ಯಾರೂ ನಮ್ಮವರಲ್ಲ
ಎಲ್ಲರೂ ನಮ್ಮವರೇ,
ಯಾರೂ ನಮ್ಮವರಲ್ಲ
ನಗುವಲಿ ಹಿತವು, ಮಾತಿಗೆ
ಮಿತ್ರರು,
ನೋವಿನ ಹೊತ್ತಿಗೆ ನೆರಳು
ಮಾತ್ರರು!
ಸ್ನೇಹದ ನೆರಳು ಬೆಚ್ಚಗೆ
ಇರಬಹುದು,
ಸೂರ್ಯ ಬರಲು
ಮಾಯವಾಯಿತು ಮಂಜು
ಒಗ್ಗಟ್ಟಿನ ಹಾಡು ಎಲ್ಲರ
ಮಂತ್ರ,
ಹೃದಯಕೆ ಮಾತ್ರ ಸೇರುವುದಿಲ್ಲ
ಅಂಥ ಹಾಡು
ಎಲ್ಲರೂ ನಮ್ಮವರೇ,
ಯಾರೂ ನಮ್ಮವರಲ್ಲ,
ನಿಜವನು ಅರಿಯಲು
ಬಾಳೇ ಸಾಕ್ಷಿ
ಎಲ್ಲವೂ ದೈವವು
ನನ್ನ ಬಾಳಿನ ಅಕ್ಷಿ
ಹಿತವಾಗಿ ಗೂಡಲಿ
ನನ್ನ ಪ್ರಾಣ ಪಕ್ಷಿ
________________________
✍️ದೀಪಾ ಪೂಜಾರಿ ಕುಶಾಲನಗರ