ಕವನ
ಭತ್ತದ ಪೈರು
****************
ಬೆಳೆದಿದೆ ನೋಡು
ಭತ್ತದ ಪೈರು
ಇಳೆಗೆ ಕಳೆಯ ತಂದಿಹುದುನೀರಲ್ಲಿದ್ದರೂ
ನೆನೆಯದೆ ನಲುಗದೆ
ಸಮೃಧ್ಧವಾಗಿ ನಿಂದಿಹುದುಗಾಳಿಯು ಬೀಸಲು
ತೂಗುತ ತೊನೆಯುತ
ವೈಯಾರಿಯಂತೆ ತೋರುವದುಹಸಿರು ಹಸಿರು
ಮಿರಿಮಿರಿ ಮಿಂಚುತ
ಕಣ್ಣಿಗೆ ಸಂತಸ ನೀಡುವದುಗರಿಗಳ ತೆರೆದು
ಹೊಡೆಯನು ಹಿರಿದು
ಹೀಚು ಕಾಳು ಕಟ್ಟುವದುಚಿಲಿಪಿಲಿಗುಟ್ಟುವ
ಹಕ್ಕಿಯ ಬಳಗವ
ಮುದದಲಿ ತನ್ನೆಡೆ ಸೆಳೆಯುವದುಮಾಗುತ ಬರಲು
ಬಣ್ಣವ ಬದಲಿಸಿ
ಹಳದಿ ವರ್ಣಕೆ ತಿರುಗುವದುಹಗಲಿರುಳೆನ್ನದೆ
ದುಡಿಯುವ ರೈತನ
ಮನದಲಿ ಖುಷಿಯು ನೆಲೆಸಿಹುದು.. ಆರ್. ಎಸ್. ಚಾಪಗಾವಿ
ಬೆಳಗಾವಿ 8317404648
ಕವನ
ರೈತ ಮಹಿಳೆಇವಳೆ ನೋಡು ರೈತ ಮಹಿಳೆ
ನಮ್ಮ ಅನ್ನದಾತಳು
ಹಗಲು ರಾತ್ರಿ ಬಿಡದೆ ಸತತ
ದುಡಿಮೆಯಲ್ಲಿ ನಿರತಳು
ಕೋಳಿ ಕೂಗುವ ಮುನ್ನ ಈಕೆಯು
ಎಚ್ಚರಾಗಿ ಏಳುವಳು
ಮನೆಯ ಕೆಲಸ ಮುಗಿಸಿ ಬೇಗ
ಹೊಲದ ಕಡೆಗೆ ನಡೆವಳು
ಗಂಡನೊಂದಿಗೆ ಹೆಗಲುಗೊಟ್ಟು
ಹೊಲದಿ ತಾನು ದುಡಿವಳು
ಭೂಮಿ ತಾಯಿ ದೇವರೆಂದು
ನಿತ್ಯ ಸೇವೆಯ ಗೈವಳು
ಮನೆಯಲೆರಡು ಹಸುಗಳನ್ನು
ಸಾಕಿಕೊಂಡು ಇರುವಳು
ಮೇವು ನೀರು ನೀಡಿ ಅವಕೆ
ತುಂಬ ಹಾಲನು ಪಡೆವಳು
ಮಕ್ಕಳೊಡನೆ ಆಟವಾಡುತ
ಬೇಸರವ ಕಳೆವಳು
ದುಡಿದು ದಣಿದು ತಾನು ನೊಂದು
ನಮ್ಮನೆಲ್ಲ ಸಲುವಳು
ಆರ್....
ಕವನ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ ಹಬ್ಬವಿದು
ಬೆಳಕಿನ ದೀಪಾವಳಿಹೊಸ ಬಟ್ಟೆಯ ಧರಿಸಿ
ಶುಭವ ಕೋರಿ
ಅರಿಷಡ್ವರ್ಗಗಳ ಮೆಟ್ಟಿ ನಿಂತು
ಕುಟುಂಬದವರೊಡನೆ
ನಕ್ಕು ನಲಿದು
ಸಡಗರದಿ ಸಂಭ್ರಮಿಸುವ ಹಬ್ಬ
ಬೆಳಕಿನ ದೀಪಾವಳಿನಮ್ಮೊಳಗಿನ
ನರಕಾಸುರರ ಸದೆಬಡೆದು
ಸಂಪತ್ತುಗಳ ಶ್ರೀ ರಕ್ಷೆಯನು
ಲಕ್ಷ್ಮೀ ದೇವಿಯಲಿ ಬೇಡಿ
ಬಲಿ ಚಕ್ರವರ್ತಿಯ
ಪಾಡ್ಯಮಿದಿನದಲಿ
ಜಗಕೆ ಸೌಖ್ಯ ಹಾರೈಸುವ
ಬೆಳಕಿನ ಹಬ್ಬ...
ಕವನ
ದೀಪಾವಳಿ
ಸಾಲು ಸಾಲು
ದೀಪಗಳು
ಕಣ್ಣುಗಳು ಕೋರೈಸಲು
ಒಳಗಣ್ಣು ತೆರೆದು
ನೋಡಲು
ಜೀವನದ ಮರ್ಮ
ಕರ್ಮ ಧರ್ಮಗಳನು
ಅರಿಯಲು
ಸಾಲು ಸಾಲು
ದೀಪಗಳು
ಮೌಢ್ಯವ ಅಳಿಸಲು
ಜ್ಞಾನವ ಉಳಿಸಿ
ಬೆಳೆಸಲು
ಸಾಲು ಸಾಲು
ದೀಪಗಳು
ಮನೆಯನು ಬೆಳಗಲು
ಮನವನು ತೊಳೆಯಲು
ಸಾಲು ಸಾಲು
ದೀಪಗಳು
ನಮ್ಮ ನಿಮ್ಮ
ಎಲ್ಲರ ಮನೆ
ಹಾಗೂ ಮನವನು
ಬೆಳಗಲಿ
ಮಾನವೀಯತೆಯ
ಜ್ಯೋತಿ ಎಲ್ಲೆಡೆ
ಪಸರಿಸಲಿ
ಶುಭ ದೀಪಾವಳಿ 🌹ಡಾ. ಜಯಾನಂದ ಧನವಂತ
ಕವನ
ಬೆಳಕಿನ ಹಬ್ಬ ದೀಪಾವಳಿ
ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿ
ಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿ
ಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿ
ಬೆಳಕಿನ ಹಬ್ಬ ದೀಪಾವಳಿಯ ಆಚರಿಸಿಸ್ವಾರ್ಥ ಹೃದಯದಿ ನಿಸ್ವಾರ್ಥದ ಜ್ಯೋತಿಯ ಮೂಡಿಸಿ
ನೋವಿನ ನಡುವೆ ನೆಮ್ಮದಿಯ ದೀಪ ಹಚ್ಚಿಸಿ
ನಮ್ಮವರು ತಮ್ಮವರೆಂಬ ಸೌಜನ್ಯದ ಜ್ಯೋತಿ ಸ್ಮರಿಸಿ
ದೀಪದಿಂದ ದೀಪವ ಹಚ್ಚಿ ದೀಪಾವಳಿಯ ಸಂಭ್ರಮಿಸಿಕತ್ತಲೆಯ ಮಧ್ಯದಲಿ ಭವಿಷ್ಯದ ದೀಪವ ಕಾಣಿಸಿ
ಸೋಲುಗಳ ನಡುವೆ ಗೆಲುವಿನ...
ಕವನ
ವಿಶ್ವವೇ ಲಿಂಗಭೂಮಿ ತಿರುಗುತ್ತಿದೆ
ನಾವು ಎದ್ದಿರಲಿ
ಬಿದ್ದಿರಲಿ ಬದುಕಿರಲಿ
ರಜೆ ತೆಗೆದುಕೊಂಡಿಲ್ಲ
ಅದೆಷ್ಟೋ ಗ್ರಹಗಳು
ಸೂರ್ಯನ ಸುತ್ತ
ಸುತ್ತುತ್ತಿವೆ
ಇಲ್ಲಿ ಗುಡಿಯಲ್ಲಿ
ನವಗ್ರಹ ಪೂಜೆ
ಚಂದ್ರ ಗುರು ಶುಕ್ರ
ಶನಿ ರಾಹು ಕೇತುವಿನ
ನಿತ್ಯ ಕಾಟ
ಪೂಜೆ ಹವನ ಹೋಮ
ನಿಂತಿಲ್ಲ
ಅಂದೇ ಬಸವಣ್ಣ ಹೇಳಿದ
ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ
ವಿಶ್ವವೇ ಲಿಂಗ
ಅದನ್ನರಿಯದ
ನಾವು ನೀವು ಮಂಗ !
______________________
ಅಶ್ವಿನಿ ಬಸವರಾಜ ಪಾಟೀಲ
ಕವನ
ರೈತನ ಬವಣೆ
ಹುಲುಸಾಗಿ ಬೆಳೆದು ಕಬ್ಬು
ಲೋಕಕೆ ನೀಡುವನು ಸಿಹಿ
ಕಾರ್ಖಾನೆ ಮಾಲೀಕನ ಹಿಗ್ಗು
ರೈತನ ಬದುಕು ಮಾತ್ರ ಕಹಿ ।।ಅನ್ನ ಧಾನ್ಯವ ಬೆಳೆದು
ತುಂಬುವನು ಲೋಕದ ಹೊಟ್ಟೆ
ಬೆಳೆದ ಬೆಳೆಗೆ ಬೆಲೆ ಇಲ್ಲ
ನೋಡಲ್ಲಿ ಮಲಗಿಹನು ಖಾಲಿ ಹೊಟ್ಟೆ ।।ಮಳೆಗಾಗಿ ಆಕಾಶದೆಡೆಗೆ ಕಣ್ಣು
ವರುಣನ ಕೃಪೆ ಅತಿಯಾಯ್ತು
ಬೆಳೆದು ನಿಂತ ಬೆಳೆ ನೋಡಲ್ಲಿ
ನೀರು ಪಾಲಾಗಿ ಹೋಯಿತು ।।ಅತಿಯಾಸೆ ಇಲ್ವೇ ಇಲ್ಲ
ಹೊಟ್ಟೆಪಾಡಿಗಾಗಿ ದುಡಿವನು
ಕೈಗೆ ಬಂದ ತುತ್ತು ಕೈತಪ್ಪಿತ್ತು
ನೋಡಲ್ಲಿ...
ಕವನ
ಅಗ್ರಹಾರದ ಬಸವಣ್ಣ!
ಇರಬೇಕಿತ್ತು ಬಸವಣ್ಣ
ಅಂಗದ ಮೇಲೆ ಲಿಂಗವ ತೊರೆದು
ಅಗ್ರಹಾರದಲ್ಲಿ ಜಂಗಮನಾಗಿ ,
ಉಳಿಬೇಕಿತ್ತು ಬಸವಣ್ಣ
ಕರಿ ಅಂಗವನ್ನು ಪೂಜಿಸದೆ
ಬಿಳಿ ದಾರವನ್ನು ತೊಟ್ಟ ಬ್ರಾಹ್ಮಣನಾಗಿ.ಸಂಗಮದ ಮಡಿಲಲ್ಲಿ
ಅಂಗಕ್ಕೆ ಲಿಂಗವ ಕೊಟ್ಟು
ಜಾತಿಯಲ್ಲಿ ನೊಂದ ದೇಹದ ಬೆವರಿನ ಹನಿಗೆ
ಕೊರಳಿಗೆ ಮಡಿಕೆಯ ಕಟ್ಟದೆ ,
ಆತ್ಮದ ಲಿಂಗವ ಕಟ್ಟಿ ,
ಕುಲದ ಸಂಧಿಯಲ್ಲಿ ಬಂಧಿಯಾಗಿದ್ದ
ಮೌಢ್ಯತೆಯನ್ನು ಹಾಗೆ ಬಿಡಬೇಕಿತ್ತು
ಅಗ್ರಹಾರದ ಬ್ರಾಹ್ಮಣನಾಗಿ.ಇರಬೇಕಿತ್ತು ಬಸವಣ್ಣ
ನೀನು ನಿನಗಾಗಿ
ಅವರಿವರ ಮತಿಯನ್ನು ತೊರೆದು
ಅಗ್ರಹಾರದ ಮಂತ್ರಗಳಲ್ಲಿ ಮೆರೆದು
ಪೂಜಿಸಬೇಕಿತ್ತು ಬಸವಣ್ಣ
ಹರನಲ್ಲದ...
ಕವನ
ಸೂತ್ರದಾರಕಂಡ ಕನಸುಗಳು
ಕರಗುವ ಮುನ್ನ
ಅಪ್ಪಿಕೋ ಪ್ರೀತಿಯ
ಒಲವ ದಾರಿಯ ನಡೆ
ನಿನ್ನ ಬದುಕುಬಾನಿನಂಗಳ ತುಂಬ
ಮಿನುಗುತಿವೆ ಚುಕ್ಕೆಗಳು
ಬೆಳದಿಂಗಳ ಬೆಳಗಿನಲಿ
ಧರೆಗಿಳಿದು ಬಂದ
ಚೆಲುವೆ ನೀನುಸಾವು ನೋವನು ಮೆಟ್ಟಿ
ಗಟ್ಟಿಗೊಂಡಿದೆ ಜೀವ
ನಿಜ ನೆಲೆಯ ಸ್ಪೂರ್ತಿ
ನೆಮ್ಮದಿಯ ಬಾಳು
ನಿನ್ನ ಒಲವುಹೋಗುವುದು ಬಲು ದೂರ
ನಡೆದು ಮರೆಯುವ ಭಾರ
ಬೆಸೆದು ಬಿಡು ಪ್ರೇಮ ದಾರ
ಸೋಲೋ ಗೆಲುವು ಕಷ್ಟ ನಷ್ಟ
ನಗುವ ಮೇಲೆ ಸೂತ್ರಧಾರ
ಕಟ್ಟಿಹೆವು ಕೋಟೆ
ಎಲ್ಲದೆಲ್ಲವ ಬಿಟ್ಟು
ನಿನ್ನೆಡೆಗೆ ನಾ ಬಂದೆ
ಸ್ನೇಹ ಪ್ರೀತಿಯ ಬಾಳು
ನಿನ್ನ ಒಲವುಹಲವು...
ಕವನ
ನೀನಿದ್ದರೆನೀನಿದ್ದರೆ
ನನ್ನ ಜೊತೆಗೆ
ಬರಡು ಬಂಜರು
ಪ್ರೇಮ ಕಾಶ್ಮೀರಗಿಳಿ ಕೋಗಿಲೆಗಳ
ಸುಮಧುರ ಗಾನ
ನಲಿವ ನವಿಲಿನ
ಬಯಲು ನರ್ತನಉಕ್ಕಿ ಹರಿಯುವ
ಸಿಹಿ ಒಡಲ ಪ್ರೀತಿ
ಬರೆಯುವೆ ಪ್ರೇಮ
ಕವನ ಕಾವ್ಯಸುಂದರನೀನು ಇಲ್ಲದಿದ್ದರೆ
ವಿರಹ ವೇದನೆ
ಕೂಗುವುದು ನನ್ನ
ಬಂಡಾಯದ ಕಹಳೆ
_____________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



