ಕವನ

ಕವನ ಹಣವೇ…ಏನು ನಿನ್ನ ಮಹಿಮೆ ???

ಹಣವೇ...ಏನು ನಿನ್ನ ಮಹಿಮೆ ??? ತಿಪ್ಪೆಯಿಂದ ಉಪ್ಪರಿಗೆಗೆ ಕೂರಿಸುತ್ತೀ, ಅರಮನೆಯಿಂದ ಗುಡಿಸಲಿಗೆ ನೂಕುಬಿಡುತ್ತೀ, ಸ್ವಾಭಿಮಾನ ಬಿಟ್ಟು ಭಿಕ್ಷೆ ಬೇಡಿಸುತ್ತೀ, ಕೊಲೆ-ಸುಲಿಗೆಗಳ ಮಾಡಿಸಿ ಸೆರೆಮನೆಗೆ ಕಳಿಸುತ್ತೀ, ಓ ಹಣವೇ ! ಏನು ನಿನ್ನ ಮಹಿಮೆ ?? ನೀ ಇದ್ದಲ್ಲಿ , ವಿದ್ಯೆ-ವಿನಯ ಇರುವುದೆಲ್ಲಿ ? ಅಹಂ-ಸ್ವಾರ್ಥ-ಗುಂಪುಗಾರಿಕೆಗೆ ಕಾರಣ ನೀನು ! ನಿಸ್ವಾರ್ಥವಾಗಿ ಬದುಕುವವನಿಗೆ ನೀ ಎಂದರೆ ಅಲರ್ಜಿ !! ನಿನ್ನ ಹಿಂದೆಓಡುವವರು ನಿನಗಾಗಿ ಮಾಡುತ್ತಾರೆ ಎಲ್ಲರಿಗೆ ಅಲರ್ಜಿ.... ದೇಶ ಯಾವುದಾದರೇನು...

ಕವನ: ವಿಶ್ವ ಮಾನವ

ವಿಶ್ವ ಮಾನವ ಸಮಾಜದ ಭವಿಷ್ಯ ನಿರೂಪಕ, ಭೂತಕಾಲದ ಅನುಭವಗಳ ಮೂಸೆಯಲಿ, ವರ್ತಮಾನದ ಆಗುಹೋಗುಗಳ ಹೊಸೆದು, ಭವಿಷ್ಯತ್ತಿಗೆ ಉತ್ತಮ ಹೊಂಗಿರಣ ನೀಡುವ ನಿರ್ದೇಶಕ, ನಮ್ಮೆಲ್ಲರ ಬಾಳಿನ ದಾರಿದೀಪ ಈ ಮಾದರಿ ಶಿಕ್ಷಕ... ಶಾಲೆಗೆ ಬರುವ ಎಲ್ಲ ಮಕ್ಕಳ ಜಾತಿ-ಮತ-ಧರ್ಮ-ಭಾಷೆಗಳ ಎಣಿಸದೇ, ತನ್ನ ಮಕ್ಕಳಂತೆ ನೋಡಿಕೊಳ್ಳುವ 'ವಿಶ್ವಮಾನವ' ಎಲ್ಲಾ ಮಕ್ಕಳಿಗೂ ಮಾದರಿ ಈ ನಮ್ಮ ಶಿಕ್ಷಕ... ಮುಗ್ಧ ಮಕ್ಕಳಿಗೆ ಅಕ್ಷರ-ಮಗ್ಗಿ-ಕಾಗುಣಿತ ಕಲಿಸಿ, ಅಶೋಕ-ಬುದ್ಧ-ಗಾಂಧಿ-ಅಂಬೇಡ್ಕರ್-ಕಲಾಂರಂತ ಸಾಧಕರ ಜೀವನ-ಸಾಧನೆ ಹಂತಹಂತವಾಗಿ ಬೋಧಿಸಿ, 'ನೀವೂ ಅವರಂತೆ ಬೆಳೆಯಿರಿ' ಎಂದು ಹಾರೈಸುವ ಶಿಕ್ಷಕನ...

ಮಮತೆಯ ಮೂರ್ತಿಯ ಕವಿತೆಗಳು

(ರೇಷ್ಮಾ ಕಂದಕೂರ, ಅನಸೂಯ ಜಾಗೀರದಾರ,ಮದ್ದಾನೆಪ್ಪಾ ಮನ್ನಾಪೂರ)ಅಮ್ಮ ಅಮ್ಮನೆಂಬ ಭಾವ ತೊರೆಯುವ ಒಳಗಿನ ನಿರ್ಭಾವ ಕರುಣೆಯ ಕಣ್ಣಬೆಳಕು ಧರಣಿ ಆಳುವವಗೆ ಶ್ರೀರಕ್ಷೆ. ತನ್ನದೆಲ್ಲವ ಕಡೆಗಣನೆ ತಲ್ಲಣಗಳ ಕಡಿವಾಣದ ಕೊಂಡಿ ಸಲ್ಲುವವನ ಶಕ್ತಿಯ ಧ್ಯೋತಕ ಬಲ್ಲವನೇ ಬಲ್ಲ ಮಮಕಾರದ ಸವಿಯ. ಅಪ್ಪುಗೆಯೇ ಆನಂದ ಸಪ್ಪಗಿನ ಮುಖಕೆ ಸಂತೋಷದ ಹನಿಸಿಂಚನ ತಪ್ಪುಗಳ ತಿದ್ದುವ ಗುರುವು ಅಂತರ್ ಸತ್ವಗಳ ಪ್ರಜ್ವಲ. ಸಮಾನತೆಯ ಮೂರ್ತಿ ಇಲ್ಲದ ಬಿಗುಮಾನ ಸವಿ ಸೊಲ್ಲಲಿ ಆದರಣೆ ವಾತ್ಸಲ್ಯದ ಗಂಧದ ಸಿಂಪಡಣೆ. ಚಿಗುರು ಕುಡಿಯ ಪ್ರವಹಿಸಿ ಒಗರಿಗು ಸಿಹಿಜೇನ ಸುಧೆ ಸುರಿಸಿ ತಾಳ್ಮೆಯ ಆಲಂಗಿಸಿ ಹತಾಶೆಗೂ...

ಕವನ: ತಾಯಿಯ ಮಡಿಲು

ತಾಯಿಯ ಮಡಿಲು ಅಮ್ಮ ನಿನ್ನ ಮಡಿಲು ಅಮೃತದ ಒಡಲು ಅಲ್ಲೇ ಕಂಡೆ ನಾ ಸುಖ ಶಾಂತಿಯ ಕಡಲು||ಪ|| ಹಗಲಿರುಳು ನನಗಾಗಿ ಚಿಂತಿಸಿದವಳು ಧೈರ್ಯದ ಪಾಠ ನನಗೆ ಹೇಳಿದವಳು ಮೋಸˌ ವಂಚನೆಗೆ ಸಿಡಿದೆದ್ದವಳು ಚಂದಾಂಗಿ ಬದಕಲು ಕಲಿಸಿದವಳು.||೧॥ ಎದೆಬಸಿದು ಅಮೃತ ಕುಡಿಸಿದವಳು ಕಷ್ಟ ˌಕಾರ್ಪಣ್ಶಕ್ಕೆ ಎದೆಗೊಟ್ಟವಳು ಶ್ರಮಪಟ್ಟು ನೀ ನನಗೆ ನೆರಳಾದವಳು ನೋವನ್ನು ನುಂಗಿ ನನಗೆ ನಗು ಕಲಿಸಿದವಳು॥೨॥ ಜೋಗುಳ ಪದ ಹಾಡಿ ಮಲಗಿಸಿದವಳು ಮಮತೆಯ ಮಡಿಲಲ್ಲಿ ಬೆಳೆಸಿದವಳು ದೇವರಿಗೆ ಹರಕೆ ಹೊತ್ತು ಹಲುಬಿದವಳು ಲೋಕಕ್ಕೆ...

ಕವನ: ಶಾಂತಿದೂತರು

ಶಾಂತಿದೂತರು ಬುಸುಗುಡುತ ಬೆಂಕಿಹಚ್ಚಿದರು ಭವ್ಯ ಭಾರತದ ಜ್ಞಾನ ಭಂಡಾರವ. ಮತಾಂತರಿಸಿದರು ಒಪ್ಪದವರಿಗೆ ಅಪ್ಪಿತಪ್ಪಿಯೂ ಬಿಡದೆ ಜೆಜಿಯಾ ಕಪ್ಪ ಖೂಳರು.‌. ಮತಾಂಧತೆ ಮೆರೆಯಿತು ಖಡ್ಗದ ಮೊನಚಿನಿಂದ ನೆತ್ತರು ಓಕುಳಿ ಹರಿಯಿತು. ಅಧರ್ಮದ ಮಿನಾರ್ ಗಳು ಮೇಲೆದ್ದವು ಶಾಂತಿ ಪಾರಿವಾಳ ಗೂಡುಗಳಿಗಾಗಿ, ದೇಶದ ಮಠ ಮಂದಿರಗಳು ನೆಲೆಸಮವಾದವು ! ಕಾಲಿಟ್ಟಂದಿನಂದಲೇ ಕಾಫಿರರಾದರು ದೇಶಿಯರು! ಕಾಪಿಟ್ಟ ಬರ್ಭರತೆಯು ತಾಂಡವವಾಡಿತು. ಉದ್ಘೋಷಿಸಿಲು ಮದವೇರಿದ ಮತಾಂಧತೆಯ ಮುಖವಾಡ ಕಳಚಿ ಬೀಳದಂತೆ ಅಂದು ಇಂದು ಎಂದಂದೂ ತಾವೇ ಶಾಂತಿದೂತರೆಂದು ! ಸಭ್ಶತೆಯ ಸೋಗಿನಲಿ ಶಾಂತಿಧೂತರಾಗಿ ನಲಿನಲಿದು ಕುಪ್ಪಳಿಸುತಿಹರು ದೇಶದ ಸಂವಿಧಾನ ಬದ್ಧ ಮರ್ಮಾಂಗಗಳಿಗೆಲ್ಲ ಒದ್ದು ! ಅವಗುಣಗಳನ್ನೇ...

ಕವನ: ಮುಂಜಾನೆಯ ಸೊಬಗು

ಮುಂಜಾನೆಯ ಸೊಬಗು ಬೆಳಿಗ್ಗೆ ಆದರೆ ಸಾಕು ಎಲ್ಲರ ಕಿವಿಗೆ ಬೀಳೋ ಶಬ್ದ ಅಂದ್ರ ಬರೀ ಕರೋನಾ ಕರೋನಾ ಯಾಕ ಇಂತಾ ಹೊತ್ತಿನಾಗರ ಸ್ವಲ್ಪ ಸೃಷ್ಟೀನ ಕಣ್ತೆರದು ನೋಡಬಾರದಂತೀನಿ ಸರಿ ಬಿಡಪಾ ಅಂತೇಳಿ ದಿವಸಾ ಏಳುವಂಗ ಎದ್ದು ಸ್ವಲ್ಪ ಯೋಗಾಸನ ಮಾಡೂನ ಅಂತಾ ಮಾಳಿಗೆ ಮ್ಯಾಲೆ ಹೋದೆ ಕಣ್ಣ ತೆಗೆದು ಸುಮ್ಮನೆ ಮುಗಿಲ ಕಡೆ ನೋಡತೀನಿ ಹೆಣ್ಣುಮಕ್ಕಳ ಹಣಿಮ್ಯಾಲಿನ ಕುಂಕುಮದಂಗ ಸೂರ್ಯ ಕಾಣತಿದ್ದ ಏನು ಬಣ್ಣ! ಇಡೀ ಪೂರ್ವ ದಿಕ್ಕ...

ಕವನ: ಓ ಆರಕ್ಷಕ…

ಓ ಆರಕ್ಷಕ... ಜನಸಮುದಾಯದ ರಕ್ಷಕ.. 'ಕಾನೂನು ಗೌರವಿಸುವವರನ್ನು ನಾನು ಗೌರವಿಸುತ್ತೇನೆ' ಎನ್ನುವ ಓ ಆರಕ್ಷಕ ನಿನ್ನ ಬದುಕೇ ಒಂದು ರೋಚಕ !! ನಮ್ಮೊಡನೆಯೇ ಜನಿಸಿ, ಶಿಕ್ಷಣ ಪಡೆದು,ಕೆಲಸ ಗಳಿಸಿ, ಕಾನೂನು ತರಬೇತಿ ಪಡೆದು, ಕಾನೂನು ಜಾರಿಗೊಳಿಸುವಾಗ, ನಿನಗೆಷ್ಟುಅಡ್ಡಿ,ಆತಂಕ,ಒತ್ತಡಗಳ ಸುಳಿ.... ನಾವೆಲ್ಲ ಮನೆಯಲಿ ನೆಮ್ಮದಿಯಲಿ ನಿದ್ರಿಸಿರುವಾಗ, ಕಳ್ಳರು,ವಂಚಕರಿಂದ ಸಮಾಜವನು ರಕ್ಷಿಸುವ ಮಹೋನ್ನತ ಜವಾಬ್ದಾರಿ ನಿನ್ನದು... ಮುಷ್ಕರ,ಬಂದ್,ಕೋಮುಗಲಭೆ,ಸಾಂಕ್ರಾಮಿಕ ಕಾಯಿಲೆ ಯಾವುದೇನೇ ಇರಲಿ, ಬೆಚ್ಚದೆ,ಬೆದರದೆ,ಮುನ್ನುಗ್ಗಿ, ಅಶಕ್ತರ ರಕ್ಷಿಸಿ,ಕಾನೂನು ಉಲ್ಲಂಘಿಸಿದವರ ಬಂಧಿಸುವ ಜವಾಬ್ದಾರಿ ಶ್ಲಾಘನೀಯ..... ಕಾನೂನು ವಿರೋಧಿಗಳ ಸಂಘರ್ಷದಲಿ ಹಲವೊಮ್ಮೆ ಪ್ರಾಣತ್ಯಾಗ ಮಾಡುವ ಪುಣ್ಯಾತ್ಮನು ನೀನು, ತಂದೆ-ತಾಯಿ,ಹೆಂಡತಿ-ಮಕ್ಕಳ ಬಂಧ ಮರೆತು, ಕಾನೂನೆಂಬ ಹೆದ್ದಾರಿಯಲಿ ಜೀವನವಿಡೀ ಕಳೆಯುವ...

ಕವನ: ತೇಜಸ್ಸು !!

ತೇಜಸ್ಸು !! ಮಾಡಿದ್ದು ಪ್ರಖರ ಮಹೋನ್ನತ ಕಾರ್ಯ ಹೋದ ಜೀವ ಬರುವದಿಲ್ಲ ಬಿಡಿ ಅದೆಷ್ಟೋ ಜೀವಗಳಿಗೆ ನೀನಾದೆ ತೇಜ. ಅಗೋ ಆ ಭಂಡರೋ ಮತಾವಲಂಬಿ ಠಕ್ಕರೋ ಆಗಲೇ ಅವರ ನಾಲಿಗೆಯೋ ಕೆನ್ನಾಲಿಗೆಯಾಗಿ ದೌಡಾಯಿಸುತ್ತಿವೆ ನಿನ್ನ ತೇಜಸ್ಸಿಗೆ ಲಂಡರ ಅಂಡಿಗೆ ಉರಿಯಾಗಿ. ಅಲ್ಲಿರುವವರೆಲ್ಲರ ದೋಸೆ ತೂತುಗಳೇ ಮಿಲಾಪಿ ಕುಸ್ತಿಯವರೇ ಪಗಡೆ ಆಟವೂ ಅಲ್ಲಡಗಿದೆ ! ಲಫಂಗ-ಡಕಾಯಿತ-ಅನಕ್ಷರಸ್ತ ಪಡೆಯೇ ಹರಿಯಾಯಲು ದೀಪದ ಬೆಳಕಿಗೆ ಕಾಡಿಗೆ ಕಾರಣ !! ನಿನ್ನ ದೇಶಾಭಿಮಾನ ಬೆಳಗಲಿ ನಿನ್ನ ಪ್ರದೇಶಾಭಿಮಾನ ಬೆಳಗಲಿ ನಿನ್ನ ಸ್ವಾಭಿಮಾನ ಬೆಳಗಲಿ ನಿನ್ನ ಸೇವೆ ಪ್ರಜ್ವಲಿಸಲಿ ಪುಂಡು-ಪೋಕರಿಗಳ ಮಧ್ಶ ತೇಜಸ್ವಿ...

ಡಾ. ಭೇರ್ಯ ರಾಮಕುಮಾರ್ ಕವನಗಳು

ಯಮರಾಜನಿಗೊಂದು ಮನವಿ ಓ ಯಮ ದೇವ, ಒಳ್ಳೆಯವರ ಮೇಲೇಕೆ ನಿನ್ನ ಕಣ್ಣು ? ಮಾನವ ಪ್ರಪಂಚಕ್ಕೆ ಒಳ್ಳೆಯತನ,ಒಳ್ಳೆಯ ಜನ ಅನುದಿನ ಬೇಕಾಗಿದೆ !! ದಯೆ ತೋರು ಮೃತ್ಯುದೇವ. ಸಮಾಜಕೆ ದಾರಿದೀಪವಾದ ಹಿರಿಯ ನಾಗರೀಕರು, ಸಾಹಿತ್ಯ, ಸಂಗೀತವನ್ನೇ ಉಸಿರಾಡುತ್ತಾ ಸಮಾಜಕ್ಕೆ ದಾರಿತೋರುತ್ತಿರುವ ಸಾಧಕರು, ದೀನದುರ್ಬಲರ ಅಭ್ಯುದಯಕೆ ದುಡಿಯುತ್ತಿರುವ ನಿಸ್ವಾರ್ಥ ಜೀವಿಗಳ ಮೇಲೇಕೆ ನಿನಗೆ ಕೆಂಗಣ್ಣು ??? ನಿನ್ನ ಹಿಂದೆ ಬಿದ್ದು,ರೋಧಿಸಿದ ಸಾವಿತ್ರಿಯ ಕಣ್ಣೀರಿಗೆ ಕರಗಿ ಪತಿ ಸತ್ಯವಾನನಿಗೆ ಜೀವದಾನ ಮಾಡಿದ ಮಹಾಪುರುಷ ನೀನು.... ನೂರಾರು ವೃದ್ಧರ,ಅಸಹಾಯಕರ, ಗೃಹಿಣಿಯರ ,ಅನಾಥಮಕ್ಕಳ ಕಣ್ಣೀರ ಕೋಡಿ ಹರಿದಿದೆ.. ನಿತ್ಯ......ನಿರಂತರ.... ಓ ಯಮರಾಜ, ಅನಾಥ ಮಕ್ಕಳ, ಮಹಿಳೆಯರ,ವೃದ್ಧರ, ಅಂಗವಿಕಲರ ಕಣ್ಣೀರಿನ ಕಥೆಯನ್ನೊಮ್ಮೆ ನೋಡು, ಓ ಲೋಕ ನಿರ್ಣಾಯಕನೆ ನಿನ್ನ ಕೆಲಸಕೆ ಸ್ವಲ್ಪ...

ಕರೋನಾ ಚುಟುಕು

ಕರೋನಾ ಚುಟುಕು ಏನ ಗಂಟಬಿದ್ದಿ ನಮ್ಮ ಬೆನ್ನ ಮಾನವ ಕುಲಕ್ಕಾದಿ ನೀ ಹುಣ್ಣ ಲೋಕಕ್ಕ ಗೊತ್ತಾಗೈತ್ತಿ ನಿನ್ನ ಬಣ್ಣ ನಿನ್ನ ಮಣ್ಣ ಮುಚ್ಚಿ ಉಂತಿವಿ ಗಿಣ್ಣಕರೋನಾ ಏನ ನಿನ್ನ ಅಲೆ ಜನಾ ಕಳಕೊಂಡಿದ್ದಾರೆ ನೆಲೆ ಏನು ನಿನ್ನ ಮಾಯದ ಬಲೆ ಯಾರಿಗೂ ತಿಳಿದಿಲ್ಲ ನಿನ್ನ ಕಲೆಚೀನಾ ದೇಶದ ಚಿನ್ನಾರಿ ಭಾರತದಲ್ಲಿ ಆಡಾಕತ್ತಿದಿ ಲಗೋರಿ ಜನಾ ನೋಡವಲ್ಲರ ನಿನ್ನ ಮಾರಿ ಆದ್ರೂ ಒಂದಿನ ಕಟ್ಟತ್ತಿವಿ ನಿನ್ನ ಗೋರಿಆಕಾಶದಲ್ಲಿ ಹಕ್ಕಿಗಳ ಸಾಲು ಭೂಮಿಯಲ್ಲಿ ಇರುವೆಗಳ ಸಾಲು ದವಾಖಾನೆಗಳ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group