spot_img
spot_img

ರಾಹು, ಕೇತು – ಯಾರಿವರು ? ಏಕೆ ಪೂಜಿಸಲ್ಪಡುತ್ತಿದ್ದಾರೆ ಗೊತ್ತೇ ?

Must Read

- Advertisement -

💫 ಹಿಂದೆ ಅಮೃತವನ್ನು ಪಡೆಯಲು ದೇವತೆಗಳು ಮತ್ತು ಅಸುರರು ಮಂಥೀರ ಪರ್ವತಕ್ಕೆ ಸರ್ಪರಾಜ ವಾಸುಕಿಯನ್ನು ಹಗ್ಗವಾಗಿ ಸುತ್ತಿ ಕ್ಷೀರಸಾಗರವನ್ನು ಮಂಥನ ಮಾಡಿದಾಗ, ಬಾದೆಯನ್ನು ಸಹಿಸದ ವಾಸುಕಿಯು ಕಾರ್ಕೋಟಕ ವಿಷವನ್ನು ಉಗುಳಿದಾಗ ವಿಷಬಾದೆಯಿಂದ ಸೃಷ್ಟಿಯನ್ನು ರಕ್ಷಿಸುವ ಸಲುವಾಗಿ ಪರಮೇಶ್ವರರು ಅದನ್ನು ನುಂಗಿ ಸೃಷ್ಟಿಯ ರಕ್ಷಿಸಿ ನೀಲಕಂಠರಾದರು. ಹಾಗೆ ನಂತರ ಉತ್ಪತ್ತಿಯಾದ ಅಮೃತವನ್ನು ಪಡೆಯಲು ದೇವತೆಗಳು ಹಾಗೂ ಅಸುರರಲ್ಲಿ ಪೈಪೋಟಿ ಏರ್ಪಟ್ಟಿತು.

💫 ಈ ಸಮಯದಲ್ಲಿ ಈಗಾಗಲೇ ಬಲಿಷ್ಟರಾಗಿದ್ದ ಅಸುರರು ಅಮೃತ ಸಿಕ್ಕರೆ ಅದನ್ನು ಕುಡಿದು ಅವರು ಅಜಾರಾಮರರಾಗಿ ಮತ್ತಷ್ಟು ಲೋಕ ಕಂಟಕ ಏರ್ಪಡುವದನ್ನು ತಪ್ಪಿಸಲು ವಿಷ್ಣು ಭಗವಾನರು ಮೋಹಿನಿ ರೂಪದಲ್ಲಿ ಬಂದು ದೇವತೆಗಳನ್ನು ಮತ್ತು ಅಸುರರ ನಡುವೆ ಮಧ್ಯಸ್ಥಿಕೆ ವಹಿಸಿ ತಾನು ಅಮೃತವನ್ನು ಹಂಚುವೇನೆಂದು ಸಂಧಾನ ಮಾಡಿ ಅವರನ್ನು ಬೇರೆ ಬೇರೆ ಸಾಲುಗಳಲ್ಲಿ ಕೊಡಿಸಿ ಅಸುರರಿಗೆ ಆರಿಯದಂತೆ ಅಮೃತವನ್ನು ದೇವತೆಗಳಿಗೆ ಮಾತ್ರ ಹಂಚುತ್ತಿದ್ದಾಗ ಇದನ್ನು ಕಂಡುಕೊಂಡ ಅಸುರನೊಬ್ಬ ದೇವವೇಷ ಧರಿಸಿ ದೇವತೆಗಳ ಸಾಲಿನಲ್ಲಿ ಕುಳಿತು ಅಮೃತವನ್ನು ಸೇವಿಸಿದನು.

💫 ಇದನ್ನು ಅರಿತ ಸೂರ್ಯ ಮತ್ತು ಚಂದ್ರರು ವಿಷ್ಣುವಿಗೆ ವಿಷಯ ತಿಳಿಸಿದರು. ಆಗ ಮೋಹಿನಿ ರೂಪದಲ್ಲಿದ್ದ ಭಗವಾನ್ ವಿಷ್ಣುವು ಕೋಪದಿಂದ ತನ್ನ ಕೈಯಲ್ಲಿದ್ದ ಚಮಚದಿಂದ ಅಸುರನ ತಲೆಗೆ ಹೊಡೆದನು. ಆಗ ಆತನ ತಲೆ ತುಂಡಾಗಿ ನೆಲಕ್ಕೆ ಬಿದ್ದಿತ್ತು. ಆದಾಗ್ಯೂ, ಅಸುರನು ಈಗಾಗಲೇ ಅಮೃತವನ್ನು ಸೇವಿಸಿದ್ದರಿಂದ ಅವನ ದೇಹ ಮತ್ತು ತಲೆಯು ಜೀವಂತವಾಗಿ ಮುಂದುವರೆಯಿತು.

- Advertisement -

💫 ಹೀಗೆ ಕೆಳಕ್ಕೆ ಬಿದ್ದ ಅಸುರನ ತಲೆ ಭಾಗವು ಹಾವಿನ ದೇಹಕ್ಕೆ ಅಂಟಿಕೊಳ್ಳುತ್ತದೆ ಹಾಗೂ ರಾಹು ಭಗವಾನ್ ಆಗಿ ನವಗ್ರಹಗಳಲ್ಲಿ ಒಂದಾಯಿತು ಎಂದು ಹೇಳಲಾಗುತ್ತದೆ. ಹಾಗೆಯೇ ಅವನ ಉಳಿಕೆ ರುಂಡವಿಲ್ಲದ ಮುಂಡದ (ಲೆಯಿಂದ ಕೆಳಗಿನ ದೇಹಭಾಗ) ಭಾಗಕ್ಕೆ ಐದು ಹೆಡೆಗಳ ಹಾವಿನ ತಲೆ ಜೋಡಿಸಲ್ಪಟ್ಟಿತು. ಈವರನ್ನೇ ನವಗ್ರಹಗಳಲ್ಲಿ ಒಬ್ಬರಾದ ಕೇತುವಾಗಿ ನಾವು ಪೂಜಿಸುವುದು.

💫 ತಮಿಳು ನಾಡಿನ ಕುಂಭಕೋಣಂ ಸಮೀಪವಿರುವ ಕೇತು ಸ್ಥಳವಾದ ಕೀಜ್ಪೆರುಂಪಲ್ಲಂ ನಾಗನಾಥ ಸ್ವಾಮಿ ದೇವಾಲಯದಲ್ಲಿ ಕೇತು ಭಗವಾನ್ ದೇಹದೊಂದಿಗೆ ದೈವಿಕ ರೂಪದಲ್ಲಿ ಪೂಜಿಸಲ್ಪಡುವ ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿ ಶಿವನನ್ನು ನಾಗನಾಥೇಶ್ವರನೆಂದು ಪೂಜಿಸುವರು.

💫 ಕೀಜ್ಪೆರುಂಪಲ್ಲಂ ನಾಗನಾಥ ಸ್ವಾಮಿ ದೇವಾಲಯವು ಕೇತು ದೋಷವನ್ನು ನಿವಾರಿಸಿಕೊಳ್ಲಲು ಪ್ರಸಿದ್ಧವಾದ ಪರಿಹಾರ ದೊರೆಯುವ ಸ್ಥಳ ಆಗಿದೆ. ಕೇತುವಿನಿಂದ ಉಂಟಾಗುವ ಕೆಲವು ದುಷ್ಪರಿಣಾಮಗಳಾದ ನಾಗದೋಷ, ಕೇತುದೋಷ, ವಿವಾಹ ಅಡೆತಡೆಗಳು, ಮಕ್ಕಳಿಲ್ಲದಿರುವಿಕೆ, ಆಸ್ತಿ ವಿವಾದಗಳು, ಸಂಪತ್ತಿನ ಕೊರತೆ, ಹಿಂದಿನ ಜನ್ಮದ ದೋಷಗಳು, ಕೀಜ್ಪೆರುಂಪಲ್ಲಂ ನಾಗನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದಾಗ ಪರಿಹಾರವಾಗುತ್ತದೆ ಎಂದು ಭಕ್ತರು ನಂಬುತ್ತಾರೆ.

- Advertisement -

💫 ಇಲ್ಲಿ ಸೂರ್ಯಾಸ್ತದ ನಂತರ ವಾಯುವ್ಯ ದಿಕ್ಕಿಗೆ ಮುಖಮಾಡಿ ಕೇತು ಮೂಲ ಮಂತ್ರ ಮತ್ತು ಕೇತು ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಕೇತುವಿನ ದುಷ್ಪರಿಣಾಮವನ್ನು ನಿವಾರಿಸಲು ಮತ್ತು ಅವನ ದಯೆಯಿಂದ ಪ್ರಯೋಜನ ಪಡೆಯಲು ಸಹಾಯಮಾಡುತ್ತಾನೆ ಎಂಬ ನಂಬಿಕೆ ಇದೆ.

🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group