ಭಾರತವನ್ನು ಕೊರೋನಾ ಮುಕ್ತ ಮಾಡಲು ಪ್ರತಿಯೊಬ್ಬರೂ ಕೊರೋನಾ ಲಸಿಕೆಯನ್ನು ಹಾಕಿಸಿಕೊಳ್ಳಲೇಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ರವಿವಾರ ಜನ ಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಿಂದಾಗಿ ವಿದೇಶಗಳಿಗಿಂತಲೂ ನಮ್ಮ ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ ಕಡಿಮೆ ಇದೆ....
ಸಂಕ್ರಮಣದ ಕರಿ ದಿನ ಬೆಳಿಗ್ಗೆ ಧಾರವಾಡದ ಕಿಟ್ಟಿಗಟ್ಟಿ ಹತ್ತಿರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತ ಪಟ್ಟವರನ್ನು ಗುರುತಿಸಲಾಗಿದ್ದು ಅವರ ಹೆಸರುಗಳು ಈ ಕೆಳಗಿನಂತಿವೆ:
ಪೂರ್ಣಿಮಾ
ಪ್ರವೀಣಾ
ಆಶಾ ಜಗದೀಶ್
ಮಾನಸಿ
ಪರಂಜ್ಯೋತಿ
ರಾಜೇಶ್ವರಿ ಶಿವಕುಮಾರ
ಶಕುಂತಲಾ
ಉಷಾ
ವೇದಾ
ನಿರ್ಮಲಾ
ಮಂಜುಳಾ ನಿಲೇಶ
ರಜನಿ ಶ್ರೀನಿವಾಸ
ಪ್ರೀತಿ ರವಿಕುಮಾರ
ಹಳೆಯ ಗೆಳತಿಯರು ಸಾವಿನಲ್ಲಿ ಒಂದಾದರು ಮಕರ...
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡುವುದಷ್ಟೇ ತಡ ಬಿಜೆಪಿಯಲ್ಲಿ ಬೆಂಕಿ ಕಾರುವ ರಾಜಕೀಯ ನಾಯಕರ ಸಂಖ್ಯೆ ಹೆಚ್ಚಾಗಿದೆ.
ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣದಿಂದ ಬಂಡಾಯವೆದ್ದಿರುವ ಬಸನಗೌಡಾ ಪಾಟೀಲ ಯತ್ನಾಳ, ಮುನಿರತ್ನ ಹಾಗೂ ಹಳ್ಳಿ ಹಕ್ಕಿ ವಿಶ್ವನಾಥ್ ಬಹಿರಂಗವಾಗಿಯೇ ತಮ್ಮ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದು, ಯಡಿಯೂರಪ್ಪನವರ ಒಂದು ಸಿಡಿ ಇಟ್ಟುಕೊಂಡು...
ಇದೇ ಜನವರಿ ೧೬ ರಿಂದ ಹಂಚಿಕೆಯಾಗಲಿರುವ ಪುಣೆಯ ಸೀರಂ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿರುವ ಕೊರೋನಾ ಲಸಿಕೆ ಪೆಟ್ಟುಗೆಗಳು ಕೊಗನೊಳ್ಳಿ ಚೆಕ್ ಪೋಸ್ಟ ಮೂಲಕ ನಗರದ ಟಿಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋಗೆ ಆಗಮಿಸಿದವು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಸರ್ಕಾರದ ಮಾರ್ಗಸೂಚಿಯ ಪ್ರಕಾರ ಲಸಿಕೆಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡು, ಸರ್ಕಾರದ ಸೂಚನೆಯಂತೆ ಆಯಾ ಜಿಲ್ಲೆಗಳಿಗೆ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ...
ಮೂಡಲಗಿ: ಸ್ವಾಮಿ ವಿವೇಕಾನಂದರು ಯುವಕರಿಗೆ ದೈವ ಭಕ್ತಿಗಿಂತ ರಾಷ್ಟ್ರ ಭಕ್ತಿ ಶ್ರೇಷ್ಠವಾದುದು ಎಂಬುದನ್ನು ತಿಳಿಸಿದ ಮಹಾನ್ ಸಂತ ಎಂದು ಸೇವಾ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಕಡಾಡಿ ಅವರು ಹೇಳಿದರು.
ಕಲ್ಲೋಳಿ ಪಟ್ಟಣದಲ್ಲಿ ಮಂಗಳವಾರ ಜ. 12 ರಂದು ಸೇವಾ ಸಂಸ್ಥೆಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನದ ಪ್ರಯುಕ್ತ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ...
ಹೊಸದಿಲ್ಲಿ- ಈಗ ಬಹು ಚರ್ಚಿತವಾಗಿರುವ ಬ್ರಿಟನ್ ರೂಪಾಂತರಿತ ಕೊರೋನಾ ವೈರಸ್ ಭಾರತದಲ್ಲಿ ಕಳೆದ ಮಾರ್ಚ್- ಮೇ ತಿಂಗಳಲ್ಲಿಯೇ ಇತ್ತು ಎಂದು ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಆ್ಯಂಡ್ ಇಂಟೆಗ್ರೇಟಿವ್ ಬಯಾಲಾಜಿ ಸಂಸ್ಥೆ ಹೇಳಿದೆ.
ಅದರಿಂದಾಗಿಯೆ ಭಾರತದಲ್ಲಿ ವೈರಾಣು ವೇಗವಾಗಿ ಹರಡಲು ಕಾರಣವಾಯಿತು ಎಂದು ಸಂಸ್ಥೆಯ ನಿರ್ದೇಶಕ ಅನುರಾಗ ಅಗ್ರವಾಲ್ ಅವರು ಹೇಳಿದ್ದಾರೆ.
ಈ ಮಧ್ಯೆ ರೂಪಾಂತರಿತ ಕೊರೋನಾ ವೈರಾಣು...
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವಾ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ.
ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ...
ಗೋಕಾಕ : ಡಿ.22 ರಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಅರಭಾವಿ ಮತಕ್ಷೇತ್ರದ 33 ಗ್ರಾಮ ಪಂಚಾಯತಿಗಳಲ್ಲಿ ಮೇಲುಗೈ ಸಾಧಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ನಗರದಲ್ಲಿಂದು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಅರಭಾವಿ ಮತಕ್ಷೇತ್ರದ ಎಲ್ಲ 33 ಗ್ರಾಮ...
ಮೂಡಲಗಿ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಧ್ಯೇಯ ವ್ಯಾಖ್ಯೆವಾಗಿರುವಂತಹ ಸಂಘಟನೆ, ಸುರಕ್ಷೆ, ಸಂಸ್ಕಾರ, ಈ ಮೂರು ಕಾರ್ಯಗಳ ಜಾರಿಗಾಗಿ ಪಣ ತೊಟ್ಟಿರುವ ಭಜರಂಗದಳದ ಯುವ ಕಾರ್ಯಕರ್ತರ ಶ್ರಮ ಶ್ಲಾಘನೀಯವಾದದ್ದು ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದರು.
ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಡಿ. 27...
ಬೀದರ್ - ಗ್ರಾಮ ಪಂಚಾಯತಿ ಚುನಾವಣೆ ಅಂದ್ರೆ ವಿಶೇಷತೆ, ಸಾಕಷ್ಟು ಜಿದ್ದಾಜಿದ್ದಿಯಿಂದ ಕೂಡಿರುತ್ತವೆ. ಅದೇ ರೀತಿ ಅಭ್ಯರ್ಥಿಗಳ ಪ್ರಚಾರ ಕೂಡ ವಿಭಿನ್ನವಾಗಿರುತ್ತದೆ. ಬೀದರ್ ತಾಲೂಕಿನ ಫತೇಪುರ ಗ್ರಾಮದಲ್ಲಿ ಮಾಸ್ಕ್ ಮತ್ತು ಸೈನಿಟೈಜರ್ ನೀಡುವ ಮೂಲಕ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಮುಂದಾಗಿದ್ದಾರೆ.
ಬೀದರ್ ತಾಲೂಕಿನ ಚಿಮಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಫತೇಪುರ ಗ್ರಾಮದಲ್ಲಿ ಟ್ರ್ಯಾಕ್ಟರ್ ಚಿನ್ಹೆ...