ಎಲ್ಲಾ ಹೃದಯವಂತರಿಗೆ ವಿಶ್ವ ಹೃದಯ ದಿನಾಚರಣೆಯ ಶುಭಾಶಯಗಳು.
ಹೃನ್ಮನೆ
ಎರಡು ಬಾಗಿಲು ಇರುವ
ಈ ಪುಟ್ಟ ಮನೆಗೆ
ನಾಲ್ಕು ಕೋಣೆಗಳಿಹವು
ಬಡಿತ ಗಳಿಗೆ-ಗಳಿಗೆ!!
ನಿಚ್ಚಳ ಪ್ರೀತಿಗೆ
ನೆಲೆ ಇಹುದು ಒಳಗೆ
ಕಶ್ಮಲ ಕಪಟತನವದು
ಬಾಗಿಲಿನ ಹೊರಗೆ
ಬಿಟ್ಟ ಲಜ್ಜೆಯ ಹಗೆಯು
ಚುಚ್ಚು ಮಾತಿನ ಬಗೆಯು
ಸುಟ್ಟ ಚುಟ್ಟದ ಹೊಗೆಗೆ
ಉಸಿರು ಕಟ್ಟುವುದಿದಕೆ!!
ಕೆಟ್ಟ ಕೊಬ್ಬಿನ ಸ್ನೇಹ
ದುಷ್ಟ ವ್ಯಸನದ ದಾಹ
ಕುಟ್ಟುವಂಥಾ ಚಿಂತೆ
ಧ್ವಂಸಗೊಳಿಸಲು ನಾಂದಿ!!
ಸ್ವಾಸ್ಥ್ಯಚಿತ್ತದ ಗಾಳಿ
ನೇಮ-ನಿಷ್ಠೆಯ ಬೇಲಿ
ಪ್ರಮುಖ ಶಾಂತಿಯ ರವಳಿ
ಈ ಮನೆಯು ಬೆಳಗಲು!!
ಚುಟ್ಟ=ಬೀಡಿ
ರವಳಿ= ಶಕ್ತಿ
✍️ ಕಮಲಾಕ್ಷಿ ಕೌಜಲಗಿ.
ಅವ್ವನ ಮನಸೇ ದೊಡ್ಡದು, ಅವ್ವ ಅನ್ನುವ ಹೆಸರಿನ ಜೀವವೇ ಬಂಗಾರ.
ಅವ್ವ ಸುಳ್ಳು ಹೇಳುತ್ತಾಳೆ ಆದರೆ ಅದರಲ್ಲಿ ಪ್ರೀತಿ ಇದೆ, ಒಲವು ಇದೆ, ಮುದ್ದು ಇದೆ, ಕಾಳಜಿ ಇದೆ.
ವಾಟ್ಸಪ್ ನಲ್ಲಿ ಬಂದ ಅವ್ವನ ಕುರಿತ ಕವನ ಮನ ತಟ್ಟುತ್ತದೆ.
ನಮ್ಮ ಅವ್ವನಿಗೆ ಅರ್ಪಣೆ
ಅವ್ವ ನೀ ಭಾಳ ಸುಳ್ಳು ಹೇಳತಿ
ಮುಂಜಾನೆ ಜಲ್ದಿ ಎಬ್ಬಸಾಕ, ಏಳಕ್ಕೆ ಎಂಟು ಆಗೆತಿ ಅಂತಿ
ಜಳಕ...
...ಕಟು ವಾಸ್ತವ....
ಗಾಂಧಿ ತತ್ವವನ್ನು
ನಾವು ಪಾಲಿಸುತ್ತಿದ್ದೇವೆ,
ರಸ್ತೆಗೆ, ಉದ್ಯಾನವನಕೆ
ಗಾಂಧಿ ಹೆಸರು ಕೊಟ್ಟಿದ್ದೇವೆ,
ಗಾಂಧಿ ತತ್ವಗಳ ಜೊತೆ
ಅವರ ಭಾವಚಿತ್ರಕೆ ಫ್ರೇಂ ಹಾಕಿ,
ಮೊಳೆ ಹೊಡೆದು ಗೋಡೆಗೆ ನೇತುಹಾಕಿದ್ದೇವೆ !!!
.........ಆದರ್ಶ ಭಾರತ........
'ಆದರ್ಶ ಭಾರತ 'ಕಟ್ಟೋಣವೆಂದು
ಕಂಡಕಂಡಲ್ಲಿ ಭಾಷಣ ಬಿಗಿಯುವ
ಖಾದಿ ತೊಟ್ಟ ವೀರರೇ
ನಿಮ್ಮ ಸಂತಾನವನ್ನು
ಹಣ,ಡ್ರಗ್ಸ್, ಮೋಜಿನಿಂದ ದೂರವಿಡಿ,
ಆದರ್ಶ ಭಾರತ ತಾನೇ ನಿರ್ಮಾಣವಾಗುತ್ತದೆ.
.........ಕಪ್ಪೆಗಳು.........
ಕಪ್ಪೆಗಳು , ಇವು ಕಪ್ಪೆಗಳು
ತಾವೂ ಮೇಲೆ ಬರವು,
ಇನ್ನೊಬ್ಬರನೂ ಮೇಲೆ ಬಿಡೆವು,
ಅದರ ಕಾಲ ಇದು,ಇದರ ಬಾಲ...
..ದಾರಿ ಯಾವುದಾದರೇನು!!!...
ದಾರಿ ಯಾವುದಾದರೇನು ?
ತಲುಪುವ ಗುರಿ ನಿಶ್ಚಿತವಿರಲಿ,
ನಿನ್ನ ಗುರಿ ಅಭ್ಯುದಯದತ್ತ ಸಾಗುತಿರಲಿ,
ಗುರಿ ತಲುಪಲು ಏಕಾಗ್ರತೆಯ ಅರಿವಿರಲಿ,
ನಿನ್ನ ದಾರಿಯ ಪಥಿಕ ನೀನೆ,
ನಿನ್ನ ಸಮಾಜದ ನಿರ್ಮಾತೃ ನೀನೆ !!
ಈ ದಾರಿ ಇಂದು ನಿನ್ನೆಯದಲ್ಲ,
ಗಾಳಿ ,ಬೆಳಕು ಜನಿಸಿದಾಗ,
ಮಾನವ ಪ್ರಾಣಿಯ ಉಗಮವಾದಾಗ,
ದಾರಿ ತನ್ನಂತೆ ತಾನೇ ರೂಪುಗೊಂಡಿದ್ದು...
ದಿಗಂಬರನಾಗಿದ್ದ ಮಾನವ
ಮರದ ತೊಗಟೆ ,ಎಲೆಗಳ ಸುತ್ತಿ
ಬೆತ್ತಲೆ ದೇಹ ಮುಚ್ಚಿಕೊಂಡಿದ್ದು,
ಕಲ್ಲುಗಳ ಚಚ್ಚಿ ಬೆಂಕಿಯ ಹಚ್ಚಿ ದ್ದು,
ಕಾಡುಗೆಣಸು,ಮಾಂಸಗಳ...
ಗುರುವೆ ಶಕ್ತಿ
ಗುರುವೆನ್ನ ಭಕ್ತಿ
ಗುರುವೆನ್ನ ಶಕ್ತಿ
ಗುರುವೇ ಪರಮೋದ್ಧಾರ
ಗುರುತರ ಜವಾಬ್ದಾರಿಯಲಿ
ಕರುಣೆಯ ಕಾರ್ಪಣ್ಯ ಸಿಂಧು
ಸಹಕಾರಕೆ ಮಾದರಿಯು
ಮಕ್ಕಳ ಪ್ರೀತಿಯಲಿ ಪೊರೆದು
ಗುರಿಯೆಡೆಗೆ ಪಯಣಕೆ
ದಾರಿ ತೋರಿಸುವ ದೀಪ
ತಪ್ಪಾದರೆ ಶಿಕ್ಷಿಸುವ
ನೋವಿನಲಿ ಸ್ಪಂದಿಸುವ
ಸಾಧನೆಗೆ ಬೆನ್ನು ತಟ್ಟುವ
ಬಾಳ ನೌಕೆಯ ದಿಕ್ಸೂಚಿ
ತಿಳಿವಳಿಕೆಯ ಹರಿಸಿ
ಅರಿವಿನ ಧಾರೆಯಲಿ
ಜೀವಿಸಲು ಕಲಿಸಿ
ಪರಿವರ್ತನೆಯ ತೋರಿ
ಮನದ ಕಲ್ಮಶವ ಕಳೆದು
ಕೌಶಲ್ಯ ವೃದ್ಧಿಗೆ
ಸಹನೆಯ ಗುಣದಿ
ವಿಚಾರವಂತಿಕೆಗೆ ಕಾರಣೀಭೂತ
ಸಮಾಜದ ಕೇಂದ್ರ ಬಿಂದು
ನಿರ್ವಹಣೆಗೆ ಹೊಂದಿಸಿ
ಲೆಕ್ಕ ಪಕ್ಕದಿ ಗಮನಿಸಿ
ಸೂಕ್ತ ವ್ಯವಸ್ಥೆ
ಶಕ್ತ ಸಮಾಜ ಕಲ್ಪಿಸಿ
ಸೂಕ್ತ ಪರಿಸರದ ಚಾಲಕ.
ರೇಷ್ಮಾ...
ಶಿಕ್ಷಕರು
ಇವರೇ ನೋಡಿ ಶಿಕ್ಷಕರು
ಸಮಾಜದ ಆಪ್ತ ರಕ್ಷಕರು
ಮಣ್ಣಿನ ಮುದ್ದೆಯ ತಿದ್ದುತ
ಮೂರ್ತಿ ಮಾಡಿದ ಶಿಲ್ಪಕಾರರು
ಮಕ್ಕಳ ಮನವನು ಅರಿತವರು
ಸಹನೆಗೆ ಇವರೇ ಹೆಸರಾಗಿಹರು
ಸಕಲ ಕಲೆಯನು ಬಲ್ಲವರು
ಪ್ರತಿಭೆಯ ಬೆಳಕಿಗೆ ತಂದವರು
ಶಿಕ್ಷಕ ಎನ್ನುವ ಪದದಲ್ಲೆ
ದಿವ್ಯ ಶಕ್ತಿಯು ಅಡಗಿಹುದು
ಚೈತನ್ಯದ ಚಿಲುಮೆ ನೀವಾಗಿರಲು
ಸೇವೆಗಾಗಿ ಮನ ಮಿಡಿದಿಹುದು
ಅಜ್ಞಾನದ ಕತ್ತಲೆ ಆಳಿದವರು
ಜ್ಞಾನ ಜ್ಯೋತಿಯ ಬೆಳಗಿದವರು
ಮಾನವೀಯ ಮೌಲ್ಯಗಳ ತಿಳಿಸಿದರು
ಸಮಾಜದ ಏಳ್ಗೆಗೆ ದುಡಿವವರು
ಸರ್ವ ಸಮಾನತೆ ತಂದವರು
ಜಾತ್ಯತೀತತೆ ಮೆರೆದವರು
ವಿಶ್ವಾಸಕೆ ಬೆಲೆಯನುಕೊಟ್ಟವರು
ನೈತಿಕತೆಯನು ಬೆಳೆಸುವವರು
ಪೂರ್ಣಿಮಾ ಯಲಿಗಾರ
ಶಿಕ್ಷಕಿ...
ಜಾತಿ ಬೇಕೇ ? ಮತ ಏಕೆ ?
ಜಾತಿ ಏಕೆ ? ಮತ ಏಕೆ ?
ಧರ್ಮ ಏಕೆ? ಹಿಂಸೆ ಏಕೆ ?
ಕಾಯುವ ದೇವ ಎಲ್ಲರಿಗೊಬ್ಬನಿರಲು,
'ಮನುಜ ಒಂದೇ ಕುಲಂ '
ಧ್ವನಿ ಎಲ್ಲೆಲ್ಲೂ ಮೊಳಗಿರಲು
ಸ್ವಾರ್ಥದ ಮರಳ ಮಹಲನು
ವೈರಸ್ ಗಳೆಂಬ ದುರದೃಷ್ಟದ
ಅಲೆಗಳು,
ನಿರ್ಧಯವಾಗಿ ಕೊಚ್ಚಿಹಾಕುತಿರಲು,
ಮತ್ತೇಕೆ ನಿನಗೆ ,ಅನುದಿನ-ಅನುಕ್ಷಣ
ಜಾತಿ,ಮತ,ಧರ್ಮಗಳ ಹುಲಿವೇಷ !!!
ಕುಡಿವ ನೀರೊಂದೇ,ಹರಿವ ರಕ್ತವೊಂದೇ
ಉಸಿರಾಡುವ ಗಾಳಿಯೊಂದೇ ಇರಲು
ನೋವಾದಾಗ,ನಲಿವಾದಾಗ ಕಣ್ಣಲಿ ಚಿಮ್ಮುವ ಕಂಬನಿಗೆ
ಜಾತಿ,ಮತ,ಧರ್ಮ ಗಳ...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...