ಕವನ
ಅಗಲಿದ ಯುವರತ್ನನಿಗೆ ನುಡಿನಮನ (ಭಾಗ್ಯ ಗಿರೀಶ, ಅನ್ನಪೂರ್ಣ ಹಿರೇಮಠ, ವಿಷ್ಣುಪ್ರಿಯ, ಮಹಾಂತೇಶ ಪಾಟೀಲ, ಅಮರ್ಜಾ)
ಕನ್ನಡದ ಜ್ಯೋತಿ
ಕರುನಾಡ ಕಂದ ವರನಟನ ಪುತ್ರನಿವ
ಕನ್ನಡಿಗರ ಹೆಮ್ಮೆ ಸರಳತೆಯ ಪ್ರತೀಕನಿವ
ಪರಮಾತ್ಮ ಕರುನಾಡಿಗೆ ನೀಡಿದ ಕಣ್ಮಣಿ ಇವ
ಕರುಣೆಯಲಿ ಪರಮ ಪುನೀತನಿವ
ಕನ್ನಡಿಗರ ಮಿಲನಕ್ಕೆ ಬೆಟ್ಟದ ಹೂವು ಒಂದು
ಕನ್ನಡದ ಕಂಪು ರಾಷ್ಟ್ರಮಟ್ಟದಿ ಸೂಸುತ್ತಾ ಬಂದು
ಸಿನಿರಂಗದಲ್ಲಿ ಅಣ್ಣಾಬಾಂಡ್ ಆಗಿ ಮಿಂಚಿ ಮೆರೆದು
ನೇತ್ರದಾನದ ಧನ್ಯತೆಯಲಿ ಅಮರವಾಗಿದೆ ತಾ ಇಂದು
ಅಭಿಮಾನಿಗಳ ಪ್ರಿಯ ರಾಜಕುಮಾರ
ನಟಸಾರ್ವಭೌಮನ ಮುದ್ದು ಕುವರ
ಸ್ನೇಹದಲ್ಲಿ ಆಕಾಶದಷ್ಟು ಎತ್ತರ
ಬಾಂಧವ್ಯದಿ ಮೀರಿಸಲಾಗದು ಅಪ್ಪು ಹುಡುಗರ
ಚಿಣ್ಣರ...
ಕವನ
ಅಪ್ಪು: ಯಾವ ಅಭಿಮಾನಿ ಬರೆದನೋ ಗೊತ್ತಿಲ್ಲ…
ಅಪ್ಪು ಅಗಲಿಕೆಯ ನೋವನ್ನು ಚುಟುಕುಗಳಲ್ಲಿ ವ್ಯಕ್ತಪಡಿಸಿದ್ದಾರೆ. ವಾಟ್ಸಪ್ ನಲ್ಲಿ ಬಂದ ಈ ಹೃದಯಸ್ಪರ್ಶಿ ಚುಟುಕುಗಳು......ಅಪ್ಪು
೧.
ಗಾಜನೂರಿನ
ಗಾಜು ಒಡೆದುಹೋಯಿತು..
ಕನ್ನಡಿಗರ ಮನಸ್ಸೂ
ಚೂರುಚೂರಾಯಿತು !!!೨.
ಅಪ್ಪನಂತೆ ಹಾಡುತ್ತಿದ್ದ..
ಅಪ್ಪನಂತೆ ನಟಿಸುತ್ತಿದ್ದ..
ಅಪ್ಪನಂತೆ ಹೊರಟುಹೋದ !!!೩.
ಹೃದಯಾಘಾತ
ಇಡೀ ನಾಡಿಗೆ ಆಗಿದೆ..
ಎದೆನೋವು ಬಂದದ್ದು
ಅವನಿಗೆ ಮಾತ್ರ!!!೪.
ಕನ್ನಡ ರಾಜ್ಯೋತ್ಸವಕ್ಕೆ
ಅಣ್ಣಾ ಬಾಂಡಿಲ್ಲ !!
ಬೊಂಬೆ ಹಾಡುತೈತೆ
ಅರಮನೆಯಲ್ಲಿ ರಾಜಕುಮಾರನಿಲ್ಲ !!!೫.
ಲೋಕದ ಹಣೆಬರಹವಿಷ್ಟೆ,
ಪಾಪಿಗಳು ಬೇಗ ಸಾಯುವುದಿಲ್ಲ...
ಅಜಾತಶತ್ರುಗಳಿಗೆ ದೇವರು
ಆಯುಷ್ಯ ಕೊಡುವುದಿಲ್ಲ !!!೬.
ಇದೊಂದು ಸೀನನ್ನು
ಕಟ್ ಮಾಡಿಬಿಡಿ..
ಅಪ್ಪು ರೀಟೇಕ್ ಮಾಡುತ್ತಾರೆ
ಒಮ್ಮೆ ಯ್ಯಾಕ್ಷನ್...
ಕವನ
ದಿಟ್ಟ ಮಾತೆಗೆ ನುಡಿ ನಮನ
ಕಮಲಾಬಾಯಿ ಚಟ್ಟೋಪಾಧ್ಯಾಯ
ಎಂದೂ ಮರೆಯದ ಶ್ರೇಷ್ಠ ಧ್ಯೇಯ
ಸ್ವಾತಂತ್ರ್ಯದ ಆ ಚಳವಳಿಯಲ್ಲಿ
ಭಾಗವಹಿಸಿದವರು ನಿರಂತರ ಸಕ್ರಿಯ
ಪತಿ ಜೊತೆ ಉಪ್ಪಿನ ಸತ್ಯಾಗ್ರಹ
ಮೂಲೆ ಗುಂಪಾಗದೆ ಮುನ್ನುಗ್ಗುತ
ಯುದ್ದ ನಿರಾಶ್ರಿತರ ಪುನರ್ವಸತಿಗೆ
ಶ್ರಮಿಸಿದ ದಿಟ್ಟೆ ಹೆಮ್ಮೆಯು ನಮಗೆ
ಕರಕುಶಲ ಕರ್ಮಿಗಳ ಸಹಾಯಕೆ ನಿಂತು
ಸಂಘ ಸಂಸ್ಥೆಗಳ ಹುಟ್ಟು ಹಾಕಿದರಂದು
ಸಂಗೀತ ನಾಟಕ ಅಕಾಡೆಮಿಗಳ ತೆರೆದು
ಅಧ್ಯಕ್ಷರಾದ ಹೆಗ್ಗಳಿಕೆ ಪಡೆದಿದ್ದರು ಅಂದು
ಕನ್ನಡದ ಮೊದಲ ಚಲನ ಚಿತ್ರ ನಾಯಕಿ
ಮೃಚ್ಛಕಟಿಕ ಈ...
ಕವನ
ಹೈಕು
ಪತ್ರ ಹರಿತ್ತು
ಸೊಗಸಾದ ಸಂಪತ್ತು
ಹಚ್ಚ ಹಸಿರು*
ಬೇವಿನ ಮರ
ಬಿಸಿಲಿನ ಪ್ರತಾಪ
ಬಿಡಾರ ತಂಪು*
ಕವಿ ಸಮಯ
ಪದಗಳ ಲಾಲಿತ್ಶ
ಹೃದ್ಶಾನವನ*
ಮರ ಹೆಮ್ಮರ
ಕೊಡಲಿಯಿಂದ ಪೆಟ್ಟು
ನಿರ್ಜೀವ ನೋಟ*
ಬೆಳ್ಳಕ್ಕಿ ಸಾಲು
ಸಾರೋಟು ಅಂದ ಚಂದ
ಹೊಟ್ಟೆ ತುಂಬಲು*
ನಮ್ಮದೇ ಬಿಂಬ
ಕನ್ನಡಿ ಪ್ರತಿಬಿಂಬ
ಸತ್ಶ ದರ್ಶನ*
ಆಸೆ ನೂರೆಂಟು
ಮಟಮಟ ಮಧ್ಮಾನ್ಹ
ಬಿಸುಲ್ಗುದುರೆ*
ಜೇನಿನ ಹನಿ
ಹೂವಿನ ಮಕರಂದ
ಭೃಂಗ ಜೇಂಕಾರ*
ಶಿವಶಂಕರ
ಹಿಮಾಲಯˌ ಶಿಖರ
ಓಂಕಾರ ನಾದ*
ಕೈಲಾಸನಾಥ
ಜಡೆ ಶಂಕರಲಿಂಗ
ಗಂಗೆ ಉದ್ಭವ*
ತೋಂ ತೋಂ ತನನ
ನಾಕುತಂತಿಯ ಲೀಲೆ
ಜ್ಞಾನದೆತ್ತರಅಮರ್ಜಾ
ಅಮರೇಗೌಡ ಪಾಟೀಲ
ಬುತಿ ಬಸವೇಶ್ವರ ನಗರ, ಕುಷ್ಟಗಿ
ಕವನ
ಕಾಲ ಚಕ್ರದ ಸುಳಿಯಲ್ಲಿ
ಬದುಕಿನ ಬವಣೆಯಲ್ಲಿ
ಹೊತ್ತು ಮುಳಗಿ
ಹೊತ್ತು ಅರಳಿದೆ
ಕಾಲ ಚಕ್ರದ ಸುಳಿಯಲ್ಲಿ ….
ಮತದಾರನ ಮನೆಯ ಮುಂದೆ
ಓಟಿಗಾಗಿ ನಡೆಯುತ್ತಿದೆ
ರಾಜಕೀಯ ದೊಂಬರಾಟ
ಕಾಲ ಚಕ್ರದ ಸುಳಿಯಲ್ಲಿ ….
ತುತ್ತು ಅನ್ನ ಸಂಪಾದನೆಗೆ
ಹೋರಾಟ ಪ್ರತಿ ನಿತ್ಯ
ಜೀವನದ ಯಾನದಲ್ಲಿ
ಕಾಲ ಚಕ್ರದ ಸುಳಿಯಲ್ಲಿ ….
ಶರವೇಗದಲ್ಲಿ ಹರಿಯುತ್ತಿದೆ
ಪ್ರಜಾಪ್ರಭುತ್ವದಲ್ಲಿ
ಸುಳ್ಳಿನ ಭರವಸೆಯ ಕಂತೆ ಕಂತೆ
ಕಾಲ ಚಕ್ರದ ಸುಳಿಯಲ್ಲಿತೀರ್ಥಹಳ್ಳಿ ಅನಂತ ಕಲ್ಲಾಪೂರ
ಕವನ
ಗಜಲ್
ಏಕಾಂಗಿ ಬೆಂಕಿಯಲಿ ಈ ಬದುಕು
ಬೇಯುತ್ತಿದೆ ಈಗ ನೀನಿರಬೇಕಿತ್ತು
ನಡೆವ ಹೆಜ್ಜೆ ಹೊಸ್ತಿಲಲಿ ನಿಂತು
ಕಾಯುತ್ತಿದೆ ಈಗ ನೀನಿರಬೇಕಿತ್ತು
ಮಗ್ಗುಲು ಬದಲಾಯಿಸುತ್ತ ನಿದ್ದೆ ಇಲ್ಲದ
ಅದೆಷ್ಟೋ ರಜನಿ ಕಳೆದವು
ಹರಿದ ಕಂಬನಿಯಲಿ ದಿಂಬು
ತೋಯುತ್ತಿದೆ ಈಗ ನೀನಿರಬೇಕಿತ್ತು
ಶಿಶಿರದ ಬೋಳು ಮರಕೆ ಗತದ ಚಿಗುರ
ನೆನಕೆಗಳು ಸಹಜವೇ ಸಾಕಿ
ಗೂಡಿನ ಹುಳು ತನ್ನ ಸುತ್ತ ಎಳೆಯ
ನೇಯುತ್ತಿದೆ ಈಗ ನೀನಿರಬೇಕಿತ್ತು
.
ಸ್ವಚ್ಛ ಆಗಸದಲಿ ನಿತ್ಯ ತಾರೆಗಳ ಎಣಿಸುತ
ಸೋಲನು ಒಪ್ಪಿದೆ ದೊರೆಯೆ
ಇರುವ ಭ್ರಮಿಸಿ...
ಕವನ
ಶಾಲೆಗೆ ಬನ್ನಿರಿ ಮಕ್ಕಳೆ
ಚಿಣ್ಣರ ಲೋಕದ ಬಣ್ಣದ ಮಕ್ಕಳೆ
ಶಾಲೆಗೆ ನೀವು ಬನ್ನಿರಿ
ಭಯವನು ಬಿಟ್ಟು, ದೈರ್ಯವ ತೊಟ್ಟು
ಶಾಲೆಗೆ ನೀವು ಬನ್ನಿರಿ ||2||
ಹೂಗಳೇ ಇಲ್ಲದ ತೋಟದ ಹಾಗೆ
ಬಣ ಬಣ ಎಂದಿತು ಈ ಶಾಲೆ
ನಮ್ಮಯ ಶಾಲೆಯ ಹೂಗಳು ನೀವು
ನಿಮ್ಮಿಂದ ನಲಿಯಿತು ಈ ಶಾಲೆ ||1||
ಪಾಠವ ಓದುತ, ಆಟವ ಆಡುತ
ಕಲಿಯುತ ಕುಣಿ ಕುಣಿದಾಡೋಣ
ಶಬ್ದವ ಬರೆಯುತ, ಲೆಕ್ಕವ ಬಿಡಿಸುತ
ಹಿಗ್ಗುತ ಶಾಲೆಗೆ ಬನ್ನಿರಿ ||1||
ಗುರುಗಳು...
ಕವನ
ಕಿತ್ತೂರಿನ ಕಲಿಯಿವಳು
ಕಿತ್ತೂರಿನ ಕಲಿಯಿವಳು ಕತ್ತಿಯನು ಹಿಡಿದವಳು
ಸುತ್ತೇಳು ನಾಡಿನೊಳು ಹೆಸರಾದವಳು
ಉತ್ತುವರು ನಾವುಗಳು ಬಿತ್ತುವರು ನಾವಿರಲು
ಮತ್ತೇತಕೆ ಕಪ್ಪವದು ಎಂದವಳು//ಪ
ಮಲ್ಲಸರ್ಜನ ಮಡದಿ ಬಿಲ್ವಿದ್ಯೆ ಕಲಿತವಳು
ಭಲ್ಲೆಯಲಿ ಗುರಿಯಿಟ್ಟು ಹೊಡೆದವಳು
ಕ್ಷುಲ್ಲತನದಾಂಗ್ಲರ ಸೊಲ್ಲನಡಗಿಸಿದಂತ
ಬಲ್ಲಿದನು ರಾಯಣ್ಣನ ರಾಜಮಾತೆ//1
ಮಕ್ಕಳನು ಹೊಂದಿರದೆ ಕಕ್ಕುಲತೆ ಹೊಂದುತಲಿ
ತಕ್ಕಮಗು ದತ್ತಕ್ಕೆ ಪಡೆದಂತವಳು
ಹಕ್ಕದುವೆ ಇಲ್ಲವೆನೊ ದತ್ತುಮಕ್ಕಳಿಗೆಂಬ
ಸೊಕ್ಕಿನ ಥ್ಯಾಕರೆಯನೆದುರಿಸಿದಳು//2ಕನ್ನಡದ ನಾಡಿನೊಳು ಕುನ್ನಿಗಳು ಆಂಗ್ಲರಿಗೆ
ಮನ್ನಣೆಯ ಕೊಡದಿರುತ ಪ್ರತಿಭಟಿಸಿ
ತನ್ನತನ ಮರೆಯದೆ ಕನ್ನಡದ ನೆಲಕಾಗಿ
ಚೆನ್ನಮ್ಮ ಪ್ರಾಣವ ತೆತ್ತಿಹಳು//3
ವೀರರಾಣಿ ಕಿತ್ತೂರು...
ಕವನ
ಚರಗ ಚೆಲ್ಲಾಕ
ಬನ್ನಿ ಗೆಳತಿಯರೇ
ಚಕ್ಕಡಿ ಹೂಡಿಕೊಂಡು
ಬುತ್ತಿ ಕಟ್ಟಿಕೊಂಡು
ಸಂತಸದಿ ತೂಗಾಡುವ
ಭೂತಾಯಿ ಉಣಿಸಾಕ
ಸೀಗೆ ಹುಣ್ಣಿಮೆ ಮಾಡಾಕ
ಹೋಗುನು ಬರ್ರಿ ಹೊಲಕ
ಚರಗ ಚೆಲ್ಲಾಕ.
ಹಸಿರು ಬಳೆ ಇಟ್ಟುಕೊಂಡು
ಹಸಿರು ಸೀರೆ ಉಟ್ಟುಕೊಂಡು
ನತ್ತು ಬೋರಮಾಳ ಹಾಕಿಕೊಂಡು
ಮಲ್ಲಿಗೆದಂಡೆ ಮುಡಿದುಕೊಂಡು
ಭೂತಾಯಿಗೆ ಉಡಿ ತುಂಬಾಕ
ಹೋಗುನು ಬರ್ರಿ ಹೊಲಕ
ಚರಗ ಚೆಲ್ಲಾಕ.
ಎಳ್ಳು ಹಚ್ಚಿದ ಕಡಕ್ ರೊಟ್ಟಿ
ಶೇಂಗಾ ಚಟ್ನಿ ಗುರೆಳ್ಳು ಚಟ್ನಿ
ಬದನೆಕಾಯಿ ಎಣಗಾಯಿ
ಡೊಣ್ಣ ಮೆಣಸಿನಕಾಯಿ
ಹೆಸರು ಕಾಳು ಮಡಕಿ ಕಾಳು
ಪುಂಡಿಪಲ್ಲೆ ಜುನುಕದ ವಡೆ
ಎಳ್ಳು ಹೋಳಿಗೆ ಗಟ್ಟಿ...
ಕವನ
ಓಗೊಟ್ಟು ಬರುವಳು ಶಾಂಭವಿ
ಮೈಸೂರ ಸಿಲ್ಕ್ ಸೀರೆ ಉಟ್ಟು/
ಮೈಸೂರ ಪಾಕ್ ಬಾಯಲ್ಲಿಟ್ಟು/
ಹೋಗೋಣ ಗೆಳತಿ ಸರ-ಸರನೆ/
ಜಂಬೂಸವಾರಿ ಸಡಗರವ ನೋಡುದಕ/
ನಾಡ ಹಬ್ಬ ದಸರಾ ಚಂದ/
ಮೈಸೂರ ಅರಮನೆ ಏನ ಚಂದ/
ಆನೆಯ ಅಂಬಾರಿ ಮ್ಯಾಲೆ ದೇವಿಯು/
ಚಾಮುಂಡಿ ತಾಯಿಯು ಕುಳಿತಿಹಳು/
ಒಂಬತ್ತು ದಿವಸ ನಾವು ಮುತೈದೆಯರು ಎಲ್ಲರೂ/
ಬನ್ನಿಗಿಡವ ಪೂಜೆ ಮಾಡಿ ಉಡಿಯ ತುಂಬೋಣ/
ಆದಿಶಕ್ತಿಯಲ್ಲಿ ನಾವು ವರವನು ಕೇಳೋಣ/
ಘಟ್ಟ ಹಾಕಿ,ದೀಪಾ ಹಚ್ಚಿ ಉಪವಾಸ ಮಾಡೋಣ/ಆಯುಧ ಪೂಜೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



