ಕವನ
ಕವನ : ಏನ ಥಂಡ್ಯೋ ಮಾರಾಯಾ ಹುಬ್ಬಳ್ಳ್ಯಾಗ..!!
ಏನ ಥಂಡ್ಯೋ ಮಾರಾಯಾ ಹುಬ್ಬಳ್ಳ್ಯಾಗ..!!ಈ ಬೆಳಗಿನ ಥಂಡ್ಯಾಗ
ವರ್ರಂತ ಬೀಸೂ ತಂಪ ಗಾಳ್ಯಾಗ
ನನಗ ನಮ್ಮಾಕಿ ನೆನಪಿಗಿ ಬರ್ತಾಳ..!
ಜೊತಿಗಿದ್ದಿದ್ರ ಆಕಿ..
ಒಂದಿಷ್ಟು ಚಾ-ಚೂಡಾ
ಹಿಡ್ಕೊಂಡು ಬಂದ,
ಕುಡಿರಿ ತಿನ್ರಿ ಅನ್ನೋ ಕಾಟಕ್ಕ ಅವನಪ್ಪನ;
ಎಂಥಾ ಥಂಡಿದ್ರೂ ಸರ್ರಂತ, ಸರೀತಿತ್ತು.!ಈ ಬೆಳಗಿನ ಥಂಡ್ಯಾಗ
ವರ್ರಂತ ಬೀಸೂ ತಂಪ ಗಾಳ್ಯಾಗ...
ನನಗ ನಮ್ಮ 'ಆಯಿ' ನೆನಪಿಗೆ ಬರ್ತಾಳ..!
ಬತ್ತಿಗಿಟ್ಟ ಹತ್ತಿ ಹಿಂಜಿ..
ಕಿವಿಗಿಟ್ಟು ಕೊಚ್ಚಿಗಿ ಬಿಗಿದು
ಹೊರಗ ಹೋಗಬ್ಯಾಡ ನೋಡ
ಅನ್ನೋ ತಾಕೀತು ಕೇಳಿ....
ಥಂಡಿ...
ಕವನ
ಪ್ರೀತಿಗಾಗಿ ನಾನು
ಪ್ರೀತಿ ಹಂಚುತ್ತೇನೆ, ಹಂಚಿಕೊಳ್ಳುತ್ತೇನೆ ಆತ್ಮ ಸಾಕ್ಷಿಯಾಗಿ ಎಲ್ಲರನ್ನು ಪ್ರೀತಿಸುತ್ತೇನೆ !ಜಾತಿ ಜಾತಿಗಳನ್ನು ಒಗ್ಗೂಡಿಸುತ್ತೇನೆ ಧರ್ಮ ಧರ್ಮಗಳನ್ನು ಬೆಸೆಯುತ್ತೇನೆ !ಜಾತ್ಯತೀತವಾಗಿ...
ಕವನ
ನನ್ನೊಲವಿನ ಜಾಣೆಇದ್ದಾರೆ ಅದೆಷ್ಟೋ ಜನರು
ನನ್ನ ನಿನ್ನ ಸುತ್ತ ಮುತ್ತ
ಭಾವಗಳ ಅರಿಯದವರು
ಶಬ್ದಗಳ ಮೆರವಣಿಗೆ
ಮಾಡುವವರು
ಪದ ಅಕ್ಷರಗಳ ಜೋಡಿಸಿ
ಕವನ ಕಾವ್ಯ ಹೊಸೆಯುವವರು
ವೇದಿಕೆಯಲ್ಲಿ ಹಾರ ತುರಾಯಿ
ಸತ್ಕಾರ ಸಮ್ಮಾನ
ಮಾಡಿ ಕೊಳ್ಳುವವರು
ಪತ್ರಿಕೆ ಟಿವಿ ಮಾಧ್ಯಮದಲ್ಲಿ
ಬಿಟ್ಟಿ ಪ್ರಚಾರ
ಮಾಡಿಕೊಂಡವರು ನೂರು
ನಿನ್ನಂತೆ ಅಂತರಂಗದಲ್ಲಿ
ದೀಪ ಹಚ್ಚಿ
ಮನಸ್ಸು ಹಸನು
ಮಾಡಿದವರನು
ನಿನ್ನ ಬಿಟ್ಟು
ನಾನೊಬ್ಬರನ್ನು ಕಾಣೆ
ನೀನು ಹೃದಯದ ಒಡತಿ
ನನ್ನೊಲವಿನ ಜಾಣೆ
_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕವನ
ಇದೂ ಒಂದು ಭ್ರಷ್ಟ ಸರಕಾರಇದು ಭ್ರಷ್ಟ ಸರಕಾರ
ಹೌದು, ಇದೂ ಒಂದು
ಭ್ರಷ್ಟ ಸರಕಾರ
ಸಿ ಎಂ.ಕುರ್ಚಿಗೆ ನಿತ್ಯ
ಕದನ ಕಾದಾಟ
ಭೋವಿ ವಾಲ್ಮೀಕಿ ನಿಗಮಗಳ
ಖಾಲಿ ಮಾಡಿ ಮಾರಾಟ
ಕನ್ನಡ ಕೊಲ್ಲುವ ಕೆಲಸ
ನಿತ್ಯ ರಾಜ್ಯೋತ್ಸವದ ಕೂಗಾಟ
ಸಂಗೊಳ್ಳಿ ರಾಯಣ್ಣನ ಸಂಸ್ಥೆಯ
ಗ್ರಾಹಕರ ಠೇವಣಿಗೆ ಪರದಾಟ
ಬರೀ ಹುಸಿ ಭರವಸೆ
ಪಾಪ ಮುಖ್ಯಮಂತ್ರಿಗಳು
ಬಸವ ಜಯಂತಿ ದಿನ
ಪ್ರಮಾಣವಚನ ಪಡೆದಿದ್ದಾರೆ
ಬಸ್, ಕರೆಂಟ್ ಫ್ರೀ
ತೆರಿಗೆ ಮುಗಿಲು ಮುಟ್ಟಿದೆ
ಬೆಲೆ ಏರಿಕೆ ನಿಲ್ಲಲೊಲ್ಲದು
ಮಂತ್ರಿಗಳ ಪ್ರವಾಸ ಭತ್ಯೆ
ಸಾಹಿತ್ಯ ಪರಿಷತ್...
ಕವನ
ಅರ್ಥವಾಗಲಿಲ್ಲವೇನು ?
ಅವತ್ತು ಇದೇ ಹಾದಿಯಲ್ಲಿ
ಪುರುಷ ಕಣ್ಣಿನ ನೇತ್ರ ಚೆಲುವೆ
ನಿಟ್ಟಿಸಿರು ಬಿಟ್ಟು ಹಂಬಲಿಸಿದ್ದು
ಸೆರಗೊಡ್ಡಿ ಬೇಡಿದ್ದು
ಕಣ್ಣಿಗೆ ಕಾಣಲಿಲ್ಲವೇನು ?ಅಳುವ ಮೋರೆಯೊಳಗೆ ಅವಳ ಕನಸ್ಸು
ಸೋತು ಕಣ್ಣು ರೆಪ್ಪೆಯೊಳಗೆ
ಹುಡುಕಿ ನಲಿಯುವ ಸೊಗಸು
ಕಾಣದ ಕೈಗಳು
ಚಿವುಟಿ ಒಗೆದಿದ್ದವು
ಕರುಣೆ ಬರಲಿಲ್ಲವೇನು ?ಜಾನಕಿಯ ಒಲವು ರಾಮನ ಗೆಲುವು
ಹೊಟ್ಟೆಯೊಳಗೆ ಕಂದಮ್ಮಗಳು
ಕಾನನದ ಪಯಣದಲಿ ಒಂಟಿ
ಕರ್ಕಶ ಶಬ್ದ ಪ್ರಾಣಿ ಪಕ್ಷಿಗಳಂತೆ
ಬಿಟ್ಟು ಹೊರಟು ಹೋದ ಸೌಮಿತ್ರಿ
ದುಃಖ ಬರಲಿಲ್ಲವೇನು ?ಪೌರುಷ ಮೃದು ಹೃದಯಿದುಷ್ಯಂತ
ಬರೀ...
ಕವನ
ಹೆಸರಾಗಲಿ ಲಿಂಗಾಯತ
ಹೆಸರಾಗಲಿ ಲಿಂಗಾಯತ
ಉಸಿರಾಗಲಿ ಬಸವಣ್ಣ
ಗುರು ಲಿಂಗ ಜಂಗಮ
ಹುಸಿ ಹೋಗದ ಸಂಗಮನಿತ್ಯದಲಿ ಕಾಯಕವು
ನಿರಂತರ ದಾಸೋಹ
ಬಸವಾಕ್ಷರವೇ ಮಹಾಮಂತ್ರ
ಶ್ರಮ ಸಂಸ್ಕೃತಿ ಪೂಜೆಯುಚೆನ್ನ ಕಕ್ಕ ಮಾಚ ಹರಳ
ನೀಲ ಗಂಗಾ ಅಕ್ಕ ನಾಗಮ್ಮ
ಹಾಸಿ ದುಡಿದರು ಜಗದ ಏಳಿಗೆ
ಹಂಚಿ ತಿಂದರು ಬಾಳಿಗೆವಚನ ಹಿಡಿದು ಗೆದ್ದರು
ಸತ್ಯ ಸಮತೆ ಪ್ರೀತಿಯು
ಸಮರತಿ ಸಮಕಳೆ ಜೀವ
ಅರಿವು ಪ್ರಸಾದ ನಾಳಿಗೆಕಟ್ಟ ಬೇಕು ಕಲ್ಯಾಣ
ವಿಶ್ವ ಪಥದ ಮನುಕುಲ
ಅಲ್ಲಮಾದಿ ಶರಣರಿಗೆ
ಎತ್ತ ಬೇಕು ಆರುತಿಡಾ.ಶಶಿಕಾಂತ...
ಕವನ
ಮೃದು ಹೃದಯಿಹೆಗಲ ಮೇಲೆ ಹೊತ್ತು ಮುಗಿಲು ತೋರುತ ಹಾಲು ತುಪ್ಪ ಉಣಿಸಿ ಅಪ್ಪನಾದ ಅವನು ಮೃದುಹೃದಯಿ
ಮಗುವಿನೊಡನೆ ಮಗುವಾಗಿ ಕುಣಿದು ಕುಪ್ಪಳಿಸಿ ಅಜ್ಜನಾದ ಅವನು ಮೃದುಹೃದಯಿಎಳೆಯನಾಗಿ ನಗೆಯ ಚೆಲುವ ಚಿತ್ತಾರ ಬಿಡಿಸಿ ಕವನ ಬರೆದು ಗೆಳೆಯನಾದ ಅವನು ಮೃದುಹೃದಯಿ
ಅರಿವು ಮೂಡಿಸಿ ಅಂಧಕಾರ ಓಡಿಸಿ ಜ್ಞಾನಜ್ಯೋತಿ ಮುಡಿಸಿ ಗುರುವಾದ ಅವನು ಮೃದುಹೃದಯಿಬಾಲ್ಯಬಾನಿಗೆ ಬಣ್ಣಬಳಿದು ಕುಣಿಸಿ ಕಿಡಿಗೇಡಿ ತಮ್ಮನಾದ...
ಕವನ
ಮಸಣದ ಗೋಡೆಮಸಣದ ಗೋಡೆಯ
ಮೇಲೆ ಹೀಗೆ ಬರೆದಿತ್ತು
ಎಲೆ ಮನುಜ
ಕೊನೆಗೆ ನೀನಿಲ್ಲಿಗೆ ಬರಬೇಕು
ಹೊರಗೆ ನೀನೆಲ್ಲವ ಮಾಡಿದೆ
ಬದುಕಿಗೆ ನಿರಂತರ
ಹೋರಾಟ ಸಂಘರ್ಷ
ಜೀವನವಿಡಿ ನಿಲ್ಲಲಿಲ್ಲ
ನಿನ್ನ ಕಸರತ್ತು
ಅಂದು ನಿನ್ನ ಮೆರೆಸಿದ
ನಿನ್ನವರೇ ನಿನ್ನ ಆಪ್ತರು
ನಿನ್ನ ಸುಟ್ಟು ಬಿಟ್ಟರು
ಹರವಿಕೊಂಡಿದ್ದ ಕನಸುಗಳ
ಮಣ್ಣು ಮಾಡಿದರು
ಮನೆಯಾಚೆ ಜಗುಲಿಯಲ್ಲೀಗ
ನಿನ್ನ ಶವಕ್ಕೆ ಅಲಂಕಾರ
ಭವ್ಯ ಮೆರವಣಿಗೆ
ಘೋಷಣೆ ಸಿಡಿ ಮದ್ದು
ಮಸಣದ ಗೋಡೆ ಮತ್ತೆ
ನಿನ್ನ ಸ್ವಾಗತಿಸಿತು
ಎಲೆ ಮನುಜ
ಕೊನೆಗೆ ನೀನಿಲ್ಲಿಗೆ ಬರಬೇಕು
ಬಂದು ಬಿಡು
ಬೆಂದು ಬಳಲಿದ ಜೀವ
ದಣಿವು ಹರಿಯಲಿ
ಶಾಂತಿ ನೆಮ್ಮದಿಯ
ಚಿರ...
ಕವನ
ಕವನ : ಮರಗಳಾ ಮಹಾತಾಯಿಗೊಂದು ನುಡಿ ನಮನ
ಮರಗಳಾ ಮಹಾತಾಯಿಗೊಂದು ನುಡಿ ನಮನಹಸಿರನ್ನೇ ಉಸಿರಾಗಿಸಿ, ಉಸಿರು ಬಿಟ್ಟ
ಕಾಯಕಯೋಗಿಣಿ ಮಹಾನ್ ಸಾಧಕಿ,
ನಿಸ್ವಾರ್ಥ ಸೇವೆಗೈದು ಅಮರತ್ವಕ್ಕೇರಿದಾ ಮಾತೆ
ಪದ್ಮಶ್ರೀ ಪಡೆದ ತಿಮ್ಮಕ್ಕನಿಗೆನ್ನ ನುಡಿ ನಮನಗಿಡಮರಗಳನು ಕಂದಮ್ಮಗಳಂತೆ ಸಾಕಿ
ಬೆಳೆಸಿದಾ ಕರುಣಾಮಯಿ ವೃಕ್ಷ ಮಾತೆ
ನಿಷ್ಕಲ್ಮಶ ಬದುಕಿನ ಶತಾಯುಷಿ ಸರಳ ಮಾತೆ
ಸಾಲು ಮರದ ತಿಮ್ಮಕ್ಕನಿಗೆನ್ನ ನುಡಿ ನಮನಬಡತನದಾ ಬೇಗೆಯಲಿ ಮಿಂದರೂ
ಇಳೆಯ ಮೇಲೊಂದು ಸಾರ್ಥಕ ಬೆಳೆ
ಬೆಳೆದು ವಿಶ್ವಮಟ್ಟದಾಮೇರು ಮಾತೆ
ಎನಿಸಿದಾ ತಿಮ್ಮಕ್ಕನಿಗೆನ್ನ ನುಡಿ ನಮನಚೈತನ್ಯದಾ...
ಕವನ
ಉಸಿರಾದರು
ಮಕ್ಕಳಿಲ್ಲೆಂಬ ಕೂರಗಿನಿಂದ ನೊಂದರು
ಬೇಸತ್ತ ಗಂಡ ಹೆಂಡತಿ ಇಬ್ಬರು
ರಸ್ತೆಬದಿಯಲ್ಲಿ ಗುಂಡಿ ತೋಡಿದರು
ಗಿಡ ನೆಟ್ಟು ನೀರುಣಿಸಿದರುಗಿಡ ಬೆಳೆದು ಮರವಾಗುವುದ ಕಂಡರು
ಅವುಗಳನ್ನೇ ಮಕ್ಕಳೆಂದು ನಂಬಿದರು
ಸಂತೋಷದಿ ಕಾಯಕ ಮುಂದುವರಿಸಿದರು
ಎಂಟು ಸಾವಿರ ಮರಗಳ ಬೆಳೆಸಿದರುನಾಡಿಗೇ ಹಸಿರಿನಿಂದ ಉಸಿರಾದರು
ಸಾಲುಮರದ ತಿಮ್ಮಕ್ಕ ನೆಂದು ಬಿರುದು ಪಡೆದರು
ವೃಕ್ಷಮಾತೆ ಎಂದು ಹೆಸರಾದರು
ಸಾವಿರಾರು ಪ್ರಾಣಿ ಪಕ್ಷಿಗಳಿಗೆ ನೆಲೆ ನೀಡಿದರುಓದು ಬರಹ ಕಲಿತಿಲ್ಲ ಇವರು
ನಿರ್ಮಲ ಮನಸ್ಸುಳ್ಳವರು
ನಿಸ್ವಾರ್ಥ ಸೇವಾ ಭಾವನೆ ಉಳ್ಳವರು
ಯಾರಿಂದಲೂ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



