ಸಿಂದಗಿ: 1857ರ ಸ್ವತಂತ್ರ ಸಂಗ್ರಾಮ ಹೋರಾಟಕ್ಕೆ ಪ್ರೇರಣೆ ನೀಡಿದ ಚೆನ್ನಮ್ಮಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಾರತದೇಶದ ಪರಂಪರೆಯನ್ನು ಮೆರೆಯಬೇಕಾಗಿರುವುದು ಅತ್ಯವಶ್ಯಕವಾಗಿದೆ ಎಂದು ಶಾಸಕ ಆಶೋಕ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಹಮ್ಮಿಕೊಂಡ ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸ್ವಾಮಿ ವಿವೇಕಾನಂದ ವೃತ್ತದ ಜೀರ್ಣೋದ್ದಾರ ಮಾಡುವ ಮಹದಾಸೆಯನ್ನು ಹೊಂದಿದ್ದೇನೆ. ಅಲ್ಲದೆ ಕಿತ್ತೂರಿನ ರಾಣಿ ಚೆನ್ನಮ್ಮಳ ಕಂಚಿನ ಮೂರ್ತಿಯನ್ನು ಅತೀ ಶೀಘ್ರದಲ್ಲೇ ಪ್ರತಿಷ್ಠಾಪನೆ ಮಾಡುವೆ ಎಂದು ಹೇಳಿದ ಅವರು, ಹೋರಾಟ, ಧೈರ್ಯ, ಸ್ವಾತಂತ್ರ, ಸ್ವಾಭಿಮಾನ ಎಂದರೆ ಏನು ಎಂಬುದನ್ನು 245 ವರ್ಷಗಳ ಹಿಂದೆಯೇ ತಿಳಿಸಿಕೊಟ್ಟ ಮಹಾನ್ ತಾಯಿ, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಮಾಡಿದ ಸಾಧನೆ, ಸಾಹಸ, ತ್ಯಾಗ, ಹೋರಾಟದ ಕುರಿತು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಸರ್ವರಿಗೂ ಮಹತ್ವದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಇಂಡಿ ನಾದ ಕೆಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಿದಂಬರ ಬಂಡಗಾರ ಉಪನ್ಯಾಸ ನೀಡಿ, ರಾಣಿ ಚೆನ್ನಮ್ಮ ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ, ಕರ್ನಾಟಕದ ಕಿತ್ತೂರಿನ ರಾಜಮನೆತನದ ಚೆನ್ನಮ್ಮ ರಾಣಿ. ಇಂದು ಕಿತ್ತೂರು ರಾಣಿ ಚೆನ್ನಮ್ಮ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. 1778 ರಲ್ಲಿ ಬೆಳಗಾವಿ ಜಿಲ್ಲೆಯ ಒಂದು ಪುಟ್ಟ ಗ್ರಾಮವಾದ ಕಾಕತಿಯಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದ ಮಹಾನ್ ತಾಯಿ, ಬ್ರಿಟೀಷರ ವಿರುದ್ಧ ಅವಳ ಕೆಚ್ಚೆದೆಯ ಪ್ರತಿರೋಧವು ನಾಟಕ, ಜಾನಪದ ಹಾಡಾಗಿ ಜನಪದರ ನಾಲಿಗೆಯ ಮೇಲೆ ಚೆನ್ನಮ್ಮ ನೆಲೆಸಿದ್ದಾಳೆ. ಎಲ್ಲೆಲ್ಲಿ ಹೋರಾಟಗಳು ನಡೆದಿದೆಯೋ ಅಲ್ಲಿ ಸೈನಿಕರು ಸತ್ತಿದ್ದು ಇತಿಹಾಸ ಆದರೆ ಒಬ್ಬ ಆಯ್‍ಎಎಸ್ ಅಧಿಕಾರಿ ಸತ್ತಿದ್ದು ಇತಿಹಾಸ ಸೃಷ್ಟಿಸಿದೆ. ಅಂತಹ ಮಹಾನ್ ತಾಯಿ ತ್ಯಾಗ, ಹೋರಾಟ, ತತ್ವಾದರ್ಶ, ಜೀವನ ಚರಿತ್ರೆ ಇಂದಿನ ಯುವಕರಲ್ಲಿ ತಿಳಿಸುವುದು ಮಹತ್ವದ ಕಾರ್ಯವಾಗಿದೆ ಎಂದರು.
ಆಸಂಗಿಹಾಳದ ಆರೂಢಮಠದ ಶಂಕರಾನಂದ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಇಓ ಆರೀಫ್ ಬಿರಾದಾರ, ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಲಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪೂರ, ನೌಕರರ ಸಂಘದ ಅಧ್ಯಕ್ಷ ಆಶೋಕ ತೆಲ್ಲೂರ, ಗುತ್ತಿಗೆದಾರ ಸೋಮನಗೌಡ ಬಿರಾದಾರ ವೇದಿಕೆ ಮೇಲಿದ್ದರು.
ಮುಂಬರುವ ದಿನಮಾನಗಳಲ್ಲಿ ಸಿಂದಗಿ ನಗರದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಸ್ವಾಮಿ ವಿವೇಕಾನಂದರ ಎರಡು ಕಂಚಿನ ಮೂರ್ತಿಗಳನ್ನು ಶೀಘ್ರದಲ್ಲಿಯೇ ಪ್ರತಿಷ್ಠಾಪಿಸುವೆ. ಈ ಎರಡು ಮೂರ್ತಿಗಳನ್ನು ಒಂದೇ ದಿನ ಉದ್ಘಾಟನೆ ಮಾಡಿ ಜನರಿಗೆ ಸಮರ್ಪಣೆ ಮಾಡುವ ವಿಚಾರವನ್ನು ಹೊಂದಿದ್ದೇನೆ.
-ಅಶೋಕ ಮನಗೂಳಿ, ಶಾಸಕರು.
ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಸ್ವಾಗತಿಸಿದರು. ಜ್ಞಾನ ಭಾರತಿ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು, ಬಸವರಾಜ ಸೋಂಪುರ ನಿರೂಪಿಸಿ ವಂದಿಸಿದರು.
ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಜಯಂತಿ ಆಚರಣೆ:
ಸಿಂದಗಿ; ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಿತ್ತೂರರಾಣಿ
ಚೆನ್ನಮ್ಮಳ 245ನೆಯ ಜಯಂತ್ಯುತ್ಸವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಪ್ರಥಮ ದರ್ಜೆ ಗುತ್ತಿಗೆದಾರ ಸೋಮನಗೌಡ ಬಿರಾದಾರ, ಕಾಳಪ್ಪ ಕಲಬುರ್ಗಿ, ಕಲ್ಲಪ್ಪ ಶಾಬಾದಿ, ಚೇತನ ಭಾಸಗಿ, ನಿತ್ಯಾನಂದ ಯಲಗೋಡ, ಸಂಗನಗೌಡ ಪಾಟೀಲ, ಕಾರ್ಯದರ್ಶಿ ಆನಂದ ಶಾಬಾದಿ, ಆರತಿ ಖೈನೂರ, ಸಿದ್ದಲಿಂಗಪ್ಪ ಕೋರವಾರ, ಮಲ್ಲನಗೌಡ ಪಾಟೀಲ ಇಬ್ರಾಹೀಂಪುರ, ಸುರೇಶ ಮಳಲಿ, ಚಂದ್ರಶೇಖರ ನಾಗರಬೆಟ್ಟ, ಮುತ್ತು ಶಾಬಾದಿ, ದಾನಪ್ಪಗೌಡ ಚೆನಗೊಂಡ, ರಮೇಶ ಯಾಳಗಿ, ರಾಮು ಯಳಮೇಲಿ, ಆರ್.ಡಿ.ದೇಸಾಯಿ, ಶಿರಸ್ತೆದಾರ ಜಿ.ಎಸ್.ರೋಡಗಿ, ಸುರೇಶ ಮ್ಯಾಗೇರಿ, ಕಂದಾಯ ನಿರೀಕ್ಷಕ ಆರ್.ಎ ಮಕಾಂದಾರ, ನಿಖಿಲಅಹ್ಮದ್ ಖಾನಾಪುರ ಸೇರಿದಂತೆ ಸಮಾಜದ ಹಿರಿಯರು, ಪ್ರಮುಖರು ಸೇರಿದಂತೆ ಅನೇಕರಿದ್ದರು.