spot_img
spot_img

ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಬದಲಾವಣೆ ಸಾಧ್ಯ- ಈರಣ್ಣ ಕಡಾಡಿ

Must Read

- Advertisement -

ಘಟಪ್ರಭಾ: ಇಡೀ ದೇಶವನ್ನು ಸುತ್ತಾಡಿದ ಬಳಿಕ ನನಗಾದ ಅನುಭವ ಎಂದರೆ ಜನರ ಸಹಭಾಗಿತ್ವ ಇಲ್ಲದೇ ಈ ರಾಷ್ಟ್ರದಲ್ಲಿ ಯಾವ ಯೋಜನೆಯೂ ಯಶಸ್ವಿಯಾಗುವುದಿಲ್ಲ. ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಏನಾದರೂ ಬದಲಾವಣೆ ತರಲು ಸಾಧ್ಯ ಹೀಗಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಗ್ರಾಮಗಳು ಬದಲಾವಣೆಯ ಬೆಳಕು ಕಾಣಬೇಕು. ಪ್ರತಿ ಗ್ರಾಮಸ್ಥನೂ ತನ್ನ ಗ್ರಾಮದ ಪರಿಸರ ಮತ್ತು ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಫೆ-29 ರಂದು ಗೋಕಾಕ ತಾಲೂಕಿನ ಸಂಸದರ ಆದರ್ಶ ಗ್ರಾಮ ನಲ್ಲಾನಟ್ಟಿಯಲ್ಲಿ ಸನ್ 2022-23ನೇ ಸಾಲಿನ  ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಡಿ ಗದಾಡಿ ತೋಟದ ಶ್ರೀ ಕರೆಮ್ಮದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ, ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಇದು ಹಣದ ಯೋಜನೆ ಅಲ್ಲ. ಜನ ಹಿತದ ಯೋಜನೆ. ಎಲ್ಲವನ್ನೂ ಒಂದೇ ದಿನದಲ್ಲಿ ಬದಲಾವಣೆ ಮಾಡಿಬಿಡುತ್ತೇನೆ ಎಂದು ನಾನು ಹೇಳುವುದಿಲ್ಲ. ಈ ಯೋಜನೆಯಿಂದಲೇ ಎಲ್ಲ ಗ್ರಾಮಗಳು ಅಭಿವೃದ್ಧಿಯಾಗಿ ಬಿಡುತ್ತವೆ ಎಂದೂ ಹೇಳುವುದಿಲ್ಲ. ಮೊದಲು ಕೆಲಸ ಮಾಡೋಣ. ಕಾಲಕ್ರಮೇಣ ಬದಲಾವಣೆ ಮತ್ತು ಅಭಿವೃದ್ಧಿ ತಾವಾಗಿಯೇ ಗೋಚರಿಸುತ್ತವೆ ಎಂದು ಸಂಸದ ಈರಣ್ಣ ಕಡಾಡಿ ವಿಶ್ವಾಸ ವ್ಯಕ್ತಪಡಿಸಿದರು.

- Advertisement -

ಇದೇ ಸಂದರ್ಭದಲ್ಲಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಡಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ  ಕಾಮಗಾರಿಯನ್ನು ವೀಕ್ಷಿಸಿದರು.

ದಶರಥ ಪಾಟೀಲ, ಬಸು ಗದಾಡಿ, ಮಾರುತಿ ಮೆಳವಂಕಿ, ಭೀಮಪ್ಪ ಗದಾಡಿ, ಲಗಮಣ್ಣ ಕುಳ್ಳೂರ, ಪ್ರಕಾಶ ಗದಾಡಿ, ಪ್ರಕಾಶ ಜಾಗನೂರ, ಮಲ್ಲಪ್ಪ ಪೂಜೇರಿ, ಅಡಿವೆಪ್ಪ ಬಿಲಕುಂದಿ, ರಂಗಪ್ಪ ಕುಳ್ಳೂರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group