ಸುದ್ದಿಗಳು

ಪರಿಸರ ಸ್ನೇಹಿ ಗಣೇಶ ಮೂರ್ತಿ ಸ್ಥಾಪಿಸಲು ಸೂಚನೆ

ಮೂಡಲಗಿ: ಈ ಬಾರಿ ಆಚರಿಸುವ ಗಣೇಶ ಹಬ್ಬವನ್ನು ಕೋವಿಡ್-19 ಮಾರ್ಗಸೂಚಿಯೊಂದಿಗೆ ಸರಳವಾಗಿ ಆಚರಿಸುವಂತೆ ಜಿಲ್ಲಾಧಿಕಾರಿಯವರ ಆದೇಶದನ್ವಯ ಗಣೇಶ ಮೂರ್ತಿ ತಯಾರಕರು ಹಾಗೂ ಮಾರಾಟಗಾರರು ಪಿಓಪಿ ಹಾಗೂ ಬಣ್ಣ ಲೇಪಿತ ಮೂರ್ತಿ ತಯಾರಿಸುವುದು, ಮಾರಾಟ ಮಾಡುವುದನ್ನು ನಿಷೇಧಿಸಿದ್ದಾರೆ. ಅದರ ಬದಲಾಗಿ ಶೇಡಿ ಮಣ್ಣಿನಿಂದ ತಯಾರಿಸಿದ ಹಾಗೂ ನಾಲ್ಕು ಅಡಿ ಎತ್ತರದೊಳಗೆ ಮೂರ್ತಿಗಳನ್ನು ತಯಾರಿಸಿ ಬಣ್ಣ ರಹಿತ...

‘ಅನ್ನದಾನವು ಶ್ರೇಷ್ಠ ದಾನವಾಗಿದೆ’ – ಡಿ ಜೆ ಮಹಾತ್

ಮೂಡಲಗಿ: ‘ಅನ್ನ ದಾನವು ಎಲ್ಲ ದಾನಕ್ಕಿಂತ ಶ್ರೇಷ್ಠ ದಾನವಾಗಿದೆ’ ಎಂದು ತಹಶೀಲ್ದಾರ್ ಡಿ.ಜೆ ಮಹಾತ್ ಅವರು ಹೇಳಿದರು.ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರದವರು ಏರ್ಪಡಿಸಿದ್ದ 66ನೇ ಪಾಕ್ಷಿಕ ಅನ್ನದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಸಿದವರಿಗೆ ಅನ್ನವನ್ನು ನೀಡುವುದು ಸಮಾಜದ ಶ್ರೇಷ್ಠ ಮೌಲ್ಯವಾಗಿದೆ ಎಂದರು.ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತ...

ದಲಿತರಿಗೆ ಸೌಲಭ್ಯಗಳನ್ನು ಸರಿಯಾಗಿ ನೀಡಲು ಸಿದ್ದು ಪೂಜಾರಿ ಆಗ್ರಹ

ಸಿಂದಗಿ: ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ವರ್ಗದವರ ಮೇಲಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೆ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಸಿದ್ದು ಪೂಜಾರಿ ದಲಿತರ ಪರವಾಗಿ ಅಭಿನಂದನೆ ಸಲ್ಲಿಸಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಎಸ್ಸಿ ಮೋರ್ಚಾವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ...

ಗುರುಭವನ ಕಾಮಗಾರಿ ವೀಕ್ಷಣೆ

ಸವದತ್ತಿ: ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಶಿಕ್ಷಕರ ಮಹತ್ವಾಕಾಂಕ್ಷಿ ಗುರುಭವನ ಕಾಮಗಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ. ಪ್ರಧಾನ ಕಾರ್ಯದರ್ಶಿ ಎಫ್.ಜಿ.ನವಲಗುಂದ ಶಿಕ್ಷಣ ಸಂಯೋಜಕ ಎಂ.ಡಿ.ಹುದ್ದಾರ. ಕೆ.ಕೆ.ಡಂಗಿ ವೀಕ್ಷಿಸಿದರು.ಕಾರಣಾಂತರಗಳಿಂದ ಕಾಮಗಾರಿ ಕುಂಠಿತಗೊಂಡಿತ್ತು. ಶಾಸಕ ಹಾಗೂ ವಿಧಾನಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿ ಹಾಗೂ ಮಾಜಿ...

ತಾಲೂಕಿನ ನೀರಾವರಿ ಬವಣೆ ನೀಗಿಸುವಲ್ಲಿ ದಿ.ಮನಗೂಳಿಯವರ ಸಾಧನೆ ಅಮೋಘ – ಡಾ. ಸಾರಂಗ ಶ್ರೀಗಳು

ಸಿಂದಗಿ: ಶ್ರದ್ಧೆ ಯಾರಲ್ಲಿ ಇರುತ್ತದೆ ಅದು ಸಾಮಾಜಿಕ ಕಾರ್ಯಗಳಲ್ಲಿ ಒಂದಾಗಿ ಕೆಲಸ ಮಾಡುತ್ತದೆ ಅದಕ್ಕೆ ಶ್ರದ್ದೆಯಿಂದ ಕಾರ್ಯನಿರ್ವಹಿಸಿದ ಪ್ರತಿಫಲವಾಗಿ ತಾಲೂಕಿನ ನೀರಾವರಿ ಬವಣೆ ನೀಗಿದಂತಾಗಿದೆ ಅಲ್ಲದೇ ತಾಲೂಕಿನ ಬವಣೆ ನೀಗಿಸುವಲ್ಲಿ ದಿ.ಎಂ.ಸಿ.ಮನಗೂಳಿಯವರ ಸಾಧನೆ ಅಮೋಘವಾದದ್ದು ಅವರನ್ನು ಸ್ಮರಿಸಬೇಕಾಗಿರುವದು ಅತ್ಯವಶ್ಯಕವಾಗಿದೆ ಎಂದು ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಕೆರೆಗೆ ರೂ 27.10 ಕೋಟಿ...

ತಮ್ಮ ನಿಸ್ವಾರ್ಥ ಸೇವೆ ಸರಳ ಸ್ವಭಾವದಿಂದ ಎಲ್ಲರ ಮೆಚ್ಚುಗೆಗೆ ಬೆಳವಡಿಯವರು ಪಾತ್ರರಾಗಿದ್ದರು – ಅರ್ಜುನ ಕಂಬೋಗಿ

ಸವದತ್ತಿ: ಪ್ರತಿಯೊಬ್ಬರ ಬದುಕಿನಲ್ಲಿಯೂ ವಿದಾಯವಿರುತ್ತದೆ.,ನಮ್ಮ ಸೇವೆಯ ಅವಧಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವ ಮೂಲಕ ಬೆಳವಡಿಯವರು ಸರಳ ಸ್ವಭಾವದ ಮೂಲಕ ಇಲಾಖೆಯಲ್ಲಿ ಮುಖ್ಯೋಪಾಧ್ಯಾಯ ಹಾಗೂ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದರು. ಅವರ ನಿಸ್ವಾರ್ಥ ಸೇವೆ ಮರೆಯಲಾಗದು.ದೇವರು ಅವರಿಗೆ ಆಯುರಾರೋಗ್ಯವನ್ನು ನೀಡಲಿ ಹಾಗೆಯೇ ನೂತನ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ ನವಪೀಳಿಗೆಯ ತರುಣರು.ಶೈಕ್ಷಣಿಕವಾಗಿ ತಂತ್ರಜ್ಞಾನದಲ್ಲಿ ಪರಿಣತರು...

ಸವದತ್ತಿ ತಾಲೂಕು ಆಸ್ಪತ್ರೆಯಲ್ಲಿ ವಿಕಲಚೇತನ ಮಕ್ಕಳ ಯು. ಡಿ. ಐ. ಡಿ ಕಾರ್ಯ

ಸವದತ್ತಿ: "ತಾಲೂಕಾ ಆಸ್ಪತ್ರೆ ಸವದತ್ತಿ ಯಲ್ಲಿ ವಿಕಲಚೇತನ ಮಕ್ಕಳ ಯು. ಡಿ. ಐ. ಡಿ. ಕಾರ್ಡ್ ಮಾಡಿಸುವ ಕಾರ್ಯ ಕ್ಕೆ ಸರಕಾರಿ ಆಸ್ಪತ್ರೆಯಲ್ಲಿ ಪ್ರತಿ ಬುಧವಾರ ಮತ್ತು ಗುರುವಾರ ಚಾಲನೆ ನೀಡಲಾಗಿದ್ದು ಪಾಲಕರು ಇದರ ಪ್ರಯೋಜನ ಪಡೆಯಲು ವೈದ್ಯರಾದ ಡಾ. ಮಲ್ಲನಗೌಡರ ಕರೆ ನೀಡಿದರು.ಅವರು ಬುಧವಾರ ಶಾಲಾ ಮಕ್ಕಳ ಯು. ಡಿ. ಐ. ಡಿ...

ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು – ಡಾ.ಅನ್ನಪೂರ್ಣ ರಮೇಶ್

ಬೆಂಗಳೂರು: ನಗರದ ಬನಶಂಕರಿ ಮೂರನೇ ಹಂತದ ಹೊಸಕೆರೆ ಹಳ್ಳಿ ಫ್ಲೈ ಓವರ್‌ನ ಮೇಲ್ಭಾಗದಲ್ಲಿ ಮೊಬೈಲ್ ಬಸ್‌ನಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು .ಬನಶಂಕರಿ ಮೂರನೇ ಹಂತದ ಬಳಿ ಇರುವ ಕೆ.ಟಿ.ಎಂ ದ್ವಿಚಕ್ರ ವಾಹನ ದ ಶೋರೂಮ್ ಎದುರಿನಲ್ಲಿ ನಗರದ ವಿಜಯ ನಗರದ - ಅತ್ತಿಗುಪ್ಪೆ ಮುಖ್ಯರಸ್ತೆಯಲ್ಲಿ ಇರುವ ಲಯನ್ಸ್ ಬ್ಲಡ್ ಬ್ಯಾಂಕ್ -...

ಯೋಧ ಸುಬೇದಾರ ತಾಯ್ನಾಡಿಗೆ ಆಗಮನ

ಮೂಡಲಗಿ: ತಾಲೂಕಿನ ಖಾನಟ್ಟಿ ಗ್ರಾಮದ ವೀರಯೋಧ ಸುಬೇದಾರ ಮಾರುತಿ ಶಿವಲಿಂಗಪ್ಪ ಉದ್ದನ್ನವರ ಸುಧೀರ್ಘ 30 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸುತ್ತಿದ್ದಾರೆ. ಯಶಸ್ವಿ ಸೇವೆ ಸಲ್ಲಿಸಿರುವ ಪ್ರಯುಕ್ತ ಗ್ರಾಮಸ್ಥರಿಂದ ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಸ. 3 ಶುಕ್ರವಾರದಂದು ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು...

ಶ್ರೀಕೃಷ್ಣನ ಭಗವದ್ಗೀತಾ ಸಾರ ಸರ್ವಕಾಲಿಕ ಶ್ರೇಷ್ಠ

ಸವದತ್ತಿ: ಕೃಷ್ಣನ ಬಾಲ್ಯದ ಪವಾಡಗಳು, ಗೋಪಿಕೆಯರೊಂದಿಗಿನ ಒಡನಾಟ ಮತ್ತು ಕುರುಕ್ಷೇತ್ರ ಯುದ್ಧದಲ್ಲಿನ ಪ್ರಸಂಗಗಳು ಹಾಗೂ ಶ್ರೀಕೃಷ್ಣನ ಭಗವದ್ಗೀತೆಯ ಸಾರವನ್ನು ಮಕ್ಕಳಿಗೆ ಕಥೆಯ ರೂಪದಲ್ಲಿ ತಿಳಿಸಬೇಕು ಹಾಗೂ ನಾವುಗಳು ತಿಳಿದುಕೊಳ್ಳಬೇಕು ಎಂದು ಶಿಕ್ಷಕ ಎನ್.ಎನ್.ಕಬ್ಬೂರ ಅಭಿಪ್ರಾಯ ಪಟ್ಟರು.ಸವದತ್ತಿ ನಗರದ ಮಾಮನಿಕೆರೆ ರಸ್ತೆಯ ಬಸವೇಶ್ವರ ಬಡಾವಣೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group