ಸುದ್ದಿಗಳು

ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಎರಡು ದಿನಗಳ ತರಬೇತಿ ಸಮಾರೋಪ ಸಮಾರಂಭ

ಮುನವಳ್ಳಿ : ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನದಯಾಳ ಅಂತ್ಯೋದಯ ಯೋಜನೆ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಅಡಿಯಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಜರುಗಿತು.ಶಿಕ್ಷಕರಾದ ವೀರಣ್ಣ ಕೊಳಕಿ, ಶಿಕ್ಷಕ ಗುರುನಾಥ ಪತ್ತಾರ, ಬಾಳು ಹೊಸಮನಿ, ಪುರಸಭೆ ಸಮುದಾಯ ಸಂಘಟನಾಧಿಕಾರಿ...

ಗುಣಾತ್ಮಕ ಶಿಕ್ಷಣದಲ್ಲಿ ಸಮುದಾಯದ ಪಾತ್ರ ಬಹುಮುಖ್ಯ – ಮೈನುದ್ಧೀನ ಕೊಳಚಿ

ಮುನವಳ್ಳಿ : “ಸಂವಿದಾನದ ಶಿಕ್ಷಣ ಹಕ್ಕು ಕಾಯಿದೆ ಆಶಯದಂತೆ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಮೂಲಕ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಬೇಡಿಕೆ ಸಾಕಾರಗೊಳ್ಳಬೇಕಾದರೆ ಸಮುದಾಯದ ಪಾಲ್ಗೊಳ್ಳುವಿಕೆ ನಿರ್ಣಾಯಕ ಪಾತ್ರವಹಿಸುತ್ತದೆ. ಇಂದು ಸರಕಾರಿ ಶಾಲೆಗಳಲ್ಲಿ ಎಸ್.ಡಿ.ಎಂ.ಸಿಗಳು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಶಿಕ್ಷಣದ ಸಬಲೀಕರಣದಲ್ಲಿ ಪ್ರಮಖ ಪಾತ್ರವಹಿಸುತ್ತಿವೆ”ಎಂದು ನೋಡಲ್ ಅಧಿಕಾರಿ ಮೈನುದ್ಧೀನ ಕೊಳಚಿ...

ಶಿಕ್ಷಕರ ಮಗಳು ಪಿ ಎಸ್ ಐ

ಮೂಡಲಗಿ: ಪಟ್ಟಣದ ಲಕ್ಷ್ಮಿನಗರದ ಶಿಕ್ಷಕ ಚನ್ನಪ್ಪಾ ಹಂಜಿಯವರ ಪುತ್ರಿ ತೇಜಸ್ವಿನಿ ಪಿ ಎಸ್ ಐ ಪರೀಕ್ಷೆ ಪಾಸಾಗಿ ಸಾಧನೆ ಮಾಡಿದ್ದಾರೆ.ತೇಜಸ್ವಿನಿ ಹಂಜಿ ಪಿ.ಎಸ್.ಆಯ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 28 ನೇ ರ‍್ಯಾಂಕ ಪಡೆದಿದ್ದು ಮೂಡಲಗಿ ಪಟ್ಟಣಕ್ಕೆ ಹಾಗೂ ತಾಲೂಕಿಗೆ ಕೀತಿ೯ ತಂದಿದ್ದಾಳೆ. ತೇಜಸ್ವಿನಿ ಹಂಜಿ ಅವರ ಸಾಧನೆ ಶಿಕ್ಷಕರ ಬಳಗದಲ್ಲಿ ಸಂತಸ ಮೂಡಿಸಿದೆ. ಮೂಡಲಗಿ ಗ್ರಾಮದಲ್ಲಿ...

ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ; ಶಿಷ್ಟಾಚಾರ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ತಹಶೀಲ್ದಾರ ಸೂಚನೆ

ಸಿಂದಗಿ: ಸರಕಾರದ ಮಾರ್ಗಸೂಚಿ ಹಾಗೂ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ರಾಷ್ಟ್ರೀಯ ಹಬ್ಬವನ್ನು ಅರ್ಥಪೂರ್ಣ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಧ್ವಜ ಸಂಹಿತೆ ಕಟ್ಟುನಿಟ್ಟಿನಲ್ಲಿ ನಡೆಯಬೇಕು. ದ್ವಜಾರೋಹಣ ಹಾಗೂ ಅವರೋಹಣ ಮಾಡುವಲ್ಲಿ ತಪ್ಪಿದಲ್ಲಿ ರಾಜ್ಯ ಧ್ವಜ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ ಈ ವಿಷಯದಲ್ಲಿ ರಾಜಿ ಇಲ್ಲ ಎಂದು ತಹಶೀಲ್ದಾರ ಸಂಜೀವಕುಮಾರ ದಾಸರ ಎಚ್ಚರಿಕೆ ನೀಡಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ...

ಮಹಿಳೆಯರು, ಯುವಕರು ತರಬೇತಿ ಕಾರ್ಯಕ್ರಮ ಸದುಪಯೋಗಪಡಿಸಿಕೊಳ್ಳಬೇಕು

ಮೂಡಲಗಿ - ಮಹಿಳೆಯರು ಮತ್ತು ಯುವಕರು ಸ್ವಾವಲಂಬಿ ಜೀವನವನ್ನು ನಡೆಸಲು ಕಂಪ್ಯೂಟರ್ ಮತ್ತು ಹೊಲಿಗೆ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು.ಅವರು ಮೂಡಲಗಿ ಪಟ್ಟಣದ ನಾಗಲಿಂಗ ನಗರದ ಶ್ರಿನಿವಾಸ ಕಂಪ್ಯೂಟರ್ ತರಬೇತಿ ಕೇಂದ್ರದ ಕಾರ್ಯಾಲಯದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ...

ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಪಡೆದು ಭವಿಷ್ಯ ರೂಪಿಸಿಕೊಳ್ಳಿ- ಮರ್ದಿ

ಮೂಡಲಗಿ: ಕರೋನಾ ಆತಂಕದಲ್ಲಿಯೂ ಶಿಕ್ಷಣ ಇಲಾಖೆ ತನ್ನ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುತ್ತಿರುವದು ಶ್ಲಾಘನೀಯ. ಶಿಕ್ಷಣ ಇಲಾಖೆಯ ಇಂತಹ ಹಲವಾರು ಸೌಲಭ್ಯಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ನಿರ್ಮಿಸಿಕೊಳ್ಳಬೇಕೆಂದು ತುಕ್ಕಾನಟ್ಟಿಯ ಗಾಮ ಪಂಚಾಯತ ಅಧ್ಯಕ್ಷರಾದ ಕುಮಾರ ಮರ್ದಿ ಹೇಳಿದರು.ಅವರು ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಸಮವಸ್ತ್ರಗಳನ್ನು ವಿತರಿಸಿ...

ಕೋವಿಡ್ ಗೆ ಬಲಿಯಾದವರ ಕುಟುಂಬದತ್ತ ಸ್ವಲ್ಪ ನೋಡಿ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಉಮಾದೇವಿ ಎಂಬ ಮಹಿಳೆಯ ಪತಿ ಕೊವಿಡ್ ನಿಂದಾಗಿ ಇತ್ತೀಚಿನ ದಿನಗಳಲ್ಲಿ ತೀರಿಕೊಂಡಿದ್ದರಿಂದ, ಆಕೆ ಮತ್ತು ಆಕೆಯ ಮೂವರು ಹೆಣ್ಣು ಮಕ್ಕಳು ಪ್ರತಿದಿನವೂ ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾಗ , ಅದರ ಯಾತನೆ ನೋವು ಸಹಿಸಲಾರದೇ ಉಮಾದೇವಿಯು ನಿನ್ನೆ ಮಲಪ್ರಭಾ ನದಿಗೆ ತನ್ನ ಎಂಟು ವರ್ಷದ ಮಗಳೊಂದಿಗೆ...

ಹೇಮರಡ್ಡಿ ಮಲ್ಲಮ್ಮ ಮಹಿಳಾ ಸಂಘದವರಿಂದ ಶ್ರೀ ವೇಮನ ಜನ್ಮ ದಿನಾಚರಣೆ

ಸವದತ್ತಿ: ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಮಹಿಳಾ ಸಂಘದವರು ವೇಮನ ಜನ್ಮದಿನೋತ್ಸವ ಎನ್.ಎಸ್.ಪಟ್ಟಣಶೆಟ್ಟಿಯವರ ನಿವಾಸದಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯರಾದ ಎಸ್.ಬಿ.ಜಗಾಪೂರ ವೇಮನನ ಸಾಹಿತ್ಯದ ಕುರಿತು ಮತ್ತು ವೇಮನನ ಜೀವನ ವೃತ್ತಾಂತವನ್ನು ವಿವರಿಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಲಕ್ಷ್ಮೀ ಚಂದ್ರರಡ್ಡಿ ಹೂಲಿ ಸದಸ್ಯರು ಶ್ರೀ ರೇಣುಕಾ ಯಲ್ಲಮ್ಮ ಆಡಳಿತ ಸಮಿತಿ, ಹೆಚ್.ಆರ್.ಪೆಟ್ಲೂರ ಅಧ್ಯಕ್ಷರು ಕರ್ನಾಟಕ...

ಒಂದೇ ಕುಟುಂಬದಲ್ಲಿ ಇಬ್ಬರು ಪಿಎಸ್ಐಗಳು

ರಾಯಬಾಗ - ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ಒಂದೇ ಕುಟುಂಬದ ಸಹೋದರರಿಬ್ಬರು ಪಿಎಸ್ಐ ಹುದ್ದೆ ಗಿಟ್ಟಿಸಿ ದಾಖಲೆ ಮಾಡಿದ್ದಾರೆ.ಬೆನ್ನಳ್ಳಿ ಕುಟುಂಬದ ಶಿವಾನಂದ ಅಶೋಕ ಬೆನ್ನಳ್ಳಿ ಹಿರಿಯ ಸಹೋದರ ಪಿ.ಎಸ್.ಆಯ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 15 ನೇ ರ‍್ಯಾಂಕ ಪಡೆದಿದ್ದು ಕಿರಿಯ ಸಹೋದರ ಪ್ರಶಾಂತ ಅಶೋಕ ಬೆನ್ನಳ್ಳಿ ಇವರು ಪಿ.ಎಸ್.ಆಯ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 159...

ಬ್ರಹ್ಮಶಿವ, ತಾತ್ವಿಕ ನೆಲೆಯ ಭಿನ್ನ ಕವಿ; ಡಾ. ಚಿತ್ತಯ್ಯ ಪೂಜಾರ

ಬೆಳಗಾವಿ, ಜ 19: ಕನ್ನಡ ವಿಡಂಬನ ಕವಿ ಎಂದು ಖ್ಯಾತಿ ಪಡೆದ ಬ್ರಹ್ಮಶಿವ ತನ್ನ ತಾತ್ವಿಕ ನೆಲೆಯ ಭಿನ್ನ ವಿಚಾರಗಳಿಂದ ಧಾರ್ಮಿಕ ಚಿಂತನೆಗಳನ್ನು ತನ್ನ ಕೃತಿಯಾದ ಸಮಯ ಪರೀಕ್ಷೆಯಲ್ಲಿ ಪ್ರತಿಪಾದಿಸಿದ್ದಾನೆ. ಪರ ಧರ್ಮದ ವಿಚಾರಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸುತ್ತಾ ಅದಕ್ಕೆ ತಕ್ಕ ಉಪಮೇಯಗಳನ್ನು ನಿರೂಪಿಸುತ್ತಾನೆ. ಧಾರ್ಮಿಕ ಚಿಂತನೆಗಳನ್ನು ತನ್ನ ವಿಚಾರಗಳಿಂದ ಒರೆಗೆ ಹಚ್ಚುವ ಕಾರ್ಯ ಮಾಡಿದ್ದಾನೆ....
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group