ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಹಾಗೂ ಪ್ರಥ್ವಿ ಫೌಂಡೇಶನ್ ಅಧ್ಯಕ್ಷರಾದ ಡಾ. ಹೇಮಾವತಿ ಸೊನೊಳ್ಳಿ ಅವರ ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಚೇತನ ಫೌಂಡೇಶನ್ ಹಮ್ಮಿಕೊಂಡ ಕಿತ್ತೂರು ಕರ್ನಾಟಕ ಉತ್ಸವದಲ್ಲಿ ಅವರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶ್ರೀಮತಿ ಸವಿತಾ ಕುಸುಗಲ್ಲ, ಶ್ರೀಮತಿ ಶಿಲ್ಪಾ ಗೋಡಿಗೌಡರ, ಡಾ ಪಂಚಯ್ಯ ಹಿರೇಮಠ,ಕು ವಿಜಯಲಕ್ಷ್ಮೀ, ಶ್ರೀಮತಿ ಲೀಲಾ ಮಹೇಶ, ಚಂದ್ರಶೇಖರ ಮಾಡಲಗೇರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.