ಕವನ

ನಾಲ್ಕು ಗಜಲ್ ಗಳು

ಬಾಯ್ಬಿರಿದ ಭುವಿಗೆ ಕಣ್ಣೀರು ಹನಿಸುವವರು ನಾವು ತೇವವನು ಕರ ತಾಕಿಸುತ ಖುಷಿ ಪಡುವವರು ನಾವು ಹಸಿರಿನ ಹಗಲು ಕನಸು ಕಂಡು ಕುಣಿಯುವವರು ನಾವು ಬಿಸಿಲಿಗೆ ಬೆವರು ಚೆಲ್ಲಿ ಬೇಗೆಯ ತಣಿಸುವವರು ನಾವು ಮೋಡಗಳ ಕೈಹಿಡಿದು ತಡೆಯ ಬಯಸುವವರು ನಾವು ಬೆಳೆದ ಬೆಳೆಗೆ ಚರಗ ಚೆಲ್ಲಿ ತುತ್ತು ತಿನ್ನಿಸುವವರು ನಾವು ಸಂತಸದ ಕಿರೀಟ ಹೊತ್ತ ಅರಸನ ಗತ್ತಿನವರು ನಾವು ಸ್ವಾಭಿಮಾನದಿ ಸೆಟೆದು ನಿಲ್ಲುವ ಸಾಹುಕಾರರು ನಾವು ಜಂತಿಯಲ್ಲಿದ್ದ...

ವೇಣು ಜಾಲಿಬೆಂಚಿ ಗಜಲ್ ಗಳು

ಅವರು ನೀರಿಗಾಗಿ ಇವರು ರಕ್ತಕ್ಕಾಗಿ ಬಡಿದಾಡಿದರು ರಕುತದ ಹೊಳೆ ನಿಲ್ಲಲಿಲ್ಲ ಅವರು ಬೆಂಕಿಗಾಗಿ ಇವರು ಬದುಕಿಗಾಗಿ ಹೋರಾಡಿದರು ರಕುತದ ಹೊಳೆ ನಿಲ್ಲಲಿಲ್ಲ ಅವರು ವಿಶ್ವಾಸಕ್ಕಾಗಿ ಇವರು ಅಭಿಮಾನಕ್ಕಾಗಿ ಕೂಗಾಡಿದರು ರಕುತದ ಹೊಳೆ ನಿಲ್ಲಲಿಲ್ಲ ಅವರು ಅನ್ಯಾಯಕ್ಕಾಗಿ ಇವರು ಶೋಷಣೆಗಾಗಿ ಟೊಂಕ ಕಟ್ಟಿದರು ರಕುತದ ಹೊಳೆ ನಿಲ್ಲಲಿಲ್ಲ ಅವರು ಸಾಂತ್ವನಕ್ಕಾಗಿ ಇವರು ಸಾಮರಸ್ಯಕ್ಕಾಗಿ ಕೈಜೋಡಿಸಿದರು ರಕುತದ ಹೊಳೆ ನಿಲ್ಲಲಿಲ್ಲ ಅವರು ಮಾನಕ್ಕಾಗಿ ಇವರು...

ಕವನ: ಓ ರೈತಾ…ಸಿಡಿದೇಳು..ಪುಟಿದೇಳು

ಓ ರೈತಾ...ಸಿಡಿದೇಳು..ಪುಟಿದೇಳು ಓ ರೈತಾ..ಕುಣಿಯ ತೋಡುವ ಆಸೆ ಬಿಡು, ನಿನ್ನ ಶೋಷಣೆಯ ಪ್ರತಿಭಟಿಸಿ ಸಿಡಿದೇಳು,ಪುಟಿದೇಳು, ಜಗದ ಜನಕೆಲ್ಲಾ ಅನ್ನದಾತ, ನಿನ್ನ ಕುಣಿಯ ನೀನೇ ತೋಡುವ ಕ್ರೂರ ದುರ್ಗತಿ ನಿನಗೇಕೆ ಬಂತು ? ಜನಿಸಿದಂದಿನಿಂದ ಕೊನೆಯುಸಿರುವವರೆಗೂ ಕಾಡುತಿಹ ಕಷ್ಟಗಳ ಸರಮಾಲೆಯ ಸಹಿಸದಾದೆಯಾ ??? ಜಗವೆಲ್ಲಾ ಹಣ,ಆಸ್ತಿ, ಅಂತಸ್ತುಗಳ ಹಿಂದೆ ಗಿರಕಿ ಹೊಡೆಯುತ್ಅ ಕುಣಿಯುತ್ತಿರುವಾಗ, ಜಮೀನಿನ ಬಳಿ ಏಕಾಂಗಿ ವೀರನಾದ ನಿನಗೆ, ಉಳುಮೆ ಮಾಡಿ,ಬೆಳೆ ಬೆಳೆವುದೇ ನಿನ್ನ ಕಾಯಕ, ಬಸವನ ಕಾಯಕ ತತ್ವ ನಿನ್ನ...

ಗಜ಼ಲ್ ಗಳು

ಕಿತ್ತಾಡಿಕೊಂಡರೋ ಕಿತ್ತಿ ಹಿಡಿದುಕೊಂಡರೋ ಗೊತ್ತಾಗಲಿಲ್ಲ ನನಗೆ ಪ್ರತಿಪಾದಿಸಿದರೋ ಆಪಾದಿಸಿದರೋ ಗೊತ್ತಾಗಲಿಲ್ಲ ನನಗೆ ಮೈಕುಗಳು ಮೌನವಾಗಿವೆ ಮಂಕು ಮಾತು ಕೇಳಿ ಕರೆದರೋ ವದರಿದರೋ ಗೊತ್ತಾಗಲಿಲ್ಲ ನನಗೆ ಇತಿಹಾಸದ ಪುಟಗಳ ಮೇಲೆ ಕೆಸರು ಸಾರಿಸುತಿಹರು ಮುದ್ದುಮುಖಗಳೋ ಮುಖವಾಡಗಳೋ ಗೊತ್ತಾಗಲಿಲ್ಲ ನನಗೆ ಘನತೆ ಗೌರವ ಮೂರು ಕಾಸಿಗೆ ಹರಾಜಾಗುತ್ತಿದೆ ರಕ್ಷಿಸುವರೋ ಭಕ್ಷಿಸುವರೋ ಗೊತ್ತಾಗುತ್ತಿಲ್ಲ ನನಗೆ ಸಂವಿಧಾನ ಒಂದೇ, ವಿಧಾನ ಬದಲಾಗುತ್ತಿದೆ 'ಅಮರ' ಪ್ರಧಾನವೋ ಪಾಪವೋ ಗೊತ್ತಾಗುತ್ತಿಲ್ಲ ನನಗೆ ✍️ ಅಮರೇಶ ಎಂಕೆಎದೆಯ ಅಗಾಧ...

ವಿಶ್ವ ಚೇತನ (ಶ್ರೀ ಸಿದ್ದಗಂಗಾ ಶ್ರೀ ಗಳು)

1 ಶ್ರೀ ಸಿದ್ದಗಂಗಾ ಕ್ಷೇತ್ರದಗುರು ಚರಣಕೆ ಶರಣು ಸಾವಿರದ ಶರಣು ಶಿವನ ರೂಪದಿ ಶಿವಣ್ಣನಾಗಿ ಧರೆಗವತರಿಸಿ ಬಂದ ಶರಣರಿಗೆ ಸಾವಿರದಶರಣು !!2 ಸಂಸಾರದ ಜಂಜಡದ ಬೇಲಿಯ ತೊರೆದು ಖಾವಿಬಟ್ಟೆಯ ನಿಜ ತೃಷೆಯ ಹಂಬಲಕೆ ವಾಲಿತು ನಿಮ್ಮ ಮನ ಮನದೊಳಗೆ ಮೂಡಿದವು ಕ್ರಾಂತಿಕಾರಕ ಬಸವತತ್ವದ ಆದರ್ಶ ಬೆಳಸಿದ ಶರಣರಿಗೆ ಸಾವಿರದ ಶರಣ. !!3 ನನಗೇನು ಬೇಡ ವಿಶ್ವಕೇನೆ ಬೇಕೆನ್ನುವ ಕಾಯಕ ನಿಷ್ಟೆಯ ಬೀಜಾಂಕುರದ ಬಾಳಬುತ್ತಿಯ ಧಾರೆಯೆರೆದರು ತನ್ನ ತಾ ಮರೆತು ಬಾಳಿ...

ಅನಸೂಯ ಜಾಗೀರದಾರ ಗಜಲ್ ಗಳು

ಇತ್ತೀಚಿನ ದಿನಗಳಲಿ ವಾದ ಮಾಡಲಾರೆ ಸುಮ್ಮನಿದ್ದುಬಿಡುತ್ತೆನೆ ಕಾಗೆ ಬಿಳಿಯೆಂದವರಿಗೆ ಸಾಕ್ಷ್ಯ ನೀಡಲಾರೆ ಸುಮ್ಮನಿದ್ದುಬಿಡುತ್ತೇನೆ ಅವರದೇ ಜಗತ್ತು ಕೂಪ ಮಂಡೂಕಗಳು ಎಲ್ಲೆಡೆಯೂ ತುಂಬಿರುವರು ಸುಖಾ ಸುಮ್ಮನೆ ತಣ್ಣೀರ ಎರಚಿ ಕೊಳ್ಳಲಾರೆ ಸುಮ್ಮನಿದ್ದುಬಿಡುತ್ತೇನೆ ಒಂದೇ ಸಮನೆ ರಂಪ ರಾದ್ಧಾಂತ ಪ್ರತಿ ವಿಷಯಕೂ ಕ್ಯಾತೆ ತೆಗೆಯುವರು ಹಾದಿಯ ಗರವ ಮನೆಗೆ ಎಳೆದು ತರಲಾರೆ ಸುಮ್ಮನಿದ್ದುಬಿಡುತ್ತೇನೆ ವಾದ ವಿವಾದವಾಗಿ ನ್ಯಾಯಕ್ಕೆಡೆಯಾಗಿ ಕಣ್ಣೀರು ಕೋಡಿ ಹರಿಯಬಹುದು ಶಕ್ತಿ ಸಮಯವ ಹೀಗೆ ಅಪವ್ಯಯ ಮಾಡಲಾರೆ...

ಗಝಲ್

ಚಾರುಹಾಸದ ರಾಣಿಗಾಗಿ ಬೀದಿಯಲ್ಲಿ ಸುಮವನ್ನು ಹಾಸುವೆನು ಸಖಿ ಜಾರುತಿರುವ ಹಿಮಮಣಿಯ ಪೋಣಿಸಿ ಕೊರಳಿಗೆ ಹಾಕುವೆನು ಸಖಿ ಅರಳಿದ ಪುಷ್ಪಗಳ ಸುಗಂಧವನು ಅರಸಿ ಆರಿಸಿ ತರುವೆನು ಹರಳಿನ ಬೆಟ್ಟದಲಿ ಚೆಂಬವಳವನು ಶೋಧಿಸಿ ತರುವೆನು ಸಖಿ ಕನ್ನಿಕೆಯ ಚುಬುಕಕ್ಕೆ ಢಾಳಕಾಂತಿಯ ಗೌರವರ್ಣವು ನೀಡುತಿದೆ ಚೆನ್ನಿಕೆಯ ಹೆರಳಿಗೆ ಮುಡಿಸಲು ಮಲ್ಲಿಗೆ ಮಾಲೆಯ ಇಡುವೆನು ಸಖಿ ದ್ಯುಮಣಿಯ ಬೆಳಕನ್ನು ಗೊತ್ತಿಲ್ಲದೆ ಕದ್ದಿರುವ ಸಾದ್ವಿಶಿರೋಮಣಿ ರಮಣನನು ನೋಟದಲ್ಲಿ ಗೆದ್ದಿರುವ ಚೆಲುವೆಯ ಅಪ್ಪುವೆನು ಸಖಿ ತೋಳಿನಲಿ ಬಲವಾಗಿ ಹಿಡಿದಿಟ್ಟು ಕೋಮಲೆಯ ಚುಂಬಿಸುವೆ ಪೌಳಿಯಲಿ ಅಭಿನವನ ಆಗಮನಕೆ ಅಹರ್ನಿಶಿ ಕಾಯುವೆನು ಸಖಿ ಶಂಕರಾನಂದ...

ಕವನ: ಅಪ್ಪ

ಅಪ್ಪ ಅಪ್ಪನ ಚಿತ್ರವನ್ನೊಮ್ಮೆ ನೋಡಿದೆ ಅಲ್ಲಿಲ್ಲ ಅಪ್ಪ ಯಾಕೋ ಬೇಗ ಹೋಗಿ ಬಿಟ್ಟ ಕೇಳಲೆಂದು ಬಂದೆ ಯಾಕೋ ಮಾತಾಡಲಿಲ್ಲ ಯಾಕೆಂದೆ ಸುಮ್ಮನಾಗಿ ಬಿಟ್ಟ ಅಪ್ಪ ಅಮ್ಮನೊಂದಿಗೆ ಹೆಗಲು ಕೊಟ್ಟ ಅಪ್ಪ ಎತ್ತಾಗಿ ದುಡಿದು ದಣಿದು ಬಿಟ್ಟ ಅಪ್ಪ ಬೆವರು ಹನಿ ಭೂಮಿ ನುಂಗಿ ಸುಮ್ಮನಿತ್ತು ಅಪ್ಪ ಅತ್ತಿದ್ದ ಆಕಾಶ ನೀಲಿಯಾಗಿತ್ತು ಅಪ್ಪ ತಾನೋಡದ ಜಗವ ನಾನು ನೋಡಲೆಂದು ಹೆಗಲ ಮೇಲೆ ಹತ್ತಿಸಿದ ನಾನು ನೋಡಿದೆ ಅವ ಸಂತಸ ಪಟ್ಟ ಯಾಕೆ ಬೇಗ...

ಗಝಲ್

ಗಝಲ್ ವರುಷ ದಾಟಿದೆ ಹೃದಯವ ಅರಿಯುತ ಜಸವ ಪಡೆದೆಯಲ್ಲ ನೀನು| ಹರುಷ ತುಂಬುತ ಬಯಸಿದ ಮನೆಯ ಹೊಸ್ತಿಲು ತುಳಿದೆಯಲ್ಲ ನೀನು|| ಋಣದ ಬಂಧವದು ಪ್ರೀತಿಯ ಬೆಸೆದಿದೆ ಕಳವಳವ ದೂರವಿರಿಸಿದೆ| ಮೀನಮೇಷ ಎಣಿಸದೆ ಮನದಿ ಧಾವಿಸಿ ಎದೆಯಲಿ ಕುಣಿದೆಯಲ್ಲ ನೀನು|| ಕನಸಿನ ಕನ್ಯೆಯಾಗಿ ಮೋಹದಲಿ ಅಪ್ಪುತ ತನುಮನವ ಆವರಿಸಿದೆ| ನೆನೆಪಿನ ಸುರಿಮಳೆ ಸುರಿಸುತ ಮೋದದೊಳು ನಯನದಿ ಸೆಳೆದೆಯಲ್ಲ ನೀನು|| ರಾಗದಲಿ ತಾಳವಾಗಿ ಲಯದಿ ಸರಿಗಮ ಹಾಡುತಲಿ ನಿಂತಿರುವೆ| ಭೋಗದಲಿ ವೈಭವವ ಚೂತವನ ರಸವನು ಸವಿಯುತ ಇರುವೆಯಲ್ಲ ನೀನು|| ಹಸೆಮಣೆಯ ಏರುತ...

ಕವನ: ಹೆಣ್ಣು

ಹೆಣ್ಣು ಹೆಣ್ಣು ದೇವರೆನ್ನುವರು ತನ್ನ ಹೆಂಡತಿಯ ಗರ್ಭದಲ್ಲಿ ಹೆಣ್ಣು ಜನಿಸಿದರೆ ಆಸ್ಪತ್ರೆಯಲ್ಲಿ ಹಣಕೊಟ್ಟು ಕೊಲ್ಲಿಸುವರು ನಿಮ್ಮ ತಾಯಿ ಹೆಣ್ಣು ನಿಮ್ಮ ಅಕ್ಕ ತಂಗಿ ಹೆಣ್ಣು ನಿಮ್ಮ ಹೆಂಡತಿಯಾಗಿ ಬಂದವಳು ಹೆಣ್ಣು ನಿಮ್ಮ ಮಗಳಾಗಿ ಏಕೆ ಬೇಡ ಹೆಣ್ಣು ಮುಂದೊಂದು ದಿನ ಹೆಣ್ಣಿಗಾಗಿ ಯುದ್ದವಾದರು ತಪ್ಪೆನಿಲ್ಲ ಹೆಣ್ಣು ಮಗುವನ್ನು ಗರ್ಭದಲ್ಲಿ ಕೊಲ್ಲಿಸಿದರೆ ಶಿಕ್ಷೆ ನಿನಗೆ ತಪ್ಪಿದಲ್ಲ ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಭ್ರೂಣಹತ್ಯೆ ನಿಲ್ಲಿಸಿ ಹೆಣ್ಣೋಂದು ಕಲಿತರೆ ಶಾಲೆಯೊಂದು ತೆರೆದಂತೆ ರಾಹುಲ್ ಸರೋದೆ
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group