ಸವದತ್ತಿ: ಕೊರೊನಾದಿಂದ ಭಾರತದ ವಿದೇಶಿ ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದು, ಬೇಡಿಕೆ, ಉತ್ಪಾದನೆ ಮತ್ತು ವಿದೇಶಿ ವ್ಯಾಪಾರದ ಮೇಲೆ ದೊಡ್ಡ ಪ್ರಮಾಣದ ಋಣಾತ್ಮಕ ಪರಿಣಾಮ ಬೀರಿದೆ. ಜಾಗತಿಕ ಆರ್ಥಿಕ ನಷ್ಟವನ್ನು ಸರಿದೂಗಿಸಲು ಜಾಗತಿಕ ಸಂಯೋಗದ ಅವಶ್ಯಕತೆ ಇದೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಹೆಚ್.ನಾಗೂರ ನುಡಿದರು.
ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ...
ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಗಾಂಜಾ ದಂಧೆಗೆ ಬೀದರ್ ಪೊಲೀಸರು ಕಡಿವಾಣ ಹಾಕಿದ್ದು ಮಿಂಚಿನ ದಾಳಿ ಮಾಡಿ ೧೫೮ ಕೆಜಿ ಗಾಂಜಾ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಬೀದರ್ ನಗರದ ಹೃದಯ ಬಾಗದಲ್ಲಿ ಇರುವ ಕೆನಾನ್ ಕಾಲೊನಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಕಾರ್‌ನಲ್ಲಿ ಮಾರಾಟಕ್ಕಾಗಿ ಸಂಗ್ರಹಿಸಿ ಇಡಲಾಗಿದ್ದ ₹ 3.17 ಲಕ್ಷ...
ಬೀದರ - ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಲಿಂಗಾಯತ ಧರ್ಮದ ಜನರು ಬಿ.ಎಸ್.ಯಡಿಯೂರಪ್ಪ ನವರ ಬೆನ್ನಿಗೆ ನಿಲ್ಲುತ್ತಾರೆ ಎಂದು ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು ಬೀದರ್ ಕೇಂದ್ರ ಬಿಜೆಪಿ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ
ರಾಜ್ಯದಲ್ಲಿ ಯಡಿಯೂರಪ್ಪನವರು ಜನಪರ-ಜೀವಪರ ಆಡಳಿತವನ್ನು ನಡೆಸುತ್ತಿದ್ದಾರೆ. ಇವರ ಅಧಿಕಾರದ ಅವಧಿಯಲ್ಲಿ ರಾಜ್ಯ ಪ್ರಗತಿಯನ್ನು ಸಾಧಿಸುತ್ತಿದೆ. ಅವರು ಜಾತ್ಯತೀತವಾಗಿ ಎಲ್ಲಾ...
ಪಟ್ಟಣದ ಎಮ್. ಎಸ್. ಗುರುಕುಲ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪ.ಪೂ. ಮಹಾವಿದ್ಯಾಲಯದ ೨೦೨೧-೨೨ ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರಿಕ್ಷಾ ಫಲಿತಾಂಶ ೧೦೦ ಕ್ಕೆ ೧೦೦ ಬಂದಿದ್ದು, ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ
ಕು. ವಿಜಯಲಕ್ಷ್ಮಿ ಎಮ್. ನಾರಾಯಣಕರ
ಕು.ಸುರೇಶ ಎಸ್. ಕಂಬಾರ
ಕು.ಶ್ರೀದೇವಿ ಎಸ್. ಹಿರೇಕುರುಬರ
ಕು. ವಿನೋದ ಜಿ. ಡೋಣೂರ,
ಕು.ದಶರಥ ವ್ಹಿ....
ಬೀದರ - ಬಸವಕಲ್ಯಾ ತಾಲೂಕಿನ ಉಜಳಂಬ ಗ್ರಾಮದ ಜನರ ಸಮಸ್ಯೆ ಆಲಿಸಿದ ಶಾಸಕ ಶರಣು ಸಲಗರ ಸ್ಥಳದಲ್ಲಿಯೇ ಕೆಲವು ಪರಿಹಾರ ಸೂಚಿಸಿದ್ದಲ್ಲದೆ ವೃದ್ಧರೊಬ್ಬರಿಗೆ ರೂ. ೫೦೦೦ ಸಹಾಯ ನೀಡಿದರು.
ಕಳೆದ ಎರಡೂವರೆ ವರ್ಷದ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡಿದ್ದ ಗ್ರಾಮ ಉಜಳಂಬಕ್ಕೆ ಭೇಟಿ ನೀಡಿದ ಶಾಸಕರ ಮುಂದೆ ಗ್ರಾಮಸ್ಥರು ಸಮಸ್ಯೆಗಳ ಸುರಿಮಳೆ...
ಮೂಡಲಗಿ: ‘ಇಚ್ಛಾಶಕ್ತಿ ಮತ್ತು ನಿಸ್ವಾರ್ಥದಿಂದ ಮಾಡುವ ಸೇವೆಯು ನಿಜವಾದ ಸಮಾಜ ಸೇವೆಯಾಗುತ್ತದೆ’ ಎಂದು ಸಾಹಿತಿ ಪ್ರೊ. ಜಯವಂತ ಕಾಡದೇವರ ಹೇಳಿದರು.
ಇಲ್ಲಿಯ ಸಾಯಿ ವಸತಿ ನಿಲಯದ ಆವರಣದಲ್ಲಿ ಜರುಗಿದ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯಿಂದ ದೊರೆಯುವ...
ಬನವಾಸಿ: ಐತಿಹಾಸಿಕ ಪ್ರವಾಸಿ ತಾಣ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಬನವಾಸಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಪಟ್ಟಣದಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದ್ದು ಕಾನೂನು ಉಲ್ಲಂಘನೆ, ಅಪರಾಧ ಪ್ರಕರಣಗಳೂ ನಡೆಯುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಜನರ ಚಟುವಟಿಕೆಗಳ ಮೇಲೆ ನಿಗಾ ಇಡಲು ಇಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಪಟ್ಟಣದಲ್ಲಿ...
‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕೃಷಿ ಅಭಿಯಾನಕ್ಕೆ ಹಸಿರು ನಿಶಾನೆ
ಗೋಕಾಕ: ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ಪೂರೈಕೆ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆಯಿಂದ ಇತ್ತೀಚೆಗೆ ಗೋಕಾಕದಲ್ಲಿ ಹಮ್ಮಿಕೊಂಡಿದ್ದ “ಇಲಾಖೆಗಳ ನಡಿಗೆ...
ಶಾಂತಿಯಿಂದ ಹಬ್ಬ ಆಚರಿಸೋಣ - ಸಂಗಮೇಶ ಹೊಸಮನಿ
ಸಿಂದಗಿ - ಸರಕಾರದ ಆದೇಶದ ಪ್ರಕಾರ ನಾವು ನೀವು ನಿಯಮಗಳನ್ನು ಪಾಲಿಸೋಣ,ನಿಯಮ ಉಲ್ಲಂಘನೆ ಮಾಡದಂತೆ ನಾವೆಲ್ಲರೂ ಶಾಂತ ರೀತಿಯಿಂದ ಹಬ್ಬವನ್ನು ಆಚರಿಸೋಣ ಎಂದು ಸಿಂದಗಿ ಠಾಣಾ ಅಧಿಕಾರಿ ಸಂಗಮೇಶ ಹೊಸಮನಿ ಹೇಳಿದರು.
ಬಕ್ರೀದ್ ಹಬ್ಬದ ನಿಮಿತ್ತ ನಗರದ ಪೊಲೀಸ್ ಠಾಣಾ ಆವರಣದಲ್ಲಿ ಕರೆಯಲಾದ ಶಾಂತಿ ಸಭೆಯಲ್ಲಿ ಅವರು ಅವರು...
ಬನವಾಸಿ: ಜಿಲ್ಲಾಧಿಕಾರಿಗಳ ಆದೇಶದಂತೆ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು, ಮೌಲಾನ, ಪಾದ್ರಿಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಗಳು ಪ್ರತಿ 10 ದಿನಕ್ಕೊಮ್ಮೆ ಕೊವೀಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು.
ಅಲ್ಲದೇ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರ ಸಂಪರ್ಕದಲ್ಲಿರುವ ಎಲ್ಲ ಅಂಗಡಿಕಾರರು ಕೊವೀಡ್...
ಮಿಜರೋರಾಂ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರೊ. ಕೆ. ವಿದ್ಯಾಸಾಗರ ರಡ್ಡಿ ಅಭಿಪ್ರಾಯ
ಮೂಡಲಗಿ: ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವಲ್ಲಿ ಸಮರ್ಥರನ್ನಾಗಿಸುವ ನಿಟ್ಟಿನಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ...