ಕವನ
ನಿನ್ನ ನೆರಳೆ ನಿನಗೆ ಸಾಕು
ಯಾರನ್ನೂ ನಂಬಿ ಮೋಸ ಹೋಗಬೇಡ,
ನಿನ್ನ ನೆರಳೇ ನಿನಗೆ ಸಾಕು…
ನೀನೇ ನಿನ್ನ ಬಾಳಿನ ದಾರಿ,
ನಿನ್ನ ನಂಬಿಕೆಯಾಗಲಿ ಬೆಳಕು…
ನಗುವ ಹಿಂದೆ ಏನೆಂಬುದು ಅರಿಯಲು ಸಾಧ್ಯವೋ?
ಹೃದಯದೊಳಗೇ ನೋವಿನ ನೆರಳು ಬೀರುವೋ…
ನಿನ್ನ ನಂಬಿಕೆ ಸದಾ ನಿನ್ನ ಬಳಿಯಿರಲಿ,
ನಿನ್ನ ಹಾದಿಯ ಬೆಳಕಾಗಿರಲಿ…ಹಾಸುಹೊತ್ತು ಹಂಚಿದ ಮಾತು,
ಮೋಸದ ಬಲೆಗೂ ಸಿಕ್ಕದಿರು…
ಬೇಸರ ಬೇಡ, ನಿನ್ನ ವಿಶ್ವಾಸ,
ನೀನೇ ನಿನಗೆ ದೀಪವಾಗಿರು…ಬಾಳಿ ಬಂದವರ ಬಣ್ಣ...
ಕವನ
ಬಸವಣ್ಣ ನೀ ಬಿಟ್ಟ...
_____________________ಬಸವಣ್ಣ ನೀ ಕಳಚಿಟ್ಟ
ಕಿರೀಟವನು ಇವರು
ಧರಿಸಿ ಕುಳಿತು ಕುಪ್ಪಳ್ಳಿಸುತ್ತಿದ್ದಾರೆ
ನೀ ತೊರೆದ ಅರಮನೆಯ
ಮಠವ ಮಾಡಿ
ಸಕಲ ಭೋಗಾದಿಯಲಿ
ಮೆರೆಯುತಿಹರು.
ಬಸವಣ್ಣ ನೀ ಬಿಟ್ಟ
ಸಿಂಹಾಸನವನ್ನು
ಹತ್ತಿ ಇಳಿಯದೆ
ಕುಳಿತಿಹರು
ಅಕ್ಕ ಮಾತೆ ಸ್ವಾಮಿ ಶರಣರು
ಕಲ್ಲು ಸಕ್ಕರೆ ಕೊಟ್ಟು.
ಶೋಷಣೆ ವಸೂಲಿ ಕಾಯಕವಾಗಿದೆ
ಜಂಗಮ ಜಾತಿಯಾಗಿದೆ
ಜಾತ್ರೆ ತೇರು ರಥ ಉತ್ಸವ
ಕಾವಿ ಲಾಂಛನಧಾರಿಗಳ ಅಬ್ಬರ
ಇಲ್ಲ ಈಗ ಶಾಂತಿ ಸಮತೆ
ಬಸವಣ್ಣ ನಿನ್ನ ಜಗವೇ
ಹೊತ್ತು ನಡೆದಿದೆ.
ನಿನ್ನನರಿಯದ ದುರುಳರ
ಸಂಗವ ಮಾಡಿ
ನಾನು ಕೆಟ್ಟೆನು
ಬಸವ ಪ್ರಿಯ ಶಶಿಕಾಂತ-------------------------------------
ಗೆದ್ದು...
ಕವನ
ಹೊನ್ನಳ್ಳಿಯಾಕಿ
ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿಭಾರಿ ಜರಿಯ ರೇಷ್ಮೆ ಸೀರಿ ಉಟ್ಟುಕೊಂಡಾಕಿ
ಕರಿಯ ಹುಬ್ಬು ತಿದ್ದಿಕೋತ ಕಣ್ಣ ಹೊಡೆಯಾಕಿ ಮಾತುಮಾತಿನಲ್ಲಿ ಹಾಸ್ಯ ಉಕ್ಕಿಸುವಾಕಿ
ಏನೋ ಅಂದರ ಏನೋ ಅಂದು ನಕ್ಕು ನಗಿಸಾಕಿಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿತಾಳಿ ಸರಕ ಚಿನ್ನದ ಗುಂಡು ಕೊಡಿಸು ಎಂದಾಕಿ
ಕೈಗೆ ಚಿನ್ನದಬಳಿ ನಾಲ್ಕು ತೊಡಿಸು...
ಕವನ
ಕವಿಯ ಕಾವ್ಯದಂಗಳ
ಕಾವ್ಯವೊಂದು ಅದ್ಭುತ ಜಗದ ಶ್ರವಣ
ಸಂಭ್ರಮಿಸುವ ಧಿಗ್ಭ್ರಮಿಸುವ ಸ್ಫುರಣ
ಕಣ್ಣಿಗೆ ಕಂಗೊಳಿಸುವ ದೃಶ್ಯಗಳಾಭರಣ
ಸೌಗಂಧ ಶ್ರೀಗಂಧ ಪರಿಸರದ ಅನಾವರಣ
ಸಂಪ್ರೀತಿ ಸಂತೃಪ್ತಿ ತಂದ ಹೃದಯದಂಗಣ
ಕವಿಯಲ್ಲಿ ಸಂಚರಿತ ಸ್ಪುರಣದ ಹೂರಣಕಾವ್ಯ ಜೀವನದ ಅನುಭವಗಳ ಹಂದರ
ಕೆದಕಿ ಶೇಖರಿಸಿದ ಬಿತ್ತಣಿಕೆಯ ಸಂಚಾರ
ಬರವಣಿಗೆಯಲ್ಲಿ ಹರಿದ ಶಬ್ದಗಳ ಶರ
ಕವಿಯ ವರ್ಣನೆಯಲ್ಲಿ ಅರಳಿದ ಅಕ್ಷರ
ಓದುಗರ ಹೃದಯ ತಟ್ಟುವ ಭ್ರಮರ
ಕನ್ನಡಮ್ಮ ಹಾರೈಸುತ ನೀಡಿಹಳು ವರಕವಿಯ ಕಲ್ಪನೆಯ ಶರಧಿಯ ಆಳ
ಅರಳಿ...
ಕವನ
ಬದುಕಿ ಬಿಡುಬಾಲಗಿರಿಗೆ ಬನಗಿರಿಗೆ
ಮರುಳು ಹೋದ
ಹಕ್ಕಿಯಂತೆ,
ಬೇಲಿಯಾಚೆ ನೋಡುವ
ಕನಸುಗಳಂತೆ,
ಕೈಯಲ್ಲಿ ಹಣ್ಣಿದ್ದರೂ
ಬಳಲುವ ಹಸಿವಿನಂತೆ,
ಬದುಕಿ ಬಿಡು ಇದ್ದಂತೆ!
ಮುಗಿಯದ ಹಾದಿಯ
ಬೆಟ್ಟದ ಮೇಲೆ,
ಸಂಜೆಯ ಬೀಸಣಿಯಲ್ಲಿ
ಚಿಂತೆ ಬಿಟ್ಟು,
ಜಲಧಾರೆಯಲಿ ನೀರಿನ
ಹಾಡಂತೆ,
ಬದುಕಿ ಬಿಡು ನೀನು
ಬದುಕು ಇದ್ದಂತೆ!
ಕತ್ತಲಿಗೇ ಬೆಳಕಿನ
ಕನಸು ,
ಮೌನಕ್ಕೂ ನಗುವಿನ
ಮನಸು,
ಗಾಳಿಯೊಂದಿಗೆ ಹಾರುವ
ಗಾಳಿಪಟದಂತೆ,
ಬದುಕಿ ಬಿಡು ನೀನು
ಬದುಕು ಇದ್ದಂತೆ!
ನಾಳೆ ಹೇಗಿರಬಹುದು
ಯಾರು ಬಲ್ಲರು?
ನಿನ್ನ ಹೃದಯವ
ಅರಿಯುವವರಾರು?
ಹೂ ಅರಳುವ ಸಂತಸ
ಸಂಭ್ರಮದಲ್ಲಿ,
ಬದುಕಿ ಬಿಡು ನೀನು
ಬದುಕು ಇದ್ದಂತೆ!ದೀಪಾ ಪೂಜಾರಿ, ಕುಶಾಲನಗರ
ಕವನ
ಯಾರೂ ನಮ್ಮವರಲ್ಲಎಲ್ಲರೂ ನಮ್ಮವರೇ,
ಯಾರೂ ನಮ್ಮವರಲ್ಲ
ನಗುವಲಿ ಹಿತವು, ಮಾತಿಗೆ
ಮಿತ್ರರು,
ನೋವಿನ ಹೊತ್ತಿಗೆ ನೆರಳು
ಮಾತ್ರರು!
ಸ್ನೇಹದ ನೆರಳು ಬೆಚ್ಚಗೆ
ಇರಬಹುದು,
ಸೂರ್ಯ ಬರಲು
ಮಾಯವಾಯಿತು ಮಂಜು
ಒಗ್ಗಟ್ಟಿನ ಹಾಡು ಎಲ್ಲರ
ಮಂತ್ರ,
ಹೃದಯಕೆ ಮಾತ್ರ ಸೇರುವುದಿಲ್ಲ
ಅಂಥ ಹಾಡು
ಎಲ್ಲರೂ ನಮ್ಮವರೇ,
ಯಾರೂ ನಮ್ಮವರಲ್ಲ,
ನಿಜವನು ಅರಿಯಲು
ಬಾಳೇ ಸಾಕ್ಷಿ
ಎಲ್ಲವೂ ದೈವವು
ನನ್ನ ಬಾಳಿನ ಅಕ್ಷಿ
ಹಿತವಾಗಿ ಗೂಡಲಿ
ನನ್ನ ಪ್ರಾಣ ಪಕ್ಷಿ
________________________
✍️ದೀಪಾ ಪೂಜಾರಿ ಕುಶಾಲನಗರ
ಕವನ
ವಿಶ್ವ ಕವಿಯ ದಿನಪ್ಯಾಬ್ಲೋ ಪುಷ್ಕಿನ್ ಪಂಪ
ಶೆಲ್ಲಿ ಕೀಟ್ಸ್ ಕಾವ್ಯ ಕಂಪ
ಅಭಿನಂದನೆ ತಮಗೆಲ್ಲ
ಹರಿದ ಭಾವದ ಕಂಪು
ಕನ್ನಡಕೆ ಒಬ್ಬರೇ
ರಸ ಋಷಿ ಕುವೆಂಪು
ಅಂದು ಮುಂಜಾವಿನ ರವಿಕಿರಣ
ಪಕ್ಷಿ ಇಂಚರದ ಮಾಧುರ್ಯ
ಮಳೆಯಲ್ಲಿ ತಪ್ಪನಷ್ಟೇ ತೋಯ್ದು
ಮರ ಬುಡದಲ್ಲಿ ನಿಂತದ್ದು
ಗಾಳಿಯ ಎದುರಿಗೆ
ಮುಗಿಲ ಮುಟ್ಟಿದ ಪಟ
ಓಣಿಕೇರಿಯಲಿ ಲಗೋರಿ
ಹಬ್ಬಕೆ ಪಟಾಕಿ ಸದ್ಧು
ಸಾವಿರ ಮರಗಳನ್ನು ಕಡಿದು
ಹತ್ತು ಸಸಿಗಳನ್ನು ನೆಡುತ್ತೇವೆ .
ಭೂಮಿ ಬಿರಿದಿದೆ
ಬರದ ಅಟ್ಟಹಾಸ ಕುಹಕತನ
ಕವಿ ಮಾರುವ ಹಾಗಿಲ್ಲ
ಪ್ರಶಸ್ತಿ ಪುರಸ್ಕಾರ...
ಕವನ
ಕವನ : ತಿರುಗುತ್ತಿದೆ ಬೆಂಕಿಯ ಉಂಡೆ
ತಿರುಗುತಿದೆ ಬೆಂಕಿ ಉಂಡೆತಿರುಗುತಿದೆ ಬೆಂಕಿ ಉಂಡೆ
ಹತ್ತಿಕೊಂಡ ಕಿಚ್ಚಿನಂತೆ,
ಯಾರೂ ನಂದಿಸಲಾರರು
ಇದು ಹೋರಾಟದ
ಕಾಡ್ಗಿಚ್ಚಿನ ಜ್ವಾಲೆಯಂತೆ.ಗಾಳಿ ಬಿಸಿಲು, ಮಳೆ
ಸುರಿಯಲಿ, ಇದು ಆರದ
ಬೆಂಕಿಯಂತೆ, ನ್ಯಾಯ ಮತ್ತು
ಸತ್ಯಕ್ಕಾಗಿ, ಬೆಳಕು ತರುತ್ತದೆ
ಬೆಳಗಿನಂತೆ!ಕನ್ನಡದ ನೆಲ ಜಲ
ಭಾಷೆ ನುಡಿ ಕನ್ನಡ
ತಾಯಿ ದೇವಿಗೆ ದ್ರೋಹ
ಬಗೆದರೆ ಕಿಚ್ಚಾಗುವುದು
ಕರ್ನಾಟಕದೀಪಾ ಪೂಜಾರಿ, ಕುಶಾಲನಗರ
ಕವನ
ಕವಿತೆಯ ಅಳಲು
ಸಾಲ ಮಾಡಿ ಕವನ ಸಂಕಲನ
ಪ್ರಕಟಿಸಿದ ನಮ್ಮ ಕವಿಗೆ
ಸಾಹಿತ್ಯ ಸಮ್ಮೇಳನದಲ್ಲಿ
ಶಾಲು ಹೊದಿಸಿ ಸನ್ಮಾ ನಿಸಿ
ಹಾಡಿ ಹೊಗಳಿದರು
ಮನೆಯಲ್ಲಿ ಮಡದಿ ರೇಗಿದಳು
ಹೊದ್ದುಕೊಂಡು ಶಾಲು ಬೆಚ್ಚಗೆ
ಮಲಗಿರಿ ರೂಮಲ್ಲಿ ತೆಪ್ಪಗೆ
ಮತ್ತೆ ಕವಿತೆ ಬರೆದರೆ
ನಾ ಹೋಗುವೆ ತೌರಿಗೆ !
ಹೆಂಡತಿ ಬಿಟ್ಟರೂ ನಮ್ಮ ಕವಿ
ನನ್ನನ್ನು ಬಿಡುವನೆ
ಬಿಡದೆ ಬರೆದನು ಬಂಡಾಯ ಕವಿತೆ
ಮುನಿದು ಮಡದಿ ತವರಿಗೆ
ನಮ್ಮ ಕವಿ ಅಡಿಗೆ ಮನೆ ಒಳಗೆ !
ಕೋಸಂಬರಿಯಿಂದ ಕಾದಂಬರಿ ವರೆಗೆ
ಅಡಿಗೆ...
ಕವನ
ಜೀವ ಮುಕ್ತಿನೀನು ಮರೆಯಾಗಿ
ಹೋದೆ ಎಂದು
ಬಳಲಲಿಲ್ಲ ನಾನು
ನಿನ್ನ ನೆನಪಲಿ
ನಿನ್ನ ನೆನಹುವಿನಲಿ
ನೂಕುತ್ತಿರುವೆ ಬದುಕು
ನಿನ್ನ ಶಕ್ತಿಕೈ ಹಿಡಿದು ನಡೆದೆವು
ಮೂರು ದಶಕದ ಜೀವನ
ನಿನಗೆ ನಾನು ನನಗೆ ನೀನು
ಮರೆತು ಹೋದ ಪಯಣ
ನಿನ್ನ ಉಸಿರಲಿ ನಾನು ಬೆರೆತೆ
ನನ್ನ ಜೀವಕೆ ಸ್ಫೂರ್ತಿ
ಇರಲಿ ಸ್ನೇಹ ಪ್ರೀತಿ ಜೀವ ಮುಕ್ತಿ
________________________
ದೀಪಾ ಪೂಜಾರಿ ಕುಶಾಲನಗರ
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



