spot_img
spot_img

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಆಚರಣೆ

Must Read

ಬೈಲಹೊಂಗಲ: ಉತ್ತಮ ಅರೋಗ್ಯಕ್ಕೆ ಸಮತೋಲನ ಆಹಾರ ಅತ್ಯಗತ್ಯ ಎಂದು ಮುಖ್ಯಶಿಕ್ಷಕರಾದ ಎನ್.ಆರ್ ಠಕ್ಕಾಯಿ ಹೇಳಿದರು. ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣಾ ಅಭಿಯಾನ ಹಾಗೂ ಸ್ವಚ್ಛತಾ ಪಖ್ವಾಡಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು  ಮಾತನಾಡಿದರು. ವಿವಿಧ ಪೋಷಕಾಂಶಗಳನ್ನು ಒಳಗೊಂಡ  ತರಕಾರಿ, ಸೊಪ್ಪು, ಹಣ್ಣುಗಳನ್ನು ಸೇವಿಸುವುದರಿಂದ ದೈಹಿಕ ಸದೃಢತೆ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ ಆರೋಗ್ಯ, ಆಹಾರ, ಜೀವನ ಶೈಲಿಯ ಕುರಿತು ಮಾಹಿತಿ ನೀಡಿದರು. ಪೋಷಣಾ ಅಭಿಯಾನದ ಉದ್ದೇಶ, ಸ್ವಚ್ಛತೆಯ ಮಹತ್ವವನ್ನು ಮನದಟ್ಟು ಮಾಡಿಕೊಟ್ಟರು. ವಿದ್ಯಾರ್ಥಿಗಳು ವಿವಿಧ ತರಕಾರಿ, ಸೊಪ್ಪು, ಧಾನ್ಯಗಳು, ಹಣ್ಣುಗಳು ಮತ್ತಿತರ ಆಹಾರ ಪದಾರ್ಥಗಳನ್ನು  ತಾವೇ ತಂದು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. 

ವಿದ್ಯಾರ್ಥಿಗಳಾದ ಚೈತ್ರಾ ಸೊಗಲದ, ಪೃಥ್ವಿ ಗರಗದ, ಲಕ್ಷ್ಮೀ ನಾಗಣ್ಣವರ, ಲಕ್ಷ್ಮೀ ಇಂಚಲ, ಗಜೇಂದ್ರ ಹಿರೇಮಠ, ಗಣೇಶ ಹುಣಶೀಕಟ್ಟಿ ಮಾತನಾಡಿದರು.

ಆಹಾರ ಮತ್ತು ಆರೋಗ್ಯದ ಬಗ್ಗೆ ಅರಿವು, ವೈಯಕ್ತಿಕ ಶುಚಿತ್ವ ಹಾಗೂ ಆರೋಗ್ಯಕರ ಹವ್ಯಾಸಗಳನ್ನು ಬೆಳೆಸುವ ಉದ್ದೇಶದಿಂದ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಹಾಗೂ ಸ್ವಚ್ಛತಾ ಪಖ್ವಾಡಾ ಸಂಬಂಧ ಶಾಲೆಯಲ್ಲಿ ಚಿತ್ರಕಲಾ ಪ್ರದರ್ಶನ, ಪ್ರಬಂಧ ಸ್ಪರ್ಧೆ, ಪ್ರತಿಜ್ಞಾ ವಿಧಿ ಸ್ವೀಕಾರ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜೆ.ಆರ್.ನರಿ, ಎಸ್.ಬಿ.ಭಜಂತ್ರಿ, ಎಸ್.ವಿ. ಬಳಿಗಾರ, ಎಸ್.ಟಿ ಚೌಗಲಾ, ವಿ.ಡಿ.ಪಾಟೀಲ, ಆರ್.ಸಿ.ಸೊರಟೂರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತನುಜಾ ಬಡಿಗೇರ ಪ್ರಾರ್ಥಿಸಿದರು. ಐಶ್ವರ್ಯ ಕುಲಕರ್ಣಿ ಸ್ವಾಗತಿಸಿದರು. ರಾಜೇಶ್ವರಿ ಸೊಗಲದ ನಿರೂಪಿಸಿದರು. ಈಶ್ವರಿ ಮೆಕ್ಕೇದ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!