ಕವನ

ಕವನ : ಕರುಣದಿಂದಲಿ ಕಾಯೋ ಗುರುರಾಯ

ಕರುಣದಿಂದಲಿ ಕಾಯೋ ಗುರುರಾಯಕಲಿಯುಗ ದೈವ ಶ್ರೀ ರಾಘವೇಂದ್ರ ಒಲಿದರೆ ಯಾವುದೇ ಭಯವಿಲ್ಲ ನಲಿಯುವಿರೆಲ್ಲ ರಾಯರ ಕೃಪೆಯಿಂ ಕಾಲಿಟ್ಟಲ್ಲಿ ಬರೀ ಜಯವೆಲ್ಲಕರುಣಾಸಾಗರ ಈ ನಮ್ಮ ದೇವರು ಹರಸುವರೆಲ್ಲರ ಕೃಪೆ ತೋರಿ ನರವೇಷ ತೊಟ್ಟು ಭುವಿಗೆ ಬಂದಿಹ ಪರಶಿವನೇ ಸರಿ ಕೈ ಮುಗಿರಿಗುರುವಾರದ ದಿನ ಗುರುವಿನ ಧ್ಯಾನ ಅರಿವಿನ ಹೊಳೆಯನೆ ಹರಿಸುವನು ಬರಿಗೈ ಇರಲಿ, ಧನಿಕನೆ ಬರಲಿ ಸರಿಸಮನಾಗಿ ಕಾಣುವನುತಂದೆಯು ನೀನೇ, ತಾಯಿಯು ನೀನೇ ಬಂಧು ಬಳಗವು ನೀನಯ್ಯ ಚೆಂದದ ಭಾವವ ಕರುಣಿಸಿ...

ಕವನ : ಗುರುವಿಗೆ ಕಂಬನಿ

ಗುರುವಿಗೆ ಕಂಬನಿಕರುನಾಡ ನೆಲದಲ್ಲಿ ಹುಲುಸು ಧಾರವಾಡದ ಪುರವು ಕರ್ನಾಟಕ ಕಾಲೇಜಿನಲ್ಲಿ ಇದ್ದರೊಬ್ಬರು ಗುರು ಇಲ್ಲದಂತೆ ಅತಿ ಶಿಸ್ತಿನ ಶಿಕ್ಷಕ ಸಮಯ ಪಾಲಕ ಗಂಭೀರ ನಡೆ ಸೌಮ್ಯ ನುಡಿ ಪಾಠ ಮಾಡುವ ಕಾರ್ಯ ಜಪ ತಪ ಪೂಜೆ ಮಂದಹಾಸದ ನಗೆ ವಿದ್ಯಾರ್ಥಿಗಳ ಚಿಲುಮೆ ಬರಹ ಓದು ಕವನ ನಾಟಕಗಳ ಗೀಳು ಅದೆಷ್ಟೋ ಮಕ್ಕಳಿಗೆ ಮಾರ್ಗದರ್ಶಿ ಸ್ನೇಹ ಸಮತೆಯ ಪ್ರೇಮದರ್ಶಿ ಚೆಲುವಾಯಿತು ಕನ್ನಡವು ಗೋಕಾಕ ಚಳವಳಿಯು ವಿದ್ಯಾವರ್ಧಕ ಭವನದ ಹೊನ್ನ ಗುಡಿಯು ಭರತೇಶನ ಭೋಗವೈಭವ ಕಾವ್ಯ ಕುಸುಮವು ನಿಮಗೆ ಯಾರಿಲ್ಲದ ಹಾದಿಯಲಿ ಸದ್ದಿಲ್ಲದೇ ಹೋದಿರಿ ಬಿಕ್ಕುತಿಹೆವು ನಾವು ನಿಮ್ಮ ಕರುಣೆ ಕುಡಿಗಳು ಹೋಗಿ...

ಕವನ : ಕಲ್ಲು ದೇವರು

ಕಲ್ಲು ದೇವರುಕಲ್ಲು ದೇವರು ದೇವರಲ್ಲ ಎಂದ ನಮ್ಮ ಬಸವನು ಕಲ್ಲು ಮೂರ್ತಿ ಮಾಡಿ ಬಿಟ್ಟೆವು ನಾವು ನೀವು ಮಠಗಳುಮಣ್ಣು ಮೂರ್ತಿ ದೇವರಲ್ಲ ಎಂದ ನಮ್ಮ ಶರಣನು ಮಣ್ಣು ಮಾಡಿ ಬಿಟ್ಟೆವು ನಮ್ಮ ಭಕ್ತರು ಲಿಂಗ ಜಂಗಮ ತತ್ವವುಕಂಚು ಲೋಹ ದೇವರಲ್ಲ ಎಂದ ನಮ್ಮ ಹಿರಿಯರು ಕಂಚು ಮೂರ್ತಿಗೆ ಕೋಟಿ ಸುರಿದರು ನಮ್ಮ ಮೂರ್ಖ ಮನುಜರುನಮ್ಮ ಅರಿವೆ ಗುರು ಆಚಾರವು ಲಿಂಗ ಹಂಚಿಕೊಳ್ಳುವ ಅನುಭಾವ ಜಂಗಮವೆಂದರು ಪ್ರಮಥರು ಎಲ್ಲಾ ಮರೆತು ಕಾವಿ ಹಿಂದೆ ಕುಣಿವ ನಾವು...

ಕವನ : ವರ ಮಹಾಲಕ್ಷ್ಮಿ

ವರಮಹಾಲಕ್ಷ್ಮಿ ಶುಭ ಶುಕ್ರವಾರದ ಪುಣ್ಯ ದಿನವು ವರಮಹಾಲಕ್ಷ್ಮಿ ಹಬ್ಬದಿ ಮನವು ಸ್ಮರಿಸುತ್ತ ಸುರಿಸಿ ಮಲ್ಲಿಗೆ ಹೂವು. ಬೇಡುತಿದೆ ಭಕ್ತಿಯಲಿ ಈ ಜಗವು.!ಶ್ರೀಹರಿಯ ಹೃದಯದ ಅರಗಿಣಿ ತಾವರೆ ಪೀಠದ ಒಲವಿನ ರಮಣಿ ದೀನರ ಬಾಳಿನ ಪ್ರೀತಿಯ ಕಣ್ಮಣಿ ಸಂಕಟವ ಕಳೆವ ಸ್ವರ್ಗದ ರಾಗಿಣಿ.!ಕುಂಕುಮದ ಬಿಂದು ಹಣೆಯೊಳು ಅರಿಶಿಣ ಚಂದನವು ಮೊಗದೊಳು ಮೂಗುತಿಯ ನತ್ತಿನ ಮಿಂಚೊಳು ಹೊಳೆವೆ ಮಹಾಲಕ್ಷ್ಮಿ ನಗೆಯೊಳು.!ಚತುರ್ಭುಜೆಯ ವರಧಾತೆ ಚಿನ್ಮಯಿ ದುಡಿಮೆಗೆ ಒಲಿವ ಕರುಣಾಮಯಿ ಸುಖಶಾಂತಿ ನೀಡುವ...

ಕವನ : ಬದುಕಲು ಬಿಡಿ ನನ್ನ

ಬದುಕಲು ಬಿಡಿ ನನ್ನ ಅರಳಿ ನಗುವ ಹೂವಿನಂತೆ ಹೆಣ್ಣು ತಾ ಬೆಳೆಯುವಳು ಹೆತ್ತ ಮನೆಗೆ , ಕಾಲಿಟ್ಟ ಮನೆಗೆ ಕೀರ್ತಿ ಹೊತ್ತು ತರುವಳು.ಮಮತಾ ಮೂರ್ತಿ ತಾಯಾಗಿ ಮಡಿಲ ತುಂಬಿ ನಗುವಳು ಮಾನಿನಿಯು ತಾನಾಗಿ ಮನೆಯ ದೀಪ ಬೆಳಗುವಳು.ಹೆಣ್ಣು ಜಗದ ಕಣ್ಣೆಂದು ಹೇಳಿದರು ಮಹಾತ್ಮರು ಹೆಣ್ಣು ಭೋಗದ ವಸ್ತುವೆಂದು ಕಂಡರು ಕೆಲ ದುರುಳರು.ವಿಕೃತ ಕಾಮದ ಕಣ್ಣಿಗೆ ಕಾಣುವುದೆಲ್ಲ ಬೆತ್ತಲೆ ರಕ್ಕಸತನ ತೋರುವರು ಅವರಲ್ಲಿ ಇಲ್ಲ ಕರುಣೆ.ಮನದ ಆಸೆ ತೀರಿಸಿಕೊಳ್ಳಲು ಎಳೆದು ನಿನ್ನ ಹೊತ್ತರು ದಾಹ...

ಕವನ : ಜೀವ ಪಯಣ

ಜೀವ ಪಯಣ ಬಹು ದೂರವೇನಿಲ್ಲ ನಾವು ಬಂದು ಹೋಗುವ ದಾರಿ ತಲುಪಲೂ ಬಹುದು ಅರಿವಿರದೆ ಹುಟ್ಟಿದಾ ಮರುಕ್ಷಣ.ಬಂದಾಗ ಅಲ್ಲೊಂದು ಸಂಭ್ರಮ ಹೋಗುವಾಗಲೂ ಮಗದೊಂದು ಸಂಭ್ರಮ ನೆನಪಿರದು ಯಾರಿಗೂ ಆದಿನ ಸುಖ , ಶೋಕಗಳ ಸಮಾಗಮ .ಧನಿಕ ದರಿದ್ರನಿಗೂ ಒಂದೇ ಹುಟ್ಟು ಸಾವಿನ ಸಂತೆ ಅಡಗಿ ಕುಳಿತರೂ ನಮ್ಮ ಬಿಡದು ಸಾವಿಗಾಗಿ ಮಾಡದಿರು ಚಿಂತೆ.ಮರಣ ಬರುವ ವರೆಗೂ ಮಣ್ಣು ಮಹಲಿನ ಮೇಲಾಸೆ ಮಣ್ಣಾಗಿ...

ಕವನ : ಕವಿ ಬಯಕೆ

ಕವಿ ಬಯಕೆ ಒಬ್ಬ ಸಾಹಿತ್ಯ ಪ್ರಿಯ ಕವಿಯಾಗಲೆಂದು ಏನೇನೋ ಬರೆದ ಕವಿಯಾದ ಮೇಲೆ ಬರೀಲೇಬೇಕಂತ ಇನ್ನಷ್ಟು ಬರೆದ ಕಿವಿಯಿಂದ ಕೇಳುವುದ ಕೇಳಿದ ಕೇಳಬಾರದ್ದು ಕೇಳಿದ ಕಣ್ಣಿಂದ ಒಳಿತು ನೋಡಿದ ಕೆಡುಕನ್ನೂ ನೋಡಿದ ಸರಿ ಅನಿಸಿದ್ದೆಲ್ಲ ಹಾಳೆಗೆ ಸುರಿದ ತಪ್ಪು ಅನಿಸಿದ್ದೆಲ್ಲ ಹೊರಗೆಸೆದ ಕನಸುಗಳಿಂದ ಕಾವ್ಯ ಹೊಸೆದ ಸನ್ನಿವೇಶಗಳಿಂದ ಕಥೆ ಕಟ್ಟಿದ ಪ್ರೀತಿಗಳಿಗೆ ಬಣ್ಣ ಬಳಿದ ದ್ವೇಷಗಳಿಗೆ ಸುಣ್ಣ ಸವರಿದ ಸ್ನೇಹಕ್ಕೆ ನಮಸ್ಕರಿಸಿದ ಅಸೂಯೆಗೆ ಅವಮಾನಿಸಿದ ಅಕ್ಷರಗಳಿಗೆ ಅಂದ ನೀಡಿದ ಸಾಲುಗಳ ಸೃಷ್ಟಿ ಮಾಡಿದ ಬರೆದ ಬರೆದ ಹಾಳೆ ತುಂಬಿಸಿದ ಅರ್ಥ ಬಿಂಬಿಸಿದ ಸರಿಯಾಗಿ ಜೋಡಿಸಿದ ಪುಸ್ತಕಗಳ ಮಾಡಿದ ಕವಿಯಂತೂ ಆದ ಓದುವ ಮನಸುಗಳಿಗಾಗಿ ಕಾಯ್ದ ಕಾಯ್ದ ಕಾಯುತ್ತಲೇ ಕಂಗಾಲಾದ ಎಂ.ಸಂಗಪ್ಪ ಲಿಂಗಸುಗೂರು

ಕವನ : ಮೊದಲ ಹೆಜ್ಜೆ

ಮೊದಲ ಹೆಜ್ಜೆಕುಳಿತು ನೋಡಿದರೆ ಕೈಗೆಟಕದ್ದೆಂದರೆ, ಕಡ್ಡಿ ಗುಡ್ಡವಾಗಿ ಕಾಣುವುದಲ್ಲ. ಮುಂದಡಿಯಿಟ್ಟರೆ ಮುನ್ನುಗ್ಗಿದರೆ, ದೊಡ್ಡ ಗುಡ್ಡ ಕಾಲ ಕೆಳಗೆ ನಿಲ್ಲುವುದಲ್ಲ!ಸುಮ್ಮನೆ ಯೋಚಿಸಿದರೆ ಚಿಂತೆಯಲ್ಲಿ ಮುಳುಗಿದರೆ, ಸುಲಭವೂ ಸುಲಭವಲ್ಲ ಅಂತನಿಸುವುದಲ್ಲ. ಎದ್ದು‌ ನಡೆಯುತ್ತಿದ್ದರೆ ಕಷ್ಟಗಳಿಗೆ ಕರಗದ ಬೆಟ್ಟದಂತಿದ್ದರೆ, ನಂಬದ ಪವಾಡ ಜರುಗುವುದಲ್ಲ!ಮೇಲಕ್ಕೇರಬೇಕೆಂದರೆ ತುತ್ತತುದಿ ತಲುಪಬೇಕೆಂದರೆ, ಮೆಟ್ಟಿಲುಗಳು ಲೆಕ್ಕಕ್ಕೆ ಬರುವುದಿಲ್ಲ. ಮೈಮರೆತರೆ ಕೈ ಚೆಲ್ಲಿ ಕೂತರೆ, ಕೈಯಲ್ಲಿರುವುದು ಆಗುವುದಿಲ್ಲ.ಗುರಿಯಿರುವೆಡೆ ಅಡೆತಡೆಯಿದ್ದರೆ, ಕೈಗಳು ಕೈಗಳಿಗೆ ಜೋಡಿ ಆಗುವವಲ್ಲ. ಸಾಗುವ ದಾರಿಯಲ್ಲಿ ಕತ್ತಲಿದ್ದರೆ ಗುರುವಿನ ನೆನೆದರೆ, ಹೊಸ ಬೆಳಕೊಂದು ಹೊಳೆಯುವುದಲ್ಲ!ಸಾವಿರ ಮೈಲಿಗೂ ಮೊದಲ ಹೆಜ್ಜೆಯೇ ಮೊದಲು, ಯಾವುದಕ್ಕೂ ಮೊದಲುಹೆಜ್ಜೆ ಎತ್ತಿಡಬೇಕಲ್ಲ....!================ ಜಯಶ್ರೀ....

ಕವನ : ಕರುನಾಡಿನ ಒಡೆಯರು

ಕರುನಾಡಿನ ಒಡೆಯರುಸತ್ಯ ಹೇಳಲು ಹೆದರಲಿಲ್ಲ ನಿತ್ಯ ಮುಕ್ತಿಯ ಶರಣರು. ಸದ್ದು ಮಾಡದೆ ಯುದ್ಧ ಮಾಡಿ ಮಣ್ಣಿನಲ್ಲಿ ಗೆದ್ದರು . ವರ್ಗ ವರ್ಣದ ಕಸವ ಕಿತ್ತು ಸಮತೆ ಸಸಿಯನ್ನು ನೆಟ್ಟರು ಸತ್ಯ ಶಾಂತಿ ವಿಶ್ವ ಪ್ರೀತಿ ಮನುಜ ಪಥಕೆ ನಡೆದರು. ಶ್ರಮಿಕರೆಲ್ಲ ದುಡಿದು ಬಂದರು ಕೂಡಿ ಹಂಚಿ ತಿಂದರು. ದಯೆ ಧರ್ಮ ಭಾಷೆ ನುಡಿದರು ಹೊಸ ಮುನ್ನುಡಿ ಬರೆದರು. ಶರಣ ಶರಣೆಯರು ಖಡ್ಗವೆತ್ತಿ ವಚನ...

ಕವನ : ಶಾಂತತೆ ಜಗದಲಿ

ಶಾಂತತೆ ಜಗದಲಿಕತ್ತಲು ಓಡಿಸಿ ತಾ ಓಡುತ ಬರುವನು. ಬಾಲರವಿ ಪೂರ್ವದಲಿ ಎತ್ತರೆತ್ತರದ ಬಾನಿನಲಿ. ಬಾನಿನ ಹಣೆಗೆ ಸಿಂಧೂರದಂತೆ ಹೊನ್ನ ಕಿರಣ ಸೂಸುತಲಿ. ಚಿತ್ರಿಸುವನು ಆಕಾಶವನು ಪ್ರಕಾಶಮಾನ ಬಣ್ಣಗಳಲಿ.ಮಧುರಾಮಧುರ ಕಲರವವು. ರಂಗುರಂಗಿನ ಪಕ್ಷಿಗಳ ಚಿಲಿಪಿಲಿಯಲಿ. ಹಸಿರೆಲೆ ಮೇಲೆ ಹೊಳೆಯುವವು. ಬೆಳಗಿನ ಇಬ್ಬನಿಗಳು ಸಂತೋಷದಲಿ.ಸದ್ದು ಮಾಡುತ ನಲಿವ ಎಲೆಗಳು ತೂಗಾಡುವ ಹಣ್ಣಿನ ಜೊತೆಯಲಿ. ಸೌಮ್ಯದಿ ನದಿಯು ಹರಿಯುವುದು. ಕಾಡಿನ ಪಿಸುಮಾತು ಕೇಳುತಲಿ.ಪ್ರಸನ್ನ ಪ್ರಶಾಂತ ಪರಿಸರವು. ನಯನವು ಪಿಳಿಪಿಳಿ ಹಸಿರಿನ ಸಿರಿಯಲಿ. ಮಧು ಹೀರುವ ಭೃಂಗದ ಗಾನವು. ಮಂದಾರ ಪುಷ್ಪದ ಚೆಂದದಲಿ.ಮೈಮನಗಳು ಪುಳಕಿತವು ವಸುಂಧರೆ ಚೆಲುವಿನಲಿ. ಮಣ್ಣಿನ ಕಣಕಣದ ಪರಿಮಳವು. ಮೈ ತೀಡುವ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group