ಕವನ
ಎಲ್ಲಿ ಹೋದಿರಿ
ದಿನವಿಡಿ ದುಡಿದು
ಬಳಲಿ ಬೆಂಡಾದ ಜೀವ
ಉಂಡು ಹಾಸಿಗೆ ಮೇಲೆ
ನಿಮ್ಮ ಹುಡುಕುತಿರುವೆ
ಎಲ್ಲಿ ಹೋದಿರಿ ನನ್ನ
ಸುಂದರ ಕನಸುಗಳೇನೋವಿಗೆ ತಂಪು ನಿಮ್ಮಾಶ್ರಯ
ನೆಮ್ಮದಿ ಸುಖ ತೃಪ್ತಿ
ಸಂತಸದ ಹೊನಲು
ದಣಿವು ದೇಹಕೆ
ಮನಸಿಗೆ ನಿಮ್ಮ ಬಣ್ಣದ
ಬಯಕೆಗಳ ಸಂಭ್ರಮಎನ್ನೆದೆಯ ಗೂಡಿನಲ್ಲಿ
ಒಣಗಿದ ಮರದ ಬೇರು
ಇರಲಿ ನಿಮ್ಮ ಸ್ನೇಹ ಪ್ರೀತಿ
ಒಲವು ಸಿಂಚನ
ಸುಳಿ ಬಿಟ್ಟು ಹೊರ ಬರಲಿ
ನಗೆ ಸ್ಪೂರ್ತಿ ಹಸಿರು ತೆನೆಯು
__________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಕವನ
ಇನಿಯನ ನೆನೆದು
ಕಾಣದಾಗಿದೆ ದಾರಿ
ಒಲವು ಮೂಡಿಸುವ ಮಲ್ಲಿಗೆಯ ಕಂಪಿನ ವಾಸನೆಯಿಲ್ಲದೆ
ಯಾತಕೀ ಮೌನ
ಹೇಳಲಾಗದೆ ಒದ್ದಾಡಿ
ಬಿಡಲಾಗದೆ ಗುದ್ದಾಡಿ
ಹರಿಯುತಿದೆ ಮನ ನಿನ್ನೊಡನೆದೂರದ ಆಸೆಗಳ ಕನವರಿಕೆ
ಕಾಣದ ಕೈಗಳ ಅಡೆತಡೆ
ಸುಖದ ಅಮಲು ಪಡೆಯುವ ಕಸರತ್ತು
ಅಡ್ಡವಾಗಿವೆ ಹಲವು ಬಿಕ್ಕಟ್ಟು
ಕಾಡುತಿವೆ ನೆನಪುಗಳ ಚೌಕಟ್ಟು
ನಿನ್ನ ಮನದ ಮೌನದ ತಾಕತ್ತು
ಗೊತ್ತಿಲ್ಲ ನನಗೆ ಹಕೀಕತ್ತುಜೀವನ ಸಂಗ್ರಾಮದಿ ಬಯಕೆಗಳ ಗುಚ್ಛ ನೂರೆಂಟು
ಈಡೇರಿದ ಆಸೆಗಳ ಕನವರಿಕೆ ಕೆಲವುಂಟು
ಎಲ್ಲವೂ ಆಗುವುದೆನ್ನುವ
ಭ್ರಮೆ ಬೇಡ
ನದಿಯ ಹರಿವಿನಂತೆ
ಶರಧಿಯ ಸೇರಿ...
ಕವನ
ಡಂಬಾಚಾರಿಗಳುಧರ್ಮ- ದೇವರ ಹುಟ್ಟಿಸಿ
ಸುಳ್ಳು ಪವಾಡ ಸೃಷ್ಟಿಸಿ
ಮುಗ್ಧ ಜನರನು ವಂಚಿಸಿ
ಮೋಸ ಮಾಡಿ ದುಡ್ಡು ಗಳಿಸಿ
ಮಡೆ ಎಡೆ ಸ್ನಾನದ
ಹೆಸರಿನಲ್ಲಿ ಎಂಜಲಲೆಯ
ಮೇಲೆ ಹೊರಳಾಡಿಸಿ
ಮಂಡೆ ಬೋಳಿಸುವ
ಡಂಬಾಚಾರಿಗಳು
ಮೂಢಾಚರಣೆಗಳ ದಾಸರಾಗಿಸಿ
ಜ್ಯೋತಿಷ್ಯ- ಭವಿಷ್ಯ ಕೇಳಿ
ಮಾಟ-ಮಂತ್ರವ ಮಾಡಿಸಿ
ಹೋಮ ಹವನದಿ
ಬೇಯಿಸಿ
ವಾಸ್ತುವಿನ ಹೆಸರಿನಲ್ಲಿ
ದಿಕ್ಕು ಬದಲಿಸಿ
ಕಂದಾಚಾರ- ವಾಮಾಚಾರಕ್ಕೆ
ಕಟ್ಟು ಬಿದ್ದು
ಅರ್ಥವಿಲ್ಲದ ಆಡಂಬರದ
ಆಚರಣೆ ಮಾಡಿ
ವ್ಯರ್ಥ ಸಮಯ ಕಳೆಯುವ ಜನರು
ಮೂಢಾಚರಣೆಯ ಗೂಡಿನಲ್ಲಿ
ಬೀಡು ಬಿಟ್ಟಿರುವ ಜಾಡ್ಯಗಳಿಂದ
ಹೊರ ಬರುವುದು ಯಾವಾಗ ?
ಕ್ರಾಂತಿ ಕಹಳೆ...
ಕವನ
ನಗೆ ಹುಡುಕಬೇಕುದುಃಖದ ದೌಲತ್ತಿಗೆ
ನಾನೊಬ್ಬನೆ ಸಿರಿವಂತ
ಎಂದುಕೊಂಡಿದ್ದೆ
ಹತ್ತಿರದಿಂದ ನೋಡಿದರೆ
ಎಲ್ಲರೂ ಧನಿಕರೆಆಗಸದಲಿ ಹಾರುತ್ತ
ಗುಂಪನಗಲಿದ ಗುಬ್ಬಿ
ದುಃಖಿಸದೆ ಮತ್ತೆ
ಗೂಡು ಕಟ್ಟುವುದು ಕಂಡು
ಮೂಕನಾದೆಕಾಲಲ್ಲಿ ಬೂಟಿಲ್ಲ ಎಂದು
ಕಿರುಚಾಡುವ ಬಾಲಕ
ಕಾಲಿಲ್ಲದ ಬಡವ
ಬೀದಿಯಲಿ ಹೂವು
ಮಾರುವುದು ಕಂಡು ಮೌನವಾದಬದುಕು ಇಷ್ಟೇ ನೋವು
ನುಂಗುವವರ ಕಂಡು
ಬಾಳು ಕಾಣಲು ಬೇಕು
ದುಃಖದ ಮಡುವಿನಲಿ
ನಗೆ ಹುಡುಕಬೇಕು
________________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಕವನ
ಅಪಸ್ವರದ ಸಂತೆಎಲ್ಲರ ಸಮ್ಮುಖದಿ
ಮನದಳಲು ತೋಡಿ
ಅಳಲಾರೆ ನಾನು
ಅಪಸ್ವರದ ಸಂತೆಯ ತೊರೆದು,ಅಪೋಶನಗೈದು
ಏಕಾಂತದ
ಅನಂತದತ್ತ ಸಾಗಿ
ನಗು ನಗುತಾ
ಕಣ್ಣೀರಾಕಿಬಿಡುತ್ತೇನೆ
ಈ ಕ್ರೂರ ವ್ಯವಸ್ಥೆಯ
ನೋಡಿ,
ರೇಗಾಡುವುದಿಲ್ಲ ನಾನು,
ಸೋಲಿನ ಪ್ರತಿ
ಮೆಟ್ಟಿಲ ಮೇಲೆ
ಮಾರಾಟವಾದ
ಮಾತುಗಳ ಗಮನಿಸಿ
ಮೌನದ ಕುಲುಮೆಯಲ್ಲಿ
ಶಬ್ದಗಳ
ಕರಗಿಸಿಬಿಡುತ್ತೇನೆಯಾರ ಮುಂದೆಯೂ
ಅರಚುವುದಿಲ್ಲ ನಾನು
ವಿಕಾರಗಳು
ಎದೆಯನ್ನು ಕಿವಿಚಿದರೂ
ಹನಿ ಹನಿ ವಿಷವ ಕುಡಿದು
ಮೌನವಾಗಿ
ನಂಜಾಗಿ ಬಿಡುತ್ತೇನೆ
ಸಾವಿನ ಕರೆಯನು
ನಿರಾಕರಿಸಿ
ನನ್ನೊಳಗೆ ನಾನು ಸಹನೆಯ ಶವವಾಗಿ ಬಿಡುತ್ತೇನೆ.
•••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಕವನ
ಅಪರಾಜಿತೆತರುಣಿಯ ತೋಳ್ಬಂದಿಗೂ
ತುಮುಲವಿದೆ
ತಿಳಿದವರಾರು?ಕಣ್ಣ ಕುಲುಮೆಯಲಿ ದಿನವು
ಕುದಿಯುವ
ಕುವರಿಯಾರೋ ಕೇಳಿದವರಾರು?ಮಂದಸ್ಮಿತೆ
ಮಲ್ಲೆ ಮುಡಿಯುವಳು
ಮಧುವನಕೆ ಕರೆಯುವಳುಮೂಗುನತ್ತಲ್ಲೂ ಸೆಳೆಯುವಳು
ಮಂದಬೆಳಕಲ್ಲೂ ಮಿನುಗುವಳು
ಮದನಕೂಟದರಸಿಯಾಗುವಳುಜುಮುಕಿ ಲೋಲಾಕು ವಯ್ಯಾರ
ಜರಿಸೀರೆ ತೊಟ್ಟ ಮಂದಾರ
ಜೋಕುಮಾರರ ಚಕೋರಗುಂಗುರು ಕೂದಲ ಸುಳಿಯಲಿ
ಗಮ್ಯದರಿವು ಮರೆಸುವ
ಗಂಧವತಿಯ ಘಮಲೆ ಅಮರನೂರು ನರಕವ ದಾಟಿದ
ನಾಲ್ಕು ಲೋಕವ ಸುತ್ತಿದ
ನಡುಬೀದಿ ಹೂವಿಗೆ ಮರಣವಿಲ್ಲಉಪಮೆಗಳ ಕಟ್ಟಿ ಅವಳ
ಉಡಿ ತುಂಬುವಂತಿಲ್ಲ
‘ಉದರ ನಿಮಿತ್ತ’ ಮರೆಯುವಂತಿಲ್ಲಹಗಲಿನಲಿ ತಲೆಗೇರಿ
ಹೆಜ್ಜೆ ತಪ್ಪಿಸುವ ಕಟು
ಹೆಂಡದಂತವಳುಕೆಂದಾವರೆ ಮೊಗದ
ಕನ್ನಿಕೆ ಕೊನೆಯಿರದ
ಕತೆಯಂತವಳುಅಂಧಕಾರದಲಿ ಅರಳಿದ
ಅಪರಾಜಿತೆಗೆ ಬಲೆಯ...
ಕವನ
ಎಡಗೈ ಶಕ್ತಿ
ಬಲಕ್ಕಿಲ್ಲದ ವೇಗ, ಎಡಕ್ಕಿಹುದು ನೋಡಿ
ಯುವರಾಜ್ ಸಿಂಗ್ ನ ಬ್ಯಾಟಿಂಗ್ ಶಕ್ತಿಯಲ್ಲಿ ಹರಿಯಿತು ರನ್ ಮಳೆ
ಎಡಗೈಯ ಸವಿನಯ ನಗು ಎಲ್ಲರನು ಮೋಡಿಮಾಡಿದಾಗ
ಜಗವೆಲ್ಲ ಕೊಂಡಾಡಿತು ಸಾಧನೆಯನುವಿಷ್ಣುವರ್ಧನ್ ಎಡಗೈ ಯಲಿ ಹಾಕಿರುವ ಕಡಗ ಕೈ ಮುಷ್ಟಿ...
ಕವನ
ಎರಡು ಕವನಗಳು : ಡಾ. ಶಶಿಕಾಂತ ಪಟ್ಟಣ
ನಿನ್ನಿಂದ ನಗಬೇಕು
____________________
ನಿನ್ನ ಸುತ್ತ
ನೂರು ಜನರು
ನಿನ್ನಿಂದ ನಗಬೇಕು
ಹೊರತು
ನಿನ್ನ ನೋಡಿ ಅಲ್ಲ
ನಗೆ ಮಲ್ಲಿಗೆ
ಹಂಚಿ ಬಿಡುಯಾರಾದರೂ ಅತ್ತರೆ
ನಿನಗಾಗಿ ಅಳಬೇಕೆ
ಹೊರತು
ನಿನ್ನಿಂದಲ್ಲ
ಅಳು ನೋವು
ನೀಡದಿರುನೀನು ನಕ್ಕಾಗ
ಅವರು ನಕ್ಕು
ನೀನು ಅತ್ತಾಗ
ಅವರು ಅತ್ತರೆ
ಅದುವೇ ಸ್ನೇಹ
ಪ್ರೀತಿ ಜೀವನ
ನಕ್ಕು ಬಿಡು
ನಿನ್ನ ನೋವು
ಮರೆತು
____________________ಮುಗಿಸಿ ಹೊರಡು
___________________
ತನು ಮನ
ಭಾವಗಳ
ತಳಕಾಟ
ಅತ್ತ ಇತ್ತ
ಹೊಯ್ದಾಟ
ಚಿತ್ತ ಚಂಚಲ
ತೀವ್ರ ಚೆಲ್ಲಾಟ
ಮನವಿದು
ಮಹಾದೇವನ
ಮಾಟ
ಆತ್ಮ ಕಾಯ
ಪ್ರಾಣಗಳ ಕೂಟ
ಮುಗಿಸಿ ಹೊರಡು
ಭೂಮಿ ಬಿಟ್ಟು
ಸಾಕು ಅವರಿವರ
ಕಾಟ
_____________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಕವನ
ಬೇಂದ್ರೆ ಅಜ್ಜನ ನೆನಪು
ಜನವರಿ ತಿಂಗಳ ಬಂತಂದ್ರ ನೆನಪಾಗೋ ಜೀವ ಅಂದ್ರ ಬೇಂದ್ರೆ ಅಜ್ಜಾsನ
ನಕ್ಕು ಸಾಯ್ರೋ ನಕ್ಕು ಸಾಯ್ರಿ ಅಂತಾ ನಮಗೆಲ್ಲಾ ಹೇಳಿ ನಕ್ಕೋತ ಹೋದ ದತ್ತು ಮುತ್ಯಾ
ಬಡತನಕ ಹೇಸಿದಾವಲ್ಲ ಮೆಟ್ಟಿ ನಿಂತಾವ
ಬೆಂದು ಬೇಂದ್ರೆಯಾದಾಂವರಾಮಚಂದ್ರ ಅಂಬೂತಾಯಿಯ ಮಗನಾಗಿ
ಗೋದೂಬಾಯಿ ನೆರಳಿನಾಗ ಕನ್ನಡ ನಾಡಿನ ಆಲದ ಮರಾ ಆಗಿದ್ದಾಂವ
ಮಾತು ಆಡಿದರ ಹಸಿ ಗ್ವಾಡ್ಯಾಗ ಹಳ್ಳ ಒಗದಂಗ ಮಾತಾಡಾಂವ
ಕನ್ನಡದವ್ವ ಅಂದ್ರ...
ಕವನ
ಕಾವ್ಯದ ಮರಣ ಶಾಸನಬರೆಯಲಾರೆ ಮತ್ತೆಂದಿಗೂ ಕವಿತೆ ಮನುಷ್ಯನೊಳಗಿನ ಮನಸ್ಸಿನ ಕಲೆ;
ನಾಜೂಕಿನಲಿ ಮಲಗಿಬಿಟ್ಟಿವೆ ಇಲ್ಲಿ
ಓದುಗರಿಲ್ಲದೆ ಬರೆದ ಸಾಲುಗಳು,
ಬಾಯ್ದೆರೆದ ಎರೆಬೀಡಿನಂತೆ.
ಅಕ್ಷರಗಳು ಹೂ ಮುಡಿದರೂ
ಕಳೆಗುಂದಿದ ಸಂಜೆಯಂತಿವೆಮೋಬೈಲಿನ ಭಾವಕೋಶದಲಿ
ಬೆರಳುಗಳ ತೇವಕ್ಕೆ ಮರುಳಾಗಿ,
ಭಾವದ ಮೈಥುನದಲಿ ಬಿಸಿಯಾಗಿವೆ.
ಬೀಸುವ ಗಾಳಿ ಮೈಯ ಸವರುವಂತೆ,
ಪಾಳು ಹೊಲದಲಿ ಕವಣೆ ಬೀಸಿದಂತೆ;
ಕಳೆದುಕೊಂಡ ಸಮಯ, ತೊಳೆದುಕೊಂಡ ಭಾವ
ಅಷ್ಟಿಷ್ಟಲ್ಲ ನನ್ನ ಪಾಲಿಗೆ...
ನಾನು ಮುಪ್ಪಿಗೆ ಸರಿಯುವ ಹೊತ್ತಿಗೆ
ಯಾರನ್ನೂ ಕಾಡದೆ ಮೌನವಾಗುವೆಬರೆಯಲಾರೆ ಮತ್ತೆಂದಿಗೂ ಕವಿತೆ.
ಆದರೂ...
ಬತ್ತದ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



