ಗೋದಾವರಿ ಶುಗರ್ಸ್ 24.58ಲಕ್ಷ ಟನ್ ಕಬ್ಬು ನುರಿಸಿ ದಾಖಲೆ – ಬಿ ಆರ್ ಬಕ್ಷಿ

Must Read

ಗೋದಾವರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಶುಕ್ರವಾರ ಮುಕ್ತಾಯ

ಹಳ್ಳೂರ – ಸಮೀಪದ ಗೋದಾವರಿ ಬಯೋರಿಫೈನರಿಸ್ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಯಶಸ್ವಿಯಾಗಿದೆ.

ಗುರುವಾರ ದಂದು ಸುಮಾರು 24.58 ಲಕ್ಷ ಟನ್ ಕಬ್ಬು ನುರಿಸಿ ಕಾರ್ಖಾನೆಯು ಇತಿಹಾಸದಲ್ಲಿಯೇ ಅತ್ಯಧಿಕ ದಾಖಲೆ ಮಾಡಿದೆ. ಕಾರ್ಖಾನೆಯು ಕಬ್ಬು ನುರಿಸುವಲ್ಲಿ ರಾಜ್ಯಕ್ಕೆ  ಪ್ರಥಮ ಸ್ಥಾನವನ್ನು ಪಡೆದಿದೆ. ಶುಕ್ರವಾರ ದಂದು ಮುಂಜಾನೆ 9 ಗಂಟೆಗೆ ಕಬ್ಬು ನುರಿಸುವ ಹಂಗಾಮು ಮುಕ್ತಾಯ ಸಮಾರಂಭವು ಜರುಗುವುದು.

ಸಮಾರಂಭಕ್ಕೆ ರೈತ ಬಾಂಧವರು, ಕಾರ್ಮಿಕರು, ಆಡಳಿತ ವರ್ಗದವರು ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆ ತರಬೇಕೆಂದು ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್ ಬಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group