು ಮೂರನೆಯ ಸಾಲಿನಲ್ಲಿ ಐದು ಅಕ್ಷರಗಳ ಒಳಗೊಂಡ ಚಿಕ್ಕದಾದ ಕಾವ್ಯಶೈಲಿ ಆದರೂ ವಿಶಾಲಾರ್ಥವನ್ನು ಪ್ರತಿಬಿಂಬಿಸುವುದು ಹೈಕುಗಳ ವೈಶಿಷ್ಟ್ಯವಾಗಿದೆ. ಇವು ಕಿರಿದರಲ್ಲಿ ಹಿರಿದರ್ಥವನ್ನು ನೀಡುತ್ತವೆ. ಅಷ್ಟೇ ಅಲ್ಲದೆ ಮೋಹಕ ಬೆರಗನ್ನು ಉಂಟುಮಾಡುತ್ತವೆ. ಇದು ಬರಿ ಒಂದು ಕವಿತೆ ಯಾಗಿರದೆ ಒಂದು ಸ್ತಬ್ಧ ಚಿತ್ರದಂತೆ ಭಾಸವಾಗುತ್ತದೆ. ಇಂತಹ ಕಾವ್ಯಶೈಲಿಯನ್ನು ಅತ್ಯಂತ ಸಮರ್ಪಕವಾದ ರೀತಿಯಲ್ಲಿ ತಮ್ಮ ಸಾಹಿತ್ಯದಲ್ಲಿ ಬಳಸಿಕೊಂಡು ಸಾವಿರದ ಸಾಲುಗಳು ಎಂಬ ಹೈಕುಗಳ ಸಂಕಲನವನ್ನು ಆತ್ಮೀಯರಾದ ಸಿದ್ದಲಿಂಗಪ್ಪ ಬೀಳಗಿ ಅವರು ಕನ್ನಡ ಸಾಹಿತ್ಯಲೋಕಕ್ಕೆ ಪರಿಚಯಿಸಿದ್ದು ತುಂಬಾ ಸಂತೋಷದ ವಿಷಯ.

ಕೋವಿಡ್ 19 ಸಂದರ್ಭದಲ್ಲಿ ನಮ್ಮ ಗೋಕಾವಿ ಗೆಳೆಯರ ಬಳಗದ ವೇಬಿನರ್ ಎಂಬ ಆನ್ಲೈನ್ ಗೂಗಲ್ ಮೀಟ್ ನ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿದ್ದಾರ್ಥ್ ಲಲಿತಕಲಾ ಕಾಲೇಜಿನ ಪ್ರಾಚಾರ್ಯರಾದ ಜಯಾನಂದ ಮಾದರ್ ಸರ್ ಅವರ ಮೂಲಕ ಪರಿಚಯವಾದ ಪ್ರೊ. ಸಿದ್ದಲಿಂಗಪ್ಪ ಬೀಳಗಿ ಸರ್ ಅವರು ಸಾಹಿತ್ಯ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಾ ಬಹಳ ಬೇಗ ಆತ್ಮೀಯರಾದರು. ಅಂಚೆ ಮೂಲಕ ಸಾವಿರದ ಸಾಲುಗಳು ಹಾಯ್ಕುಗಳ ಸಂಕಲನ ಹಾಗೂ ಅವ್ವ ನಿಗೊಂದು ಪತ್ರ ಕವನಸಂಕಲನ ಕಳಿಸಿದ್ದರು. ಮೊದಲು ನಾನು ಸಾವಿರದ ಸಾಲುಗಳು ಹೈಕುಗಳ ಸಂಕಲನ ಓದಲು ಕೈಗೆತ್ತಿಕೊಂಡೆ. ಅವರ ಪ್ರತಿಯೊಂದು ಹಾಯ್ಕು ಒಂದೊಂದು ಸಂದೇಶವನ್ನು ಸಾರುತ್ತವೆ.

ವಿದೂಷಕನ
ಎದೆಯಲೂ ಸಾವಿರ
ನೋವಿನ ಮೂಟೆ

- Advertisement -

ಬದುಕಿನ ನೋವನ್ನು ಸಮಾಜಕ್ಕೆ ತೋರ್ಪಡಿಸದೆ ಎಲ್ಲರಿಗೂ ನಗುವನ್ನು ಹಂಚುವ ವಿದೂಷಕನ ಬಗ್ಗೆ ಮೂರೇ ಸಾಲುಗಳಲ್ಲಿ ಸಹೃದಯನ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ.ಕಂಡದ್ದನ್ನು ಕಂಡ ಹಾಗೇ ಕಟ್ಟಿಕೊಟ್ಟ ಇವರು ಸಾಹಿತ್ಯದೊಳಗನ ರಹಸ್ಯ ವನ್ನು ಸೊಬಗನ್ನು ಕಂಡಿದ್ದಾರೆ.ಬೀಜ ಹೆಮ್ಮರವಾದಂತೆ ಬರಹ ಕಥೆ.ಕಾದಂಬರಿಯಾಗಿ ಇಂಬಾಗಬೇಕೆಂಬುದು ನನ್ನ ಬಯಕೆ.ಇಲ್ಲಿಯ ನನ್ನ ಮಾತುಗಳು ಬೆಟ್ಟವನ್ನು ತೋರುವ ಬೆರಳು ಅಷ್ಟೇ.ಬರೆಯುವ ಅಕ್ಷರ ಆತ್ಮ ವೃತ್ತದ ಆವರಣ.ಅದರಾಚೆಗೂ ಬದುಕು,ಬರಹ,ಬಾವವಿದೆ. ನಮ್ಮ ಬರವಣಿಗೆ ನಮ್ಮನ್ನೇ ಉಡುಗಿಸಿಕೊಂಡು ಹೋದಂತೆ ನನಗನಿಸಿದೆ.ಹೈಕುಗಳ ಮೂಲಕ ತಮ್ಮನ್ನು ತೆರೆದುಕೊಂಡ ಹಾಗಿದೆ.

ಕಣ್ಣೆದುರು ನೀ
ಹಾದು ಹೋದಾಗಲೆಲ್ಲ
ಎದೆ ಕಂಪನ

ಪ್ರೀತಿಯಲ್ಲಿ ಎಣಿಸಲಾರದಷ್ಟು ಗೋಚರಿಸಲಾರದಷ್ಟು ವಿಸ್ಮಯಗಳು ಘಟಿಸಿ ಹೋಗುತ್ತವೆ. ಪ್ರೇಮವನ್ನು ಆಪ್ತವಾಗಿಸಿಕೊಂಡ ಈ ಹಾಯ್ಕು ತುಂಬಾ ಸುಂದರವಾಗಿ ಮೂಡಿ ಬಂದಿದೆ.

- Advertisement -

ದೇವರಿಗಾಗಿ
ದೇಶ ಸುತ್ತಿದ: ಅವ್ವ
ಮನೆಯಲ್ಲಿದ್ದಳು

ತಾಯಿಯೇ ದೇವರು ಎಂಬ ನಾಣ್ನುಡಿಯನ್ನು, ತಾಯಿಯ ಮಹತ್ವವನ್ನು ಮನ ಮುಟ್ಟುವಂತೆ ಬರೆದಿದ್ದಾರೆ. ಮನುಜನೆದೆಯ ಹುಳುಕನ್ನು ಇನ್ನಷ್ಟು ಹುಡುಕಿ ಬರಹದ ಮೂಲಕ ಬಯಲಿಗೆ ಎಳೆಯಬಲ್ಲರೆಂಬ ನಂಬಿಕೆ ಈ ಪುಸ್ತಕ ದ ಮೂಲಕ ನನಗೆ ತೋರಿದೆ.ಈ ಬದುಕು ಬರೆದು ಮುಗಿಸುವುದೂ ಅಲ್ಲ. ಪುಸ್ತಕದ ಪುಟ ತಿರುವುದೇ ಇಂದಿನ ಓದುಗನ ಚಟವಾಗಿರುವಾಗ ಈ ಸಾವಿರದ ಸಾಲುಗಳು ಓದಿಸಿಕೊಳ್ಳುತ್ತವೆ.

ಹೀಗೆ ಪ್ರೊ. ಸಿದ್ದಲಿಂಗಪ್ಪ ಬಿಳಗಿ ಅವರ ಪ್ರತಿಯೊಂದು ಹಾಯ್ಕು ರಚನೆಯಲ್ಲಿ ವೈವಿಧ್ಯತೆಯನ್ನು ನಾವು ಕಾಣಬಹುದು. ಬದುಕಿನ ಭಿನ್ನ ಸಂದರ್ಭಗಳನ್ನು ಸಂಕೀರ್ಣ ವಿಷಯಗಳನ್ನು ವಿಭಿನ್ನವಾಗಿ ದಾಖಲಿಸಿದ್ದಾರೆ. ಅವರ ರಚನೆಗಳಲ್ಲಿ ಪ್ರಗತಿಪರ ಚಿಂತನೆ ವಾತ್ಸವ ಪ್ರಜ್ಞೆ ಎದ್ದು ಕಾಣುತ್ತದೆ. ಹೀಗೆ ಅವರ ಲೇಖನಿಯಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಹೊಮ್ಮಿ ಓದುಗರ ಮಡಿಲನ್ನು ಸೇರಲಿ ಹಾರೈಸುತ್ತೇನೆ.


ವಿದ್ಯಾ ರೆಡ್ಡಿ
ಸಾಹಿತಿಗಳು ಗೋಕಾಕ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group