spot_img
spot_img

ಸಮಕಾಲೀನ ಬದುಕಿಗೆ ಸ್ಪಂದಿಸಿದ ಕವಿ ‘ಚಂಪಾ’- ಸಾಹಿತಿ ಶಿವಾನಂದ ಬೆಳಕೂಡ ಅಭಿಪ್ರಾಯ

Must Read

- Advertisement -

ಮೂಡಲಗಿ: ‘ಚಂದ್ರಶೇಖರ ಪಾಟೀಲ ಅವರು ಸಮಕಾಲೀನ ಬದುಕಿಗೆ ಸ್ಪಂದಿಸಿದ ಸಂವೇದನಾಶೀಲ ಬರಹಗಾರರಾಗಿದ್ದರು’ ಎಂದು ಸಾಹಿತಿ ಶಿವಾನಂದ ಬೆಳಕೂಡ ಹೇಳಿದರು.

ಇಲ್ಲಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನ ಹಾಗೂ ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ‘ಪ್ರೊ. ಚಂದ್ರಶೇಖರ ಪಾಟೀಲ ಅವರ ಬಂಡಾಯ ಮನೋಧರ್ಮ’ ಕುರಿತು ಮಾತನಾಡಿದ ಅವರು, ಹೋರಾಟದ ಹಾದಿಯಲ್ಲಿ ಬೆಳೆದ ಕನ್ನಡ ಸಾಹಿತಿಗಳಲ್ಲಿ ವಿರಳ ಸಾಹಿತಿಯಾಗಿದ್ದರು ಎಂದರು.

ಅವರ ಕಾವ್ಯದ ಭಾಷೆಯಲ್ಲಿ ಉತ್ತರ ಕರ್ನಾಟಕದ ಕೆಚ್ಚು, ಜಾನಪದ ಸೊಗಡು, ಭಾಷೆಯ ಬಳಕೆ ಹೀಗೆ ಚಂಪಾ ಅವರ ಕಾವ್ಯಗಳು ವಿಭಿನ್ನವಾಗಿ ಗುರುತಿಸಿಕೊಂಡಿದ್ದವು. ತಮಗೆ ಅನಿಸಿದ್ದನ್ನು ಯಾರಿಗೂ ಅಂಜದೆ, ಅಳಕದೆ ಯಾರ ಮುಲಾಜಿಗೂ ನಿಲ್ಲದೆ ಹೇಳುವಂಥ ಎದೆಗಾರಿಕೆ ಇತ್ತು. ನವಿರಾದ ಬಂಡಾಯದ ಧ್ವನಿಯಲ್ಲಿ ಎಲ್ಲರನ್ನು ಎಚ್ಚರಿಸುವ ತಾಕತ್ತು ಅವರ ಕಾವ್ಯಕ್ಕಿತ್ತು ಎಂದರು.

- Advertisement -

ಚಂಪಾ ಅವರು ಕವಿ, ನಾಟಕಕಾರ, ವಿಮರ್ಶಕ, ಸಂಘಟನೆ, ಜನಪರ ಹೋರಾಟ, ಪತ್ರಿಕಾ ಸಂಪಾದನ ಹಾಗೂ ಆಡಳಿತಗಾರರಾಗಿ ಕಾರ್ಯನಿರ್ವಹಿಸಿ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಮಹಾನ್ ಪ್ರತಿಭೆಯಾಗಿದ್ದರು. ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಖುಷಿ ಕಂಡುಕೊಳ್ಳುವ ಹೃದಯವಂತ ಪ್ರಾಧ್ಯಾಕರಾಗಿದ್ದರು ಎಂದು ತಮ್ಮ ವಿದ್ಯಾರ್ಥಿ ದಿನಗಳ ಒಡನಾಟವನ್ನು ನೆನಪಿಸಿಕೊಂಡರು.

ಮೂಡಲಗಿ ತಾಲ್ಲೂಕು ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಮಾತನಾಡಿ, ಕನ್ನಡ ಸಾಹಿತ್ಯವು ಪ್ರಾಚೀನದಿಂದ ಹಿಡಿದು ಆಧುನಿಕವಾಗಿ ವಿಶ್ವಮಾನ್ಯವಾಗಿ ಬೆಳೆದಿದೆ. ರನ್ನ, ಪಂಪರಿಂದ ಕುವೆಂಪು ಸಮಕಾಲೀನ ಸಾಹಿತಿಗಳು ಕನ್ನಡ ಭಾಷೆಯನ್ನು ಬೆಳೆಸಿದ್ದಾರೆ. ಪ್ರತಿಯೊಬ್ಬರು ಸಾಹಿತ್ಯವನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿ.ಎಸ್. ಹಂಚಿನಾಳ ಅವರು ಮಾತನಾಡಿ, ಚಂದ್ರಶೇಖರ ಪಾಟೀಲ ಅವರು ಅಪಾರ ವಿದ್ಯಾರ್ಥಿ ಸಮೂಹವನ್ನು ಹೊಂದಿದ್ದರು. ವಿದ್ಯಾರ್ಥಿಗಳ ಬೆಳವಣಿಗೆಯನ್ನು ಸದಾ ಪ್ರೋತ್ಸಾಹಿಸುತ್ತಿದ್ದರು ಎಂದರು.

- Advertisement -

ಜ್ಞಾನದೀಪ್ತಿಯ ಕಾರ್ಯದರ್ಶಿ ಎ.ಎಚ್. ವಂಟಗೂಡಿ ಸ್ವಾಗತಿಸಿ, ವಂದಿಸಿದರು, ಸುರೇಶ ಲಂಕೆಪ್ಪನವರ ನಿರೂಪಿಸಿದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group